ಕಾವ್ಯಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನಿನ್ನ ನೆನಪಾಯಿತೀಗʼ


ಏಕೋ ನಿನ್ನ ನೆನಪಾಯಿತೀಗ ನನಗೆ
ನಾನು ನಿನ್ನ ಜೊತೆ ಇದ್ದ ಅತಿ ಸಲುಗೆ!
ಮರೆಯಲಾರೆ ನಾನೆಂದೂ ಆ ಘಳಿಗೆ
ನೀನು ಕೊಟ್ಟ ಮೊದಲ ಸಿಹಿ ಅಪ್ಪುಗೆ!!
ನನ್ನ ಮರೆತು ಮುಡಿಯದಿರು ಮಲ್ಲಿಗೆ
ಬರುವೆ ಕನಸು ಕಾಣುತ ನಿನ್ನ ಬಳಿಗೆ!
ಪೂರ್ಣ ಹುಣ್ಣಿಮೆ ದಿನ ಬರದಿರು ಹೊರಗೆ
ನಿನ್ನ ಕಂಡು ಚಂದಿರ ನಾಚುವನು ಮೆಲ್ಲಗೆ!!
ಎಲ್ಲಿ ಬಿಚ್ಚದಿರು ನಿನ್ನ ಮುಡಿ ಕೇಶದ ನೆರಿಗೆ
ಕ್ಷಣ ಕರಿ ಮೋಡ ಕವಿದಂತೆ ಈ ಭುವಿಗೆ!
ಹಸಿರು ಸೊಬಗಿನಲಿ ಖುಷಿ ತಂದೆ ಮನಸ್ಸಿಗೆ
ನಾ ಸೋತೆ ನಿನ್ನ ಸೌಂದರ್ಯದ ಆಕರ್ಷಣೆಗೆ!!
ಬಳಕುವ ಬಳ್ಳಿಯಂತೆ ಆ ನಿನ್ನ ನಡಿಗೆ
ನನ್ನ ನೋಡಿ ನೀ ನಕ್ಕಿದೆ ಮುಗುಳು ನಗೆ!
ಮಧುರ ಪ್ರೀತಿಯಲಿ ನಮ್ಮಿಬ್ಬರ ಬೆಸುಗೆ
ಚಂದ್ರನ ಬೆಳಕು ತಾಕಿದೆ ಮಿಲನದ ವೇಳೆಗೆ!!
ಎಂ. ಕಾವ್ಯ ಪ್ರಸಾದ್



