ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಗೆಬಗೆಯ ಬಣ್ಣದ
ಲೇಖನಿಗಳು
ಅಂದ,ಚೆಂದ, ಒಂದೊಂದು,
ಒಂದೊಂದು ವಿನ್ಯಾಸ,
ಮೂಡುವ ಬರವಣಿಗೆ
ಮಾತ್ರ ವಿಪರ್ಯಾಸ

ಅಜ್ಞಾನ ತೊಲಗಿಸಿ
ಸುಜ್ಞಾನ ಅರಳಿಸಿ
ಅಕ್ಕರಗಳನ್ನು ಅಚ್ಚುಕಟ್ಟಾಗಿ
ಮೂಡಿಸಿ,ಪದತೋರಣ ಕಟ್ಟಿ
ಹೊಸಹೊಸ ಅರ್ಥ ಸೃಷ್ಟಿಸಿ
ಭಾವ-ಬಂಧಗಳನ್ನು ಲೀನಗೊಳಿಸಿ
ಅಭಿವ್ಯಕ್ತಿಸಿ,ಅನುರಣಿಸಿ
ಅನುರಾಗಿಸಿ,ಆಲಾಪಿಸಿ,
ಪ್ರಲಾಪಿಸಿ, ಬೆಚ್ಚಿಬೀಳಿಸಿ,
ಜಾಗೃತಗೊಳಿಸಿ,
ಅಂತರತಮಯ ಮಾಡುವುದೀ
ಗಟ್ಟಿಚೂಪುಕೊಕ್ಕಿನ ಲೇಖನಿ,

ಉದ್ಗ್ರಂಥಗಳನ್ನು ಸೃಷ್ಟಿಸಿ
ಚರಿತ್ರೆಯನ್ನು ,ವರ್ತಮಾನಕ್ಕೆ
ಸಾಕ್ಷಿಯಾಗಿಸಿ,
ಮನುಕುಲದ ಸಾಕ್ಷರತೆಗೆ
ಗ್ರಂಥಸ್ಥ ಸಾಹಿತ್ಯ ಒದಗಿಸಿ,
ವಿವಿಧ ಕೈಯ ಬೆರಳಲ್ಲಿ ಒದ್ದಾಡಿ,
ಓಲಾಡಿ,ಹಿಂಸೆ ಪಟ್ಟರೂ
ಅಕ್ಷರ ಸ್ಪುರಿಸಿ,
ಶ್ವೇತಾಕಾಗದದಲ್ಲಿ ,
ಕ್ಷರವಿಲ್ಲದ ಅಕ್ಷರಗಳ ಚಿತ್ತಾರ ಬರೆದು,,
ಬದುಕಿಗೆ ದಾರಿದೀಪವಾಗಿದೆ
ಹೊಳೆವ ಲೇಖನಿ.

ಮಕ್ಕಳಿಂದ ಮರುಳರವರೆಗೂ
ಅಭೇದವಾಗಿ ಹಸ್ತಾಂತರವಾಗಿ
ಹೃನ್ಮನದ ಮಾತುಗಳಿಗೆ
ಮೌನದ ರಂಗೋಲಿಹೊಸೆದು,
ಪ್ರೀತಿ,ನೀತಿ,ನೋವು-ನಲಿವು,
ಸಾಂತ್ವನ,ಸಂತಸ,
ಸುಖ- ದು:ಖ,ವಿವಿಧ ಭಾವಗಳ ಐಕ್ಯಗೊಳಿಸಿ,ಮಿಲನಗೊಳಿಸಿ,
ಪ್ರೇಮವ ಬೆಸೆದು,
ಶೋಷಣೆಯ ದಿಕ್ಕರಿಸುವುದೀ
ಹರಿತ ಬರಹದ ಲೇಖನಿ.

ಪ್ರೇಮದೋಲೆ, ಲೇಖನ,
ಸರ್ಕಾರಿ ಅದೇಶ,
ವಿದ್ಯಾರ್ಥಿಗಳ ಟಿಪ್ಪಣಿ,
ನ್ಯಾಯಾಂಗ, ಶಾಸಕಾಂಗ,
ಕಾರ್ಯಾಂಗದಲ್ಲಿ
ತನ್ನತನ ಉಳಿಸಿಕೊಂಡು,
ಸರ್ವ ಸಕ್ರಮ, ಅಕ್ರಮ,
ಭ್ರಷ್ಟತೆಯಲ್ಲಿ ಭಾಗಿಯಾಗಿ
 ತಿದ್ದಿ ತೀಡಿ,
ರುಜುವಾಗಿ, ಪ್ರತ್ಯಕ್ಷ
ಮೌನದ ಅಜೀವವಾಗಿ,
ಜಗತ್ತಿನೊಡನೆ ಓಡುತ್ತಾ
ಸಾಗಿದೆ ,,ಕುರುಹುಗಳಿಗೆ
ಸತ್ಯತೆ ತರುವ ನಮ್ಮ
ಗೌರವದ ಲೇಖನಿ

————————-

About The Author

9 thoughts on “ತಾತಪ್ಪ ಕೆ ಉತ್ತಂಗಿ ಕವಿತೆ-ಲೇಖನಿ”

  1. ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಸಾರ್ಥತೆಯನ್ನು ಹೊಂದಲು ಲೇಖನಿಗಳು ಬಹಳ ಮಹತ್ವದಾಗಿದೆ.ಹಾಗೆಯೇ ಯಾವುದೇ ಮೇಲು ಕೀಳು ಎಂಬ ಭೇದವಿಲ್ಲದೆ ಶ್ವೇತ ಹಾಳೆಯ ಮೇಲೆ ಅವರವರ ಭಾವನೆಗಳನ್ನು ಬರೆಯುತ್ತದೆ.

  2. ನಿಮ್ಮ ಬರವಣಿಗಳು ಅತ್ಯದ್ಭುತವಾಗಿದೆ ಸರ್. ಅದರಲ್ಲಿರುವಂತಹ ಪ್ರತಿಯೊಂದು ಪದಗಳು ಅರ್ಥಪೂರ್ಣವಾಗಿದೆ ಸರ್.

  3. ಎಲ್ಲಾ ಭಾಗ್ಯಗಳನ್ನ ಕೊಟ್ಟ ಈ ನಿಮ್ಮ ಲೇಖನಿಯ ಬೆಲೆ ಎಷ್ಟು ರವಿ ಯವರೇ….!?

Leave a Reply

You cannot copy content of this page

Scroll to Top