ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್

ನನ್ನ ನೀನು ತೊರೆವ ಮುನ್ನ ಹೇಳಿ ಹೋಗು ಕಾರಣ
ನಡೆದುದೆಲ್ಲ ಮರೆವ ಮುನ್ನ ಹೇಳಿ ಹೋಗು ಕಾರಣ
ಅಚ್ಚು-ಮೆಚ್ಚೆಂದು ಬಂಧವ ಬಿಚ್ಚಿಟ್ಟು ಹೊರಟಿರುವೆ
ಇಲ್ಲದ ಹುಚ್ಚು ಹಿಡಿವ ಮುನ್ನ ಹೇಳಿ ಹೋಗು ಕಾರಣ
ಲೋಕದ ತೂಕವಿರದ ಮಾತಿಗೆ ನಾ ಕಿವಿಕೊಟ್ಟವನಲ್ಲ
ಮರುಮಾತು ಆಡುವ ಮುನ್ನ ಹೇಳಿ ಹೋಗು ಕಾರಣ
ನಿನ್ನನೇ ಕನವರಿಸಿ ಕಕ್ಕಾಬಿಕ್ಕಿಯಾಗಿ ಬಿಕ್ಕುತಿದೆ ಜೀವ
ಕಣ್ಣ ಕಂಬನಿ ಬತ್ತುವ ಮುನ್ನ ಹೇಳಿ ಹೋಗು ಕಾರಣ
ಬಿತ್ತಿದಂತೆ ಬೆಳೆಯಲಿಲ್ಲ ಕುಂಬಾರನೆದೆನೆಲದಿ ಫಸಲು
ಅಸಲಿಯತ್ತು ಅಳಿವ ಮುನ್ನ ಹೇಳಿ ಹೋಗು ಕಾರಣ
ಎಮ್ಮಾರ್ಕೆ




