ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂಡವಾಳ ಹೂಡುವವನೆ ಮಾಲೀಕ
ಬೆವರ ಹನಿ ಹರಿಸಿ ದುಡಿಯುವನು ಕಾರ್ಮಿಕ
ದುಡಿಯುವುದೇ ಇವನ ನಿಜವಾದ ಕಾಯಕ
ದುಡಿಮೆಯಿಂದ ಬದುಕು ಆಶಾದಾಯಕ

ಕಾರ್ಮಿಕ ನ ಬೆವರ ಹನಿಗಿರಲಿ ಬೆಲೆ
ಶ್ರಮವಹಿಸಿ ದುಡಿಯುವ ಕಾರ್ಮಿಕನಿಗೆ ಕಲ್ಪಿಸಿ ಕೊಡಿ ಒಂದು ನೆಲೆ
ಕಾರ್ಮಿಕರ ಬದುಕಿಗೆ ಬರುವುದು ಒಂದು ಕಳೆ
ಅವರ ಮತ್ತು ನಿಮ್ಮ ಜೀವನ ಹಚ್ಚ ಹಸಿರಾಗಿರುವುದು

ಕಾರ್ಮಿಕನ ಮೇಲಿರಲಿ ಪ್ರೀತಿ
ಪ್ರತಿ ಕಾರ್ಮಿಕರನ್ನು ಕಾಣಿ ಮಾಲೀಕರ ರೀತಿ
ಕಾರ್ಮಿಕರ ಬದುಕಿಗೊಂದು ಕಲ್ಪಿಸಿ ಕೊಡಿ ನೀತಿ
ಅವರ ಕೆಲಸಕ್ಕೆ ಇರಲಿ ಮಿತಿ

ಕಾರ್ಮಿಕರ ನೋವು ನಲುವಿಗೆ ಸ್ಪಂದಿಸಿದರೆ ಕಾರ್ಮಿಕ ನಾಯಕ
ಕಾರ್ಮಿಕರ ಮನದಲ್ಲಿ ಉಳಿದರೆ ಜನನಾಯಕ
ಕಾಯಕವೇ ಕೈಲಾಸ ಎಂದುಕೊಂಡರೆ ಆಗುವನು ಮಾಲಿಕ
ಅವನು ಕಟ್ಟು ಕೊಡುವನು ಒಂದಷ್ಟು ಜನರಿಗೆ ಬದುಕ

ಕಾರ್ಮಿಕರೇ ನಿಜವಾದ ಸಂಪತ್ತು
ಮಾಲೀಕರು ಕಾರ್ಮಿಕರಿಗೆ ಅನ್ಯಾಯ ಮಾಡಿದರೆ ಆಪತ್ತು
ಆಗ ಕಾರ್ಮಿಕರು ತೋರಿಸುವವರು ತಾಕತ್ತು
ಮಾಲೀಕ ಕಾರ್ಮಿಕರ ಬದುಕನ್ನ ಹಸನುಗೊಳಿಸಿದರೆ ತೋರುವರು ನಿಯತ್ತು

ಕಾರ್ಮಿಕರ ದುಡಿದರೆ ಕಾರ್ಖಾನೆ ವೃದ್ಧಿ
ಶ್ರಮಿಕರ ದುಡಿಮೆಯಲಿ ಅಡಗಿದೆ ಅಭಿವೃದ್ಧಿ
ಅಭಿವೃದ್ಧಿಯಿಂದ ದೇಶ ಕಾಣುವುದು ಸಮೃದ್ಧಿ
ಶ್ರಮಿಕರ ಪರಿಶ್ರಮವೇ ಸ್ಫೂರ್ತಿ
ಉತ್ತಮ ಗುಣಮಟ್ಟದ ಉತ್ಪಾದನೆಯಿಂದ ತರುವರು ದೇಶಕ್ಕೆ ಕೀರ್ತಿ

ಇವರೆಲ್ಲರ ಬದುಕನ್ನ ಕಟ್ಟಿಕೊಟ್ಟಿದ್ದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು, ಈ ದಿನ ಅವರ ಸ್ಮರಣೆಯನ್ನ ಸ್ಮರಿಸೋಣ ನಾವೆಲ್ಲರೂ ಪ್ರೀತಿಪೂರ್ವಕವಾಗಿ ಅಭಿನಂದನೆ ಸಲ್ಲಿಸೋಣ


About The Author

4 thoughts on “ಚಿನ್ನಸ್ವಾಮಿ ಎಸ್, ಹೆಚ್ ಮೂಕಹಳ್ಳಿ ಅವರಕವಿತೆ ಬೆವರ ಹನಿಯ ಬೆಲೆ”

  1. ಸಮಯ ಸಂದರ್ಭಕ್ಕೆ ತಕ್ಕಂತೆ ಕವಿತೆ ರಚಿಸುವ ತಮ್ಮ ಪ್ರತಿಭೆಗೆ ಅಭಿನಂದನೆಗಳು

  2. ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಸಹಾಯ ಸಹಕಾರ ಈಗೆ ಇರಲಿ ನಮ್ಮ ಮೇಲೆ

Leave a Reply

You cannot copy content of this page

Scroll to Top