ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀನಿಲ್ಲದೆ
ನನಗೆಲ್ಲಿದೆ
ಕನಸು

ನೀ
ಕಾಣದೆ
ಬರಿದಾಗಿದೆ
ಮನಸು

ಏತಕೆ
ನನ್ನ ಮೇಲೆ
ಸುಮ್ಮನೆ
ಮುನಿಸು

ಜೊತೆ ಜೊತೆಗೆ
ನೀನಿದ್ದರಷ್ಟೇ
ಈ ಬಾಳು
ಸೊಗಸು

ನಿದಿರೆಯಲ್ಲೂ
ಬಂದು
ಹೋಗುತ್ತಿದ್ದೆ
ನೀನು

ನೀ ಕಾಣದೆ
ಬರಿದಾಗಿದೆ
ನನ್ನೆದೆಯ
ಕಡಲು

ವಿರಹದಿ
ಸುಡುತಿದೆ
ನನ್ನಯ
ಒಡಲು

ನಿನ್ನದೇ
ನಿರೀಕ್ಷೆಯಲ್ಲಿ
ಮಿಡಿಯುತಿದೆ
ಈ ಹೃದಯ


About The Author

1 thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ನೀನಿಲ್ಲದೆ”

Leave a Reply

You cannot copy content of this page

Scroll to Top