ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳ ಕತ್ತಲೆಯ ಬಾಳಲ್ಲಿ
ಬೆಳಕಾಗಿ ಬಂದವನು ಆತ
ಒಲವಿನ ಹಣತೆ ಬೆಳಗಿ
ಒಳಗಿನ ಬೇಗುದಿ ನೀಗಿ

ಕಣ್ಸನ್ನೆಯಲೆ ತಂಪೆರೆಯುವ ಹಿತ
ಸ್ನೇಹಕ್ಕೆ ಆಹ್ವಾನ ಮೃದು ಮಧುರ
ಸವಿಗಾನ ಸದ್ದಿಲ್ಲದೆ ಮನವ ಕದ್ದ
ಒಲ್ಲೆಯೆನಲು ಯಾವ ಕಾರಣವಿಲ್ಲ

ಸ್ವರ ನಿಲ್ಲಿಸಿದ ತಂತಿಯಲಿ
ನವಿರಾದ ಋತುಗಾನ
ಮೈ ಮನದ ಸುಳಿಯಲ್ಲಿ
ಹೊಸತನದ ತನಧಿರೆನ

ಅವನೆದೆಯ ಗೂಡಲ್ಲಿ
ಗುಬ್ಬಚ್ಚಿಯಾಗಿ ಎದೆಯಾಳದ
ವೇದನೆಯ ಭಾರವಿಳಿಸಿ
ಹಗುರಾಗುವಾಸೆ ಜೀವಕ್ಕೆ

ಎದೆಯ ಬಾಗಿಲ ಸರಿಸಿ
ಪ್ರೇಮದಾಲಾಪ ಸುರಿಸಿ
ಹೃದಯ ತಂತಿಯ ಮೀಟಿದ ಪ್ರಿಯತಮನ ಉಸಿರಾಗುವಾಸೆ

ಕಾದಳು ಕಾದಲನ ಬರುವಿಕೆಗೆ
ಮೈ ಮನಸು ಹಗುರಾಗಿ
ಮೊರದಗಲ ನಗುವಾಗಿ
ಹಿರಿಹಿರಿ ಹಿಗ್ಗಿ ಹೂವಾಗಿ!

ಬಂದೀತು ಆ ಸುದಿನ
ತಿಂಗಳು ವರುಷಗಳುರುಳಿ
ವಸಂತದಾಗಮನದಂತೆ
ಸೊಬಗಿನ ಸುಗ್ಗಿಯಂತೆ!

ಅವನ ಕಣ್ಣೋಟ ಬಿಸಿಯುಸಿರು
ಎದೆಯ ಲಯದ ತಾಳ
ತಪ್ಪಿಸುತಿರೆ ಅವಳ ತನುಮನ
ಅವನಿಗೆ ಶರಣಾಗತಿ!!

ಅವನ ಮೆಲು ಮಾತು ನಡೆನುಡಿ
ಶುದ್ಧ ಅಪರಂಜಿ ಮಾತಲ್ಲೆ ಸಂತೈಸಿ
ಬೊಗಸೆಯಲಿ ಮೊಗವನೆತ್ತಿ
ಹೂಮುತ್ತು ಹಣೆಗಿರಿಸಿ ಹಿಂದೆ ಸರಿದ!

ಸೋತ ದೇಹದ ಬಯಕೆ
ಅರ್ಥವಾಗದ ತೃಪ್ತ ಮನಕೆ
ಕಣ್ಣಂಚು ತೇವ ಸಮ್ಮಿಶ್ರ ಭಾವ
ಕನಲಿದಳು ಅವನ ಸಾಮಿಪ್ಯ ಸುಖಕೆ

ಅವನ ಪ್ರೇಮದಾಲಾಪದಲಿ
ಇನ್ನಷ್ಟು ಸೆಳೆತ ಮನತಣಿಸುವ
ಎಂದಿನಾ ರಾಗಲಹರಿ ವರುಷ
ಉರುಳಿದ ಮೇಲೂ ಅವಳ

‘ಕಣ್ಣ ಬೆಳಕು ‘ಅವನಿಂದು


About The Author

Leave a Reply

You cannot copy content of this page

Scroll to Top