ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸತು ಚಿಗುರು
ಹಳತು ಬೇರು
ಬೆರೆತು ನಡೆಯೇ
ಜೀವ ಸೊಗಸು…

ನವ ಪಲ್ಲವ
ಹೊನ್ನ ಹಣ್ಣೆಲೆ
ಅರಿತು ಬಾಳೆ
ಭಾವ ಹೊನಲು…

ಮಾವ ಒಗರು
ಅಳಿದು ಸಿಹಿಯು
ತುಂಬಿ ತುಳುಕೆ
ಅಧರ ಮಧುರ…

ಬೇವ ಕಹಿಗೆ
ಬೆಲ್ಲ ಸವಿಯು
ಬೆರೆತ ಘಳಿಗೆ
ಎಲ್ಲ ಬೆರಗು…

ಇಂದು ಹೊಸತು
ನಾಳೆಗದುವೆ ಹಳತು
ಕಾಲ ಚಕ್ರ ಸುಳಿಯು
ಅರಿಯೇ ಬಾಳು ಹಸನು

ಹೊಸತು ಅರಸಿ ನಡೆವ
ನಿತ್ಯ ಸ್ನೇಹ ಪಯಣ
ಹಳೆ ಬೇರಿನಿಂದ
ಭದ್ರ ಬದುಕ ಸೆರಗು..

ಹಸಿರು ಮಾಗಿ ಹೊನ್ನಾಗಿ
ಕಣ್ಣತುಂಬಿ ತುಳುಕಿ
ಒರಟಳಿದು ಮಿದುವಾಗೆ
ಮಧುರ ಮನಸು..

ಇರುಳ ಮನೆ ದೀಪ
ಶಶಿ ಬೆಳಕ ಕಿರಣ
ಜೊತೆ ಇರಲು ತಾನು
ನಡೆವೆ ದೂರ ನಾನು

————————-

About The Author

1 thought on “ಇಂದಿರಾ ಮೋಟೆಬೆನ್ನೂರ ಕವಿತೆ-ಜೊತೆಯಿರಲು”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅತ್ಯಂತ ಭಾವಪೂರ್ಣ ಕವಿತೆ ಮೇಡಂ ಧನ್ಯವಾದಗಳು

Leave a Reply

You cannot copy content of this page

Scroll to Top