ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನಂತಕಾಲ ಅನಂತಕಾಲ ಮನಸು
ಹೃದಯ ಹತ್ತಿರವಿದ್ದರೂ ಬೆರೆತೊಂದಾಗಬಲ್ಲವೆ?
ಯೋಗ ಮೈಗೂಡದೇ ಶಾಂತಿ ದೊರಕದೆ,
ಭಾವ ಆತ್ಮದಾ ಬಯಕೆ ಆಸೆ ಒಂದಾಗಿದ್ದರೂ
ಬೆಸುಗೆ ಬಂಧವಿದ್ದರೂ ಒಂದಾಗಬಲ್ಲವೆ?
ಒಳ ಹೊರಗಿನ ಚಿತ್ತ ಚಂಚಲತೆ ಅಡಗದೆ//

ಮೌನದಾ ಮಾತು ಮಂಥನದ ತಿರುಳು
ಒಡಲ ಕೊರೆಯುತಿದ್ದರೂ ಒಂದಾಗಬಲ್ಲವೆ?
ಮೌನಮುರಿದು ಕಲೆಯಬಲ್ಲವೆ?
ಗುಣದೋಷಗಳು ಹಾಳಾಗದೆ
ಏನಿತು ಕಾಲ ಕಷ್ಟಪಟ್ಟರಿಲ್ಲ ತನುಮನಗಳೊಂದಾಗದೆ//

ತಾಪ ಪ್ರತಾಪ ಕೋಪ ಹೊಮ್ಮುವ ತಾಣ
ಒಂದೇ ಇದ್ದರೂ ಪರಿಣಾಮ ಬೇರೆ ಬೇರೆ
ಎಲ್ಲ ಸೇರಿ ಉರಿವ ಹಣತೆ ಬೆಳಕು ನೀಡುವಂತೆ
ಬೆಳಗಬಲ್ಲವೇ ಕರಗಬಲ್ಲವೆ ಸಹಜ ಸಂತೃಪ್ತಿಯಲಿ ಉಕ್ಕೊ ಸರಳತೆಯಲಿ
ಬಿರಬಲ್ಲವೆ ಕಳೆ ಕಸ ಉರಿದು ಪ್ರಭೆಯನು//

ಕಡಲೋಳಿಹ ಕಲ್ಲು ಏನಿತು ಕಾಲ ನೆಂದರೂ
ಕರಗಡಲ್ಲುದೆ ನೆನೆದು ನೀರೊಳು ಸೇರಬಲ್ಲುದೆ?
ಚಿಪ್ಪಿನಾ ಮುತ್ತು ಹುಳುವೊಂದಿಗೆ ಸಾಯಬಲ್ಲದೆ ಸಮುದ್ರದಾ ನೀರಲಿ ಕೊಳೆಯಬಲ್ಲದೆ?
ಹೊಳಪು ರೂಪ ಗುಣ ಕಳೆದುಕೊಳ್ಳಬಲ್ಲುದೆ?
ಅಂತಿರಬೇಕಲ್ಲವೆ ಮನುಜನ ಮನಭಾವ
ಹೃದಯ ಒಡಲು ಅಂತರಾತ್ಮ ಎಲ್ಲ ಒಂದಾಗಿ
ಅರಿತು ಬೆರೆತರೆ ಸತ್ಯ ಶುದ್ಧ ಆತ್ಮವರಳಿ
ಪರಿಮಳಿಸಲಾರದೆ ಫಲಾಪೇಕ್ಷೆ ಬಯಸದ ಹೂವಂತೆ//


About The Author

1 thought on “ಡಾ ಅನ್ನಪೂರ್ಣ ಹಿರೇಮಠ ಕವಿತೆ ಆತ್ಮವರಳಲು”

  1. ಪರಿಪೂರ್ಣ ಕವನದ ಅಳಲು ಘಾಸಿಗೊಂಡು ಆತ್ಮ ಮತ್ತು ಮನಸ್ಸನ್ನು ಬಿಡಿ ಬಿಡಿಯಾಗಿಸಿದೆ
    ೦ ಜಿ.ಎಸ್.ಪ್ರಕಾಶ್,ಬೆಂಗಳೂರು. ೦

Leave a Reply

You cannot copy content of this page

Scroll to Top