ಕಾವ್ಯ ಸಂಗಾತಿ
ಜಯಂತಿ ಕೆ ವೈ
ʼಬದುಕಬೇಕು ಮನುಷ್ಯರ ಹಾಗೆʼ


ತೋರಿಕೆಯ ಮಾತುಗಳಿಲ್ಲದೆ ತುಟಿಯಂಚಿನ ಕೃತಕ ನಗುವಿಲ್ಲದೆ
ಮುದ್ದುಮುದ್ದಾದ ಅಕ್ಕರೆಯ ಸಹಜತೆಯೇ ತುಂಬಿ ಬಂದಂತೆ
ಬದುಕಬೇಕು ಮನುಷ್ಯರ ಹಾಗೆ
ಭೂಮಿ ಮೇಲಿನ ಪ್ರೀತಿಯನೆಲ್ಲ ಆವಾಹಿಸಿ
ಇನ್ನೊಬ್ಬರ ನೋವಿಗೆ ಕನಲಿ
ಬದುಕಬೇಕು ಮನುಷ್ಯರ ಹಾಗೆ
ಕೊಂಕಿನ ಸೋಂಕಿಲ್ಲದೆ
ಕಪಟತನವಿಲ್ಲದೆ
ಮುಖವಾಡಗಳಿಲ್ಲದೆ
ಬದುಕಬೇಕು ಮನುಷ್ಯರ ಹಾಗೆ
ಅದೇ ತಾನೆ ಅರಳಿದ ಹೂವಿನ ಹೊಸತನ
ನಗುವ ಕಂದನ ತಾಜಾತನ
ಕಾಪಿಟ್ಟುಕೊಳ್ಳಬೇಕು
ಬದುಕಬೇಕು ಮನುಷ್ಯರ ಹಾಗೆ
ಮನದ ಕೊಳಕು ತೊಳೆಯಬೇಕು
ಪ್ರೀತಿಯೊಂದೇ ಉಳಿಯಬೇಕು
ಆಗಸವೇ ಮಿತಿಯಾಗಬೇಕು
ಬದುಕಬೇಕು ಮನುಷ್ಯರ ಹಾಗೆ
ಗೋಡೆಗಳ ಕಟ್ಟುವ ಮಾತಿನ ಸಮರ ಬೇಡ
ದ್ವೀಪಗಳಂತಾಗಿಸುವ ಭಾವನೆಯೂ ಬೇಡ
ಮುಗ್ಧಮನದ ಬೆಚ್ಚನೆಯ ಭಾವದಾಸರೆಯೊಂದಿಗೆ
ಬದುಕಬೇಕು ಮನುಷ್ಯರ ಹಾಗೆ…
ಜಯಂತಿ ಕೆ ವೈ




ಅದ್ಭುತವಾದ ರಚನೆ