ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಬಿ
(ನಾಟಕದ ಮೊದಲ ಓದು )
ಮರಾಠಿ ಮೂಲ : ವಿಜಯ ತೊಂಡೊಲ್ಕರ
ಕನ್ನಡಕ್ಕೆ : ಜಯಲಕ್ಷ್ಮಿ ಪಾಟೀಲ

ಬೇಬಿ ಮತ್ತೆ ಬೇಬಿಯಾಗೇ ಉಳಿದಳೆನ್ನುವ ಸತ್ಯಕ್ಕೆ  ಈ ನಾಟಕವೊಂದು ಜೀವಂತ ಸಾಕ್ಷಿ. ಬೇಬಿ ತನ್ನ ಜೀವನದಲ್ಲಿ ಅಕಸ್ಮಿಕವಾಗಿ ಬಲಾತ್ಕರಿಸಲ್ಪಟ್ಟು ಗಂಡಿನ ಗುಲಾಮಳಾಗಿ ನಡೆದರೂ ಗಂಡಿಗೆ ಸಮಾಧನವಿಲ್ಲ ಕೊನೆಗೆ  ಗಂಡಸಿನ ಕನ್ನಡಿಯಲ್ಲಿ ಚಿಲ್ಲರೆ ಹೆಂಗ್ಸಾಗಿ ಕಾಣಬೇಕು ಕಾಣಬೇಕಾಗಿರುವುದು” ಗಂಡಸಿನ ಧರ್ಮ”  ಎಂಬ ಅರಿವು ಸಾಬೀತಾಗಿದೆ – ಬೇಬಿ ಎಂಬ ನಾಟಕದಲ್ಲಿ. ಜೂನಿಯರ ಆರ್ಟಿಸ್ಟಾಗಿ ಕೆಲಸ ಮಾಡುತ್ತಿರುವ ಬೇಬಿ  ತನ್ನ ಆತ್ಮ ಹೊಲಸಾಗಿಲ್ಲ ಎಂದು ಘೋಷಣೆ ಮಾಡಿಕೊಂಡ ಬೇಬಿ  ತಾನು ಶಿವಪ್ಪನಿಂದ ಬಿಡುಗಡೆಗೊಂಡು ಹೊಸಬಾಳು ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವ ಯುವತಿ ತನ್ನ ಅಣ್ಣ ರಾಘವನನ್ನು ಮನುಷ್ಯರೂಪಕ್ಕೆ ತರಬೇಕೆನ್ನುವ ಕರುಳ ತುಡಿತದ ನಾಯಕಿ. ಕೊನೆಗೆ ನಾಟಕದ ಕೊನೆಯ ಅಂಕದಲ್ಲಿ ತನ್ನ ಪ್ರೇಮ  ಸಂಭಂಧ  ಬೇರೊಬ್ಬನ ಜೊತೆಗಿದ್ದದ್ದು (ಪುರುಷನಿಗೆ) ಶಿವಪ್ಪನಿಗೆ ಸಾಬೀತಾದಾಗ  ಬೇಬಿ ಅಪ್ರತಿಭಳಾಗಿ ಮುದುಡಿ ಹೋಗುತ್ತಾಳೆ ಕೊನೆಗೆ ಉಂಡಎಲೆಯೇ ಕೊನೆವರೆಗೂ ಉಳಿಯಲಿ ಎಂದು ಬಯಸಿದ ಬೇಬಿಗೆ ಆ ಉಂಡದ್ದು ದಕ್ಕಲಿಲ್ಲ  ಎಂಬುದು ಪ್ರಸ್ತುತ ಕಾಲಕ್ಕೆ ಹಿಡಿದ ಕನ್ನಡಿಯಾಗಿದೆ.
ಬೇಬಿ ತನ್ನ ದೌರ್ಬಲ್ಯವನ್ನು ಮೆಟ್ಟಿ ನಿಂತು ಬದುಕುವಲ್ಲಿ ಸೋತಳೆಂಬ ಸತ್ಯವನ್ನು ಮೂಲ ಲೇಖಕರು ಹೇಳಲು  ಬೇಬಿ ಎಂಬ ಪದವನ್ನು ಆರಿಸಿಕೊಂಡದ್ದು ಶೀರ್ಷಿಕೆಯಾಗಿ ಕೊಟ್ಟದ್ದು  ಮತ್ತೆ ಬೇಬಿ  ಬೇಬಿ ಉಳಿದದ್ದು ಓದುಗರಿಗೆ ಪ್ರೇಕ್ಷಕರಿಗೆ ವೇಧ್ಯವಾಗಿದೆ.
       ನಾಟಕ ಎರಡೇ ಅಂಕದಲ್ಲಿದ್ದರೂ ಸುಂದರವಾಗಿದೆ.ಗಡುಚಾಗಿದೆ. ಎಲ್ಲಿಯೂ ನೀರಸತೆ ಮೂಡಿಬಂದಿಲ್ಲ.

ಮೊದಲ ಅಂಕದಲ್ಲಿ ಮೂರು ದೃಶ್ಯಗಳು
೧) ರಾಘವ – ಬೇಬಿ,
೨) ರಾಘವ – ಬೇಬಿ – ಶಿವಪ್ಪ
೩) ಕರ್ವೆ- ಬೇಬಿ ; ಬೇಬಿಮನೆ ರಾಘವ -ಶಿವಪ್ಪ ; ಸ್ಟುಡಿಯೋ  ಬೇಬಿ
– ಕರ್ವೆ

; ಬೇಬಿ ಮನೆ  ರಾಘವ- ಶಿವಪ್ಪ  ಹೀಗೆ ಸುತ್ತುತ್ತಾ ನಾಟಕ ಬೆಳೆಯುತ್ತದೆ
ಬೇಬಿಯ ಬದುಕನ್ನು ಅನಾವರಣಗೊಳಿಸುತ್ತವೆ.
ಬೇಬಿ , ಬೇಬು , ಅರಗಿಣಿ,   ರಾಣಿ ಎಂದೆಲ್ಲ ರಮಿಸುವ ಶಿವಪ್ಪ ನಾಲ್ಕು ಕಾಲಿನಲ್ಲಿ ನಿಲ್ಲುತ್ತಾ ಬಾ , ನನ್ನ ಸುತ್ತು, ಮುಂಗೈ ನೆಕ್ಕು, ನಾಯಿಯ ಹಾಗೆ ಬೊಗಳು , ಪೋಜು ಕೊಡು , ಪರೆಡ ಮಾಡು, ಹಾಡು , ಡಾನ್ಸ ಮಾಡು ಎಂದೆಲ್ಲ ಬೇಬಿಗೆ ವಿಧಿಸುವ ಶಿವಪ್ಪನ ಆತ್ಮ
ಹೊಲಸಾದದ್ದು ಪ್ರಕಟವಾಗಿ ಪ್ರೇಕ್ಷಕರಿಂದ
 ಛೀಮಾರಿ ಹಾಕಿಸಿಕೊಳ್ಳುತ್ತಾನೆ .

ಇಪ್ಪತ್ತೊಂದನೆಯ ಶತಮಾನದಲ್ಲಿ ಮಹಿಳೆಯ ಸ್ವಾತಂತ್ರ್ಯ ಗೇಲಿಯಾಗಿದ್ದನ್ನು ಮೂಲ ಲೇಖಕರು ಪ್ರಸ್ತುತಪಡಿಸಿದ್ದಾರೆ.
  ಬೇಬಿ ತಾನು ಜ್ಯುನಿಯರ ಆರ್ಟಿಸ್ಟ ಆಗಿ ದುಡಿದು ಶಿವಪ್ಪನ ಮನೆಗೆ ದುಡ್ಡುಕೊಟ್ಟರೂ  ಧ್ಯಾನವಿಲ್ಲದ ಶಿವಪ್ಪ ಬೇಬಿಯನ್ನು ಹೊಟ್ಟೆಗೆ ಒದೆಯುವುದು ಪ್ರೇಕ್ಷಕರ ಕಟಕಟೆಯಲ್ಲಿ ಶಿವಪ್ಪ ನಿಂತುಕೊಳ್ಳುವಂತಾಗುತ್ತದೆ.
       ಗಂಡಸಿನ ಶೂ ಬಿಚ್ಚುವುದು, ಸಿಗರೇಟಿಗೆ ಕಡ್ಡಿಗೀರುವುದು , ಮಧ್ಯದ ಬಾಟಲಿ ಅಡುಗೆ ಮನೆಯಿಂದ ತಂದು
ಕೊಡುವುದು ,  ಗ್ಲಾಸಿಗೆ ಮಧ್ಯ ಸುರುವುದು , ಕುಡಿಸುವುದು , ಕುಡಿಯುವುದು , ಸೇದುವುದು , ಸೇದಿಸುವುದು ಇವು ಕೇವಲ ದುರಬ್ಯಾಸಗಳಾಗಿ ಉಳಿಯುವುದಿಲ್ಲ

ಮಹಿಳೆಯ ಬಾಳಿನಲ್ಲಿ ಅವಳ ಅಭಿವೃದ್ದಿಯ ಹಾದಿಯಲ್ಲಿನ ತೊಡರುಗಳಾಗಿ ಉಳಿಯುತ್ತವೆ. “ಚಟ” ಎನ್ನುವುದು ಕೇವಲ ಪದವಲ್ಲ ಅದೊಂದು ರಾಕ್ಷಸ. ಮೋರೆ ಮುಚ್ಚಿಕೊಂಡ ಸಾಕ್ಷಾತ ಯಮ. ಮಹಿಳೆಯ ಕಾಲು ಜಗ್ಗಿ ಕೊಳ್ಳದಲ್ಲಿ ಹಾಕಿ ಅವಳ ಅವಸಾನ ಸಂಭ್ರಮಿಸುವ ವೀರ  ಎಂಬುದು ನಾಟಕದಲ್ಲಿ ಪ್ರಕಟಗೊಂಡಿದೆ.
ಸಮಾಜದಲ್ಲಿ ಮಹಿಳೆಯರ ಜೀವನದಲ್ಲಿ ಸದ್ದಿಲ್ಲದೇ ತೆರೆಮರೆಯಲ್ಲಿ ನಡೆಯುವ ಹಿಂಸಾಚಾರ  ಅತ್ಯಾಚಾರಗಳನ್ನು ಗ್ರಹಿಸಿ ಆ ಹಿಂಸೆಗಳಿಗೆ ಸ್ಪಷ್ಟ ನಿರೂಪಣೆಕೊಟ್ಟು ಜನ ಜಾಗೃತಿ ಗೈದ ವಿಜಯ ತೆಂಡೊಲ್ಕರವರ ಧೈರ್ಯ ಸಾಹಸ ಪ್ರಶೌಂಸನೀಯ.ಅವರಿಗೆ ಪದ್ಮಭೂಷಣ ನೀಡಿದ್ದು ಅಭಿನಂದನೀಯ.
      ಮೂಲ ಲೇಖಕರ ಆಶಯ ವಾಕ್ಯ ಪದಗಳಲ್ಲಿಯ ಭಾವ ವಿಚಾರಗಳಿಗೆ ಚ್ಯುತಿ ಬರದ ಹಾಗೆ ಅರ್ಥ ಹಾದಿ ಬಿಡದ ಹಾಗೆ  ಕನ್ನಡಕ್ಕೆ ಅನುವಾದಿಸಿದ ಅನುವಾದಕಿ ಜಯಲಕ್ಷ್ಮಿ ಅವರ  ಕಠಿಣ ಶ್ರಮ ಯಶಸ್ವಿಯಾಗಿ ಅನಾವರಣಗೊಂಡಿದೆ. ಮರಾಠಿಮೂಲ ಲೇಖಕರಾದ ವಿಜಯ ತೊಂಡೊಲ್ಕರವರಿಗೂ ಅನುವಾದಕಿ ಜಯಲಕ್ಷ್ಮಿ ಪಾಟೀಲರಿಗೂ ಈ ಮೂಲಕ ಅಭಿನಂದನೆಗಳು.

About The Author

Leave a Reply

You cannot copy content of this page

Scroll to Top