ಕಾವ್ಯ ಸಂಗಾತಿ
ನಾರಾಯಣ ರಾಠೋಡ
ಹಗಲು ಗನಸಿನ ಹುಡುಗಿ

ಬೇಡವೆಂದರೂ ಬರುವ ಕನಸುಗಳು
ಶುರುವಾಗುವ ಮನಸಿನ ತಳಮಳಗಳು
ನಾನೇಕೆ ಹೀಗೆ? ಬಿಡಿಸಲಾಗದ ಭಾವನೆಗಳು
ನನ್ನಲ್ಲೇನೊ ಆಗಿರುವ ಬದಲಾವಣೆಗಳು
ಹದಿನಾರರ ಈ ಮನ
ಕ್ಷಣ ಕ್ಷಣವೇ ಕಳೆದ್ಹೋಗುತ್ತಿರುವ ಸುಂದರ ಕ್ಷಣ
ತರಗತಿಯಲ್ಲೂ ಮರೆತುಹೋದ ಮೈಮನ
ಪಾಠ ಆಲಿಸದೆ ಟೀಚರನಿಂದಾದ ಅವಮಾನ
ಕಾಣುವುದು ಜಗವು ಭ್ರಮಾಲೋಕದಂತೆ
ಬೇಡವೆಂದರೂ ಸುಮ್ಮನೆ ಕಾಡುವ ಚಿಂತೆಗಳು
ಕಣ್ಮುಂದೆ ಹಾಯ್ದು ಹೋಗುವ ಚಿತ್ರಗಳು
ಅದಾರೋ ಹಿಂಬಾಲಿಸುವ ವಿಚಿತ್ರಗಳು
ಉಣ್ಣುವಾಗಲೂ ತಟ್ಟೆ ಬಿಟ್ಟು ನೆಲ ಸವರಿದ ಕೈಗಳು
ಅಮ್ಮ ಗದರಿಸಿ ಬೈದ ಬೈಗಳು
ಯಾವುದೋ ಗುಂಗಲ್ಲಿ ಅಪ್ಪನ ಮುಖಕ್ಕೆ ಚೆಲ್ಲಿದ ನೀರು
ನನ್ನದು ಮರೆತು ಅಣ್ಣನ ಬ್ರಶನಿಂದ ಹಲ್ಲುಜ್ಜಿ ಬೈಸಿಕೊಂಡಿದ್ದು
ಮುಖಕ್ಕೆ ಹಚ್ಚುವ ಕ್ರೀಮು ತಲೆಗೆ ಹಚ್ಚಿದ್ದು
ನನ್ನ ಬದಲು ತಮ್ಮನ ಪ್ಯಾಂಟ್ ಹಾಕಿ ನಕ್ಕಿದ್ದು
ವ್ಯಾನಿಟಿಬಿಟ್ಟುಅಪ್ಪನಬ್ಯಾಗುಕೊರಳಿಗೇರಿಸಿಕೊಂಡಿದ್ದು
ಭಾನುವಾರವೂ ಕಾಲೇಜಿಗೆ ಹೋಗಿ ಬಂದದ್ದು
ನಾರಾಯಣ ರಾಠೋಡ





ನಾರಾಯಣ. ಆರ್. ರಾಠೋಡ. ಕವಿಗಳು ಬರೆಯುವ. ಕವನ ಗಳು ವಿಶೇಷತೆ ಇರುತ್ತದೆ.ಹಳಷ್ಟು ಸೊಗಸಾಗಿದೆ ಈ ಕವಿತೆ. ಇಂದಿನ ದಿನಮಾನದ. ಮಕ್ಕಳಲ್ಲಿ ಕಾಣಿಸಿಕೊಂಡಿರುವ. ಗಡಿಬಿಡಿ ವಯಸ್ಸಿನಲ್ಲಿ. ಆಗುವ ಆತಂಕ.ಇವನ್ನೆಲ್ಲ ನೋಡಿದಾಗ ನಿಜವಾಗಲೂ ಅರ್ಥ ಗರ್ಭಿತ ವಾದ ಕವನ ವಾಗಿದೆ. ಸೂಪರ್
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್ /ಮೇಡಮ್
ನಾರಾಯಣ ರಾಠೋಡ