ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ನೀನು ಗೆಳೆಯ ಗೆಳತಿ
ಬಾಳ ಪ್ರೀತಿಯ ಹೂರಣ
ಭಾವ ಬೆಸುಗೆ ಒಳಗೆ ಹೊರಗೆ
ಸ್ನೇಹ ಪ್ರೇಮದ ಬಂಧನ .
ಹಸಿರು ಚಿಗುರೆಲೆ ಚೈತ್ರ್ಯ ಬಂದಿದೆ.
ನಗೆಯ ನಲುಮೆಯ ತೋರಣ .
ಜೇನುಗೂಡು ಸವಿಯ ತಂದಿದೆ.
ಸ್ಫೂರ್ತಿ ನಿನ್ನಯ ಚುಂಬನ .
ಕಾಳ ಕತ್ತಲೆ ಕಳೆದು ಚೆಲ್ಲಿದೆ ,
ಹೊಸ ಬೆಳಕಿನ ನಂದನ .
ಮನಕೆ ಮನವು ತೀಡಿಕೊಂಡಿದೆ.
ಮಧುರ ಪರಿಮಳ ಚಂದನ .
ಕರುಣೆ ಕಾವ್ಯ ಕವನ ಹೊಸೆವುದು
ಮೌಲ್ಯ ತುಂಬಿದ ಚಿಂತನ .
ನನಗೆ ನೀನು ನಿನಗೆ ನಾನು
ಬದುಕು ನೆಲೆ ಸೆಲೆ ಕುಂದನ .
ಅಗೆದು ಬಗೆದು ಹುಡುಕಿ ನೋಡುವ
ಸಹನೆ ಶಾಂತಿ ಚೇತನ .
ದೂರ ದಾರಿ ಹೆಜ್ಜೆ ಹಾಕುವ
ಮುಕ್ತಿ ಕಾಣುವ ಕಾನನ .
ಭವರವಿರಲಿ ಬೆವರತರಲಿ
ಸಮರಸವೇ ಜೀವನ .

——————–

About The Author

2 thoughts on ““ನಾನು ನೀನು” ಕವಿತೆ ಡಾ .ಶಶಿಕಾಂತ ಪಟ್ಟಣ ರಾಮದುರ್ಗ”

  1. ಸಮರಸವೇ ಜೀವನ ಎನ್ನುವ ಆಶಯದ ಕವನ ಸುಂದರವಾಗಿ ಮೂಡಿ ಬಂದಿದೆ

    ಸುತೇಜ

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಸುಂದರ ಪ್ರೇಮ ಕವನ

Leave a Reply

You cannot copy content of this page

Scroll to Top