ಕಾವ್ಯ ಸಂಗಾತಿ
ಶಮಾ ಜಮಾದಾರ
ಗಜಲ್

ಕೂಡುವ ಕಾತರ ಕಾಡುತಿರಲು ಹುಡುಕಲು ಹೊರಟಿರುವೆ
ಮನದಿ ಮೂರುತಿ ಮೂಡುತಿರಲು ಕೆಡುವಲು ಹೊರಟಿರುವೆ
ತಡೆಯುವ ವಾಂಛೆಗೆ ಪುಟಿದು ಬರುವ ಬಲವೇಕಿಹುದೋ
ಎದೆಯ ಗೋಡೆಯು ತಡೆಯುತಿರಲು ದಾಟಲು ಹೊರಟಿರುವೆ
ನೋಡುವ ನೋಟದಿ ಕಂಡಿಹೆನಲ್ಲ ಮನಸಿನ ಮಂಡಿಗೆ
ಕಡಲ ಧ್ಯಾನವು ಕರೆಯುತಿರಲು ಸೇರಲು ಹೊರಟಿರುವೆ
ತಡುವಿದ ಗೂಡಿನ ಮಧುವಕ್ಕಿಯ ಕೋಪಕೆ ಅಂಕೆಯಿಹುದೇ
ತೇಯ್ದಗಂಧ ಸೂಸುತಲಿರಲು ಮುಡಿಯಲು ಹೊರಟಿರುವೆ
ಹೆಸರನು ಉಲಿದಿದೆ ಬೆರೆತಿಹ ಉಸಿರು ಅಗಲಬಹುದೇನು
ಪ್ರೀತಿ ಶಮೆಯು ಬೆಳಗುತಿರಲು ಕಾಯಲು ಹೊರಟಿರುವೆ

ಶಮಾ ಜಮಾದಾರ




ಧನ್ಯವಾದಗಳು ಸರ್ ಪ್ರಕಟಣೆಗೆ