ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನೋಶರಧಿಯಲಿ
ಅಡಗಿದ ಭಾವಚಿಪ್ಪುಗಳು
ತವಕಿಸುತಿಹವು
ಅಲೆಯಾಗಿ  ತೇಲಲು..

ಪಕ್ವಗೊಳುತಿಲ್ಲ
ಅದೇಕೋ ಚಿಪ್ಪುಗಳು
ಭಾರ ಮನದಿಂದ
ಎದ್ದೇಳಲಾರದೆ…

ಚೈತನ್ಯದ ಬೆಳಕು
ಅಂತರಂಗದೊಳು
ಇಳಿಯದಾಗಿದೆ
ಮನದಾಳಕೆ..

ಬಿಡಿಸಲಾಗದೆ
ಹೆಣಗಾಡುತಿವೆ
ಚಿಪ್ಪಿನೊಳಗಣ
ಭಾವಕಣಗಳು..

ಕಾದು ಕುಳಿತಿವೆ
ಸ್ವಾತಿ ಹನಿ ಹನಿಗೆ
ಮುತ್ತಾಗಲು;
ಒಲವಿನಲೆಯಾಗಿ
ತೇಲಿ ಬರಲು…


About The Author

2 thoughts on “ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ʼಅಂತರಂಗದಲೆ….ʼ”

Leave a Reply

You cannot copy content of this page

Scroll to Top