ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಉಲ್ಲಸಿತವಾಗಿರು, ನಿರಂತರ, ಓ ಮನವೇ.l
ನಿನಗಾಶ್ರಯ ನೀಡಿಹ, ದೇಹವ ಸಲಹೊ ಮನವೆ.ll

ಕಾರ್ಕೋಟಕ, ವಿಷಗಳೆನತುದ್ಭವಿಸಿ ನಿನ್ನೊಳು.l
ಅಂತರಂಗವ ಕುಲುಕಿ, ಬಹಿರಂಗವನು ದಹಿಸಿ,l
ನೋವನುಣ್ಣೆಸಿ, ಜರ್ಜರಿತ ಗೊಳಿಸುವ, ಮನವೇ.ll

ಬದುಕು ನಿನ್ನಾ ಧೀನ,ನಿಲ್ ಚಿಂತಿ‌ಸಲರೆಕ್ಷಣ.l
ಬಂಧನ-ಪ್ರತಿಬಂಧನದಾಚೆ, ಬದುಕುವಾಸೆ.l
ಉತ್ಕಟ ತಳಮಳಗಳು, ಬಿಡದೆ ಕಾಡುವುದೇಕೆ?

ಮನವಿಯನಾಲಿಸು, ಕರುಣೆಯಿಂದ ಕೃಪೆದೋರು,l
ಏಕಾಗ್ರತೆಯ ವಿಮುಖಗೊಳಿಸದಿರು, ತಡೆಯದಿರು.l
ದಿವ್ಯಾನುಭವ, ಪಡೆವ ನನ್ನ ಯತ್ನವ, ಮನವೇ.ll


About The Author

Leave a Reply

You cannot copy content of this page

Scroll to Top