ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೆಳತನದ ಸವಿ ನೀಲಾಕಾಶದ ಮೇಘಗಳ ಮಾಲೆಯಲಿ .
ಎಳೆತನದ ಕಂಪನದ ತಂಪನರಸುವೆನು  ಸರಸದುಯ್ಯಾಲೆಯಲಿ ./
ಎಳೆ ಎಳೆಯಾಗಿ ಬಾವಕುಸುಮದೆಸಳುಗಳ ಅರಳುತಿರಲಾಗಿ .
ಮಳೆಯಾಗಿ ಭಾಂದವ್ಯದ ಹನಿಗಳು ಜಿನುಗಿದವು ತಾವಾಗಿ.//
 ಬಾಳ ಬಾಂದಳದಿ ಗೆಳೆಯನ ಗುಡುಗು ಒಮ್ಮೆ .
ಸೆಳೆವ ಮನಸಿನ ಹುಸಿಮುನಿಸಿನ ಮಿಂಚು ಒಮ್ಮೊಮ್ಮೆ. /
ಸುಳಿವ ಬಾಳ ಬಿರುಗಾಳಿಯಲಿ ಅಮರ ಸ್ನೇಹದ ಭ್ರಮೆ.
ಮಳೆಯಾಗಿ ಕಷ್ಟಗಳು ಸುರಿದರೂ ತಾನಿರುವೆನೆಂಬ ಹೆಮ್ಮೆ. //

ಸೊಗಸಿದವು ಕೆರಳಿಸುವ ನುಡಿಗಳು ಹಿಡಿ ಮುತ್ತುಗಳಾಗಿ .
ನಗಿಸಿದವು ಬಗೆ ಬಗಯ ನಗೆ ನುಡಿಗಳು ಒಳ ಸ್ವತ್ತಾಗಿ . /
ಹಾಗೇ ಒಮ್ಮೆ ನಗುವು ಹೀಗೆ ಮಗದೊಮ್ಮೆ ಮೌನ .
ಗೆಳೆತನದ ಮಳೆಗೆ ಇಳೆಯಲಿ ಇದುವೇ ಬಹುಮಾನ.//
 ಎದೆಗೂಡಿನ ಸರಸದ ಸುಮಧುರ ಸಂಗೀತ ಸ್ನೇಹ .
ಬಿದಿಗೆಯ ಚಂದಿರನಂದದಿ ಸೊಗಸು ಸಂಭ್ರಮ ಸ್ನೇಹ. /
ಮುದವೀವ ತುಡಿವ ಜೀವನಾಡಿ ಒಳನಾಡಿ ಈ ಸ್ನೇಹ.
ಎದೆಯ ಮೊರೆತ ಕರುನಾಡ ಕುಡಿಗೆ ಈ ಅಮರ ಸ್ನೇಹ .//


About The Author

Leave a Reply

You cannot copy content of this page

Scroll to Top