ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನದಿ ಹರಿಯುವಾಗ
ಹಳ್ಳ, ಕೊಳ್ಳಗಳನ್ನು
ಜೊತೆ ಮಾಡಿಕೊಂಡು ಮುಂದೆ
ಹೋಗುವಂತೆ
ಸರ್ವರನ್ನು
ಕರೆದುಕೊಂಡು ಹೋಗಬೇಕಾಗಿದೆ !

ಗಿಡ, ಮರ, ಪಕ್ಷಿ, ಪ್ರಾಣಿಗಳಿಗೆ
ನೀರುಣಿಸಿ ಮುಂದೆ
ಹೋದಂತೆ
ದೀನ, ದಲಿತರ, ಬಡವರ‌
ಜೊತೆಗೆ ಹೋಗಬೇಕಾಗಿದೆ !

ಬಾಯಾರಿ ಬಳಿ ಬಂದವರಿಗೆ
ನೀರುಣಿಸಿ
ತೃಪ್ತಿ ಪಡಿಸುವುದೊ
ಹಾಗೆ ಕಷ್ಟದಲ್ಲಿರುವವರ
ಕೈ ಹಿಡಿದು ನಡೆಸಬೇಕಾಗಿದೆ !

ಎಷ್ಟೆ ಕಷ್ಟ ಬಂದರೂ
ಅಂಕು ಡೊಂಕಾಗಿಯಾದರೂ ಹರಿದು ಸಮುದ್ರ
ಸೇರುವುದೊ
ಹಾಗೆ ಸರ್ವರನ್ನು ಕರೆದೊಯ್ಯಬೇಕಾಗಿದೆ ಮುಕ್ತಿಯ ಮಾರ್ಗದೆಡೆಗೆ !

———————————-

About The Author

1 thought on “ನಾಗಪ್ಪ ಸಿ ಬಡ್ಡಿ ಅವರ ಕವಿತೆ-ಹರಿಯುವ ನದಿಯಾಗೋಣ !”

Leave a Reply

You cannot copy content of this page

Scroll to Top