ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬುದ್ಧನೇಕೆ ನಕ್ಕ
ಪಾಪ ಅವನಿಗೂ
ಹೆಂಡರು ಮಕ್ಕಳು
ಬಿಟ್ಟು ಹೊರಟ
ಕಾಡಿಗೆ
ಅನುಭವ ಅರಿವಿನ
ಹುಡುಕಾಟ

ಸತ್ಯ ಸಮತೆ ಶಾಂತಿ
ಪ್ರೀತಿ ಅವನ ಮಂತ್ರ
ಬೋಧಿ ವೃಕ್ಷದ ಕೆಳಗೆ
ಜ್ಞಾನ ದೀವಿಗೆ ಜ್ಯೋತಿ
ಅಹಿಂಸಾ ಮೂರ್ತಿ
ವಿಶ್ವಕ್ಕೆ ಪಸರಿಸಿದನು
ಮಾನವ ಪ್ರೀತಿ

ಪೋಖ್ರಾನ್ ನಲ್ಲಿ
ಅಣು ಬಾಂಬ್ ಪರೀಕ್ಷೆ
ಕಂದಹಾರದಲ್ಲಿ ಉಗ್ರರ
ಅಟ್ಟ ಹಾಸ ದಾಳಿ
ತುಂಡಾಗಿ ಬಿದ್ದ ಬುದ್ಧ
ಸಮರಸದ ತೋಟದಲ್ಲಿ
ರಕ್ತ ಕೋಡಿ ಹರಿಯಿತು

ಭಾಷಣ ಲೇಖನಕೆ
ವಸ್ತುವಾದ ಸಿದ್ಧಾರ್ಥ
ಬುದ್ಧ ಶರಣಂ ಗಚ್ಛಾಮಿ
ಕೆಡುವಿದರು ಸನಾತನಿಗಳು
ವಿಹಾರ ಬುದ್ಧ ಮೂರ್ತಿ
ಭಾರತ ಬಿಟ್ಟ ಮಂದಹಾಸ
ಬುದ್ಧನೇಕೆ ನಕ್ಕ ನನ್ನ ಪ್ರಶ್ನೆ


About The Author

2 thoughts on “ಬುದ್ದನೇಕೆ ನಕ್ಕ? ಡಾ.ಶಶಿಕಾಂತ ಪಟ್ಟಣ ರಾಮದುರ್ಗ”

  1. ಸನಾತನಿಗಳು ಭೌಧ ವಿಹಾರ ಹಾಗೂ ಬುದ್ಧನ ಮೂರ್ತಿಗಳನ್ನು ಕೆಡವಿದ ಬಗ್ಗೆ ಐತಿಹಾಸಿಕ ದಾಖಲೆಗಳು ಏನಾದರೂ ಇದ್ದರೆ ದಯವಿಟ್ಟು ಒದಗಿಸಿ. ಇಂದಿಗೂ ಸ್ವಚ್ಛಂದವಾಗಿ, ನೆಮ್ಮದಿಯಿಂದ ನಮ್ಮ ನಡುವೆಯೇ(ಉದಾ: ಮುಂಡಗೋಡ) ಬದುಕುತ್ತಿರುವ ಬೌದ್ಧರಿಗೆ ಸನಾತನಗಳಿಂದ ಯಾವ ತೊಂದರೆಯೂ ಆಗುತ್ತಿಲ್ಲ. ಇದರ ಬಗ್ಗೆಯೂ ನಿಮ್ಮ ಸ್ಪಷ್ಟನೆ ನೀಡಿ.

  2. ಅಫ್ಘಾನಸ್ತಾನ, ಪಾಕಿಸ್ತಾನ, ಚೀನಾದಲ್ಲಿ ಬೌದ್ಧ ರನ್ನು ಕೊಲೆ ಮಾಡಿದವರು ಸ್ತೂಪಗಳನ್ನ ನಾಶ ಮಾಡಿದವರು ಯಾರು? ಅಲ್ಲಿ ಸನಾತನಿಗಳು ಇಲ್ಲ

Leave a Reply

You cannot copy content of this page

Scroll to Top