ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುಕ್ಷಣವೂ ಬೆಳೆದ ಧೃಢ ಪ್ರೀತಿಗೆ
ದಿನಾಚರಣೆಯ ಹಂಗೇಕೆ
ಕೈ ಬಾಯಿ ತುಟಿ ನೊಸಲ ವರ್ಣನೆಗೆ
ನಿರ್ದಿಷ್ಟ ದಿನ ಮಾನದ ಪಾಡೇಕೆ.

ಪ್ರಿಯೆ
ಎಂದು ಕಾವ್ಯ ರಚಿಸದಿದ್ದರೂ ನನ್ನರಸಿ ನಾ ನಿನ್ನ ಸಾಮಂತ
ನಿನ್ನ ಆಜ್ಞ್ನಾಧಾರಕ
ನಿನ್ನ ಹೃದಯದಾಸ್ಥಾನದ
ಮಹಾಮಂತ್ರಿ
ಮತ್ತು ಸೇವಕ

ಬೆಳಗಾಗುವುದರಳೊಗೆ ನಿನ್ನ ನರನಾಡಿ ಮತ್ತು
ಮಸ್ತಿಷ್ಕದೊಳಗೆ, ನಿನ್ನ ಉಸಿರಾಟ,
ನಿನ್ನ ರಕ್ತ ಚಲನೆ,ನಿನ್ನ ಗತಿ ನಿನ್ನ ಮತಿಯೊಳಗೆ ನಿನ್ನ ನಿರ್ದೇಶಿಸುವ
ನಾ ನಿನ್ನ ಆರಾಧಕ
ಹಾಗೂ
ನಿನ್ನ ಬಿಟ್ಟಿರಲಾರದ ನಿನ್ನದೇ ಸಾಮ್ರಾಜ್ಯದ ಚಕ್ರವರ್ತಿ!

ಎಂದೇ ದಿನಾಚರಣೆಯ ಹಂಗೇಕೆ
ನನಗೆ!
ಅನುಕ್ಷಣವೂ ನಿನ್ನದೇ ಕನಸಲ್ಲಿ
ನನ್ನ ನನಸ ಕಾಣುವಲ್ಲಿ
ಕಾಲ ಮುಗಿದೇ ಹೋಗವಲ್ಲಿ
ಕಾಣುತ್ತೇನೆ ಪ್ರಿಯೆ ನಿನ್ನ
ನಿರಂತರ.

ಪ್ರೇಮದಾಚರಣೆಯ ಈ ಧಾವಂತ
ಕ್ಷಣಕ್ಷಣವೂ ಕಣಕಣದಲ್ಲಿ
ಪ್ರೇಮಾಭಿಷೇಕದ ಅನುಬಂಧ
ಬಂಧಿಸುವಲ್ಲಿ ಅನುಕ್ಷಣವೂ ಯಶಸ್ವಿ ಯತಾರ್ಥ!


About The Author

3 thoughts on “”

  1. “ಪ್ರೇಮಿಗಳ “ಶುಭ ದಿನದಂದು ನಿಮ್ಮ ಪ್ರಿಯತಮೆಗಾಗಿ ಎಲ್ಲಾ ಒಳ್ಳೆಯ ಭಾವನೆಗಳನ್ನು ವ್ಯಕ್ತಪಡಿಸಿರುವ ಅದ್ಭುತ ಕವಿತೆ.

Leave a Reply

You cannot copy content of this page

Scroll to Top