ಮಕ್ಕಳ ಸಂಗಾತಿ
ಹಮೀದಾ ಬೇಗಂ ದೇಸಾಯಿ.
ಮಕ್ಕಳ ಪದ್ಯ-
ʼಸಂತೆಗೆ ಹೋಗುವೆʼ

.
ಅಪ್ಪನಂತೆ ಹಿರಿಯನಾಗಿ
ಸಂತೆ ಪೇಟೆ ಮಾಡುವೆ
ಕಿಸೆಯ ತುಂಬ ನೋಟು ತುಂಬಿ
ಡೌಲು ಮಾಡಿ ನಡೆಯುವೆ.
ಕಾಯಿಪಲ್ಲೆ ಉಪ್ಪು ಎಣ್ಣೆ
ಬೆಲ್ಲ-ಗಿಲ್ಲ ತರುವೆನು
ಚೀಲ-ಗೀಲ ಎಲ್ಲ ಕೂಡಿ
ಹೆಗಲ ಮೇಲೆ ಹೊರುವೆನು..
ಅಜ್ಜಗೆಂದು ಎಲೆ-ಅಡಿಕೆ
ಕಟ್ಟಿಕೊಂಡು ಬರುವೆನು
ಅವ್ವಗೊಂದು ಮಲ್ಲಿಗೆಯ
ಹೂವ ಮಾಲೆ ತರುವೆನು..
ಶಾಲೆಗೆ ಹೋಗಲೆಂದು
ಪಾಟಿ-ಬಳಪ ತರುವೆನು
ಗುರುಗಳು ಹೇಳಿದಂತೆ
ರ-ಠ-ಈ-ಕ ಬರೆವೆನು..

ಹಮೀದಾ ಬೇಗಂ ದೇಸಾಯಿ




ಸುಂದರ ಶಿಶುಗೀತೆ.
ಸಂತೆಗೆ ಹೋಗುವೆ ಕವನ ಕೃತಿಚೌರ್ಯ ಆಗಿದೆ ಮೂಲ ಗುರುಪಾದ ಸ್ವಾಮಿ ಹಿರೇಮಠ ಅವರ ಹೂದೋಟ ಕವನ ೧೯೬೧ ಸಂಕಲನದ ಪದ್ಯ ಮತ್ತು ಇದು ಸಾಹಿತ್ಯ ಅಕೆಡೆಮಿ ಬಹುಮಾನಿತ ಕೃತಿ ಎರಡು ನುಡಿ ಯಥಾವತ್ತಾಗಿ ಬರೆದು ಮುಂದೆ ಎರಡು ನುಡಿ ಜೋಡಿಸಿ ಕೃತಿಚೌರ್ಯ ಎಸಗಿದ್ದಾರೆ
ಇಂತಹ ಕಾರ್ಯ ಮಾಡುವವರನ್ನು ಸಾಹಿತ್ಯ ವಲಯ ದೂರವಿಡಲಿ.
Stop copying, it was copied from
“Hudot” which is written by gurupadswami hiremath