ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸ ವರುಷಕೆ ಭಾವ
ಮುನ್ನುಡಿ ಬರೆದ ಹಬ್ಬ
ಬೇವು ಬೆಲ್ಲ ಮೆಲ್ಲುವ
ಸಿಹಿ ಕಹಿಯ ಸೂಸುವ

ಈ ಯುಗಾದಿ ಹಬ್ಬ
ಎರಡು ತಿಥಿ ನಕ್ಷತ್ರ
ವಾರ ಪಕ್ಷ ಮಾಸ ಸಂಧಿಸುವ
ಚಾಂದ್ರಮಾನ ಯುಗಾದಿ

ಹೊಸಚಿತ್ತದಿ ಪಂಚಾಂಗ ಬದಲಿಸಿ
ಹೊಸ ಸಂವತ್ಸರ
ತುಸು ಹರುಷದಿ ಸ್ವಾಗತಿಸಲು
ಸಜ್ಜಾಗೋಣ ನಾವು ನೀವೆಲ್ಲ

ಬೇವು ಬೆಲ್ಲದ ಹಬ್ಬವು
ಈ ಯುಗಾದಿಯು
ನೋವು ನಲಿವು ಜೊತೆಯಾಗಿ
ತಂದಿಹುದು ಹೂಸತನವು

ಕೋಗಿಲೆ ಕುಹೂ ಕಲರವ
ನಿನಾದ ಮನಕಿಂಪುಕೊಡುವಂತೆ
ಜೀವನದ ತೇರಿಗೆ ಹೊಸ
ಹುರುಪು ಹೊಸ ಉತ್ಸಾಹವು ಬಂದಿದೆ

ಹೊಸ ಹುಮ್ಮಸ್ಸು ತುಂಬೆಂದು
ಭಗವಂತನಲ್ಲಿ ಪ್ರಾರ್ಥಿಸುತ್ತ
ಆಚರಿಸೋಣ ಯುಗಾದಿಯ
ಸ್ವಾಗತಿಸೋಣ ಹೊಸವರ್ಷವ.

About The Author

1 thought on “ಯುಗಾದಿ ವಿಶೇಷ”

  1. ಉತ್ತಮ ಪ್ರಕಾಶನ. ನನ್ನ ಕವನ ಸುಂದರವಾಗಿ ಪ್ರಕಟಿಸಿ ಪ್ರೇರಣೆ ಮತ್ತು ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.

Leave a Reply

You cannot copy content of this page

Scroll to Top