ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
ʼಕೊನೆಯ ತಿರುಗಾಟʼ


ತ್ರಿಲೋಕ ಸಂಚಾರಿ ನಾರದರಿಗೋ
ಲೋಕ ಹಿತ ತಿರುಗಾಟವೇ ಒಂದು ಕೆಲಸ
ಆಗಾಗ ವಿರಾಮ ವೈಕುಂಠವಾಸ
ನನಗಾದರೋ ಭೂಲೋಕದಲ್ಲಿ
ಹೊಟ್ಟೆ ಪಾಡು ಕೆಲಸಕ್ಕೆ ಊರೂರು ತಿರುಗಾಟ
ನಿವೃತ್ತಿಯಲ್ಲಿ ಎಲ್ಲಿ ಆರಾಮ ವಾಸ
ಇದ್ದಲ್ಲೇ ಅರಮನೆ ತಿಂದದ್ದೇ ಮೃಷ್ಟಾನ್ನ ಭೋಜನ
ಪ್ರೀತಿ ಪ್ರೇಮ ರಾಗ ದ್ವೇಷ ಹುಟ್ಟಿ ಬೆಳೆಯುವ
ಮುನ್ನ ಬಂತು ಇನ್ನೊಂದು ಜಾಗಕ್ಕೆ ಪಯಣ
ಉಸಿರಾಟ ಹಾರಾಟ ಹೋರಾಟ ಬಸಿರಾಟ
ಚಲನೆ ತಿರುಗಾಟ ಜೀವ ಜಂತುಗಳ ಬಡಿದಾಟ
ಎಂದೂ ಮುಗಿಯದ ಹುಟ್ಟು ಸಾವಿನ ಪರಿಪಾಠ
ಗಾಣವ ಹೊತ್ತ ಎತ್ತಿಗೆ ಇದ್ದಲ್ಲೆ ತಿರುಗಾಟ
ಸೊಕ್ಕಿ ಬೆಳೆದ ಗೂಳಿಗೆ ಇನ್ನೊಬ್ಬರ ಹಿತ್ತಲಿನಲ್ಲಿ
ನಗರದ ರಸ್ತೆಗಳಲ್ಲಿ ಧೂಳೆಬ್ಬಿಸುವ ತಿರುಗಾಟ
ಮೋಜು ಮನರಂಜನೆಗೆ ವಿಶ್ವ ಪರಿಯಟನೆ
ಕುರಿಯ ಹಿಂಡುಗಳ ಹಿಂದೆ ಹಿಂಬಾಲಕರ ಚಲನೆ
ದೇಶದಾದ್ಯಂತ ವಲಸೆ ಮಾರಿಗಳ ಚಲನವಲನೆ
ನಭೋ ಮಂಡಲಗಳಿಗೂ ಚಲನೆಪರಿಬ್ರಮಣೆ
ಧರ್ಮಾರ್ಥಕಾಮ ಮೋಕ್ಷಕ್ಕೆ ಚಾತುರ್ಮಾಸ
ಬೀಡು ಬಿಟ್ಟಲ್ಲೇ ಊಟ ಆಟ ಮಾನ ಮನ್ನಣೆ
ಅಂತೂ ಇಂತೂ ಬಂದೇ ಬಂತು ಕೊನೆಯ ತಿರುಗಾಟ ನಿಶ್ಚಲ ನಿರ್ಮಲ ನಿರಾಮಯ
ಹುಟ್ಟೂರು ಸ್ವರ್ಗದ ಸ್ವಚ್ಛಂದ ವಾಸ.
—————-
ಎಸ್ ವಿ ಹೆಗಡೆ




ಹುಟ್ಟುಉರು ವಾಸ ನೆಮ್ಮದಿಯ ಚೈತನ್ಯ ಬರಹಕೆ ಇನ್ನಷ್ಟು ಸ್ಪೂರ್ತಿ ತರಲಿ, ಎಸ್ವೀ.
ರವಿ ಬಳೆ
ನಿಜ
Very nice! Enjoy life at native!