ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾನವತೆಯ ಮಹಾಬೇರು
ಬಾಬಾಸಾಹೇಬ ಎಂಬ ಜ್ಞಾನದ ಮೇರು
ಪದವಿಗಳ ಪಟ್ಟಿ ಅಕ್ಷರಗಳಿಗೆ ನಿಲುಕದು
ಸದ್ಗುಣಗಳ ಗಣಿ ನೀವು ಪದಗಳಿಗೆ ಸಿಗದು

ಉಳ್ಳವರೂ ಸೋಲಬೇಕಾಯಿತು ಒಳ್ಳೆಯತನಕೆ
ಸಾಧನೆಗೆ ಗಟ್ಟಿಮನಸು ಬೇಕೆಂದು ಸಾರಿದೆ ಜಗಕೆ
ಕರ್ಣಕಠೋರ ಸ್ಥಿತಿಯನೂ ಬದಲಾಯಿಸಿದ ಧೀರ
ದೀನ ದಮನಿತರ ಪಾಲಿಗೆ ಬೆಳಕಾಗಿ ಬಂದ ವೀರ

ಮನೆಯ ಇಕ್ಕಟ್ಟು ಬಿಕ್ಕಟ್ಟಾಗಲು ಬಿಡಲೇ ಇಲ್ಲ
ಅಂಜಿಕೆಯ ಮಾತುಗಳಿಗೆ ಬೆನ್ನು ತೋರಲಿಲ್ಲ
ದೊಡ್ಡವರ ತಪ್ಪುದಾರಿಗೆ ಗುಂಡಿಗೆಯೊಡ್ಡಿ ನಿಂತೆ
ಅವರೇ ಆಶ್ಚರ್ಯ ಪಡುವಂತೆ ಬೆಳೆದು ನಿಂತೆ

ಜಗ ತಿರುಗಿ ನೋಡುವ ಸಂವಿಧಾನ ಬರೆದೆ
ಇಲ್ಲದವರಿಗೂ ಸಮಾನತೆಯ ರಹದಾರಿ ತೋರಿದೆ
ಅಕ್ಷರದ ಬೆಳಕನು ಆರದ ಜ್ಯೋತಿಯಾಗಿಸಬೇಕೆಂದೆ
ದೀನ ದಲಿತರ ಪಾಲಿಗೆ ನಿಜ ಬೆಳಕಾದೆ

ನೆನೆಯಬೇಕಿದೆ ನಿನ್ನ ಅನವರತ ಬಾಬ
ಎಂದಿಗೂ ನಿರೀಕ್ಷಿಸದಂತೆ ಯಾವುದೇ ಲಾಭ
ನಿನ್ನ ಹೆಸರು ಸದಾ ಶಕ್ತಿಯಾಗಿ ಬೆಳಗಬೇಕಿದೆ ಇಲ್ಲಿ
ಘೋಷಣೆಯಾಗಷ್ಟೇ ಉಳಿಯಬಾರದು ಜನ್ಮದಿನದಲ್ಲಿ

About The Author

Leave a Reply

You cannot copy content of this page

Scroll to Top