ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಡಲ ತಟದಿ
ಉಳಿದ ಮರಳು
ಅಲ್ಲೊಂದು ಕಲ್ಲಿನ ಬೆಂಚು
ಆಪ್ತತೆಯೋ ನಂಟೋ
ತಿಳಿಯದು ಎಲ್ಲರದ್ದೂ
ಸಲಿಗೆ ಅದಕ್ಕೆ
ಹಲವರ ಕಥೆಗಳೂ
ಇಲ್ಲಿ ಜೀವಂತವಾಗಿವೆ
ಮಕ್ಕಳ ಮನೆಯ
ಸುದ್ದಿಗಳು ಇದರ ಸುತ್ತ
ಒಲುಮೆ ನಲುಮೆ
ಪ್ರೀತಿ ಪಾತ್ರರ ಕಳಕಳಿ
ಇದಕ್ಕಿದೆ ಎಂದರೂ ತಪ್ಪಿಲ್ಲ
ಕೇಳಲಿ ಎಂದು ಯಾರೂ
ಹೇಳುವುದಿಲ್ಲ ಆದರೆ
ಬೆಂಚಿಗೆ ಅನಿವಾರ್ಯ
ಸೋಲುಗಳು ನೋವುಗಳು
ಬಿಗುಮಾನದ ಮಾತುಗಳ
ಅರಗಿಸಿಕೊಂಡಿದೆ ಕಲ್ಲು
ಪ್ರತಿಯೊಬ್ಬರೂ ಬಂದಾಗಲೂ
ಚೆಂದವಿದೆ ಕಲ್ಲು ಎಂದು
ಕುಳಿತುಕೊಳ್ಳುವರು
ಹೋಗುವಾಗ ಒಮ್ಮೆ ನಕ್ಕು
ಹಗುರಾಗಿ ಹೋಗುವರು
ತರೇವಾರಿ ಮಾತುಗಳು
ಇಲ್ಲಿ ಬಂದು ಹೋಗುವುದು
ಹೆಚ್ಚು ನೆನಪಿಗೆ ಉಳಿದದ್ದು
ಪ್ರೀತಿ ಬದುಕು ಅಂತಃಕರಣ
ಕಥೆಯೋ ವ್ಯಥೆಯೋ
ಎನಿಸಿದರೂ ಎಲ್ಲರದ್ದೂ
ಒಂದೊಂದು ಜೀವನ
ಬದುಕಿನ ಖುಷಿಗೆ


About The Author

8 thoughts on “ನಾಗರಾಜ ಬಿ.ನಾಯ್ಕ ಕವಿತೆ-ಕಲ್ಲು ಬೆಂಚಿನ ಪ್ರೀತಿ”

  1. Nice….. ಕಲ್ಲಿಗೂ ಭಾವದ ನಂಟು ಇದೆ ಎಂಬ ನಿಮ್ಮೊಳಗಿನ ಭಾವಕ್ಕೆ

    1. Nice sir

      ಕರಗುವುದಾದರೆ ಕಲ್ಲು ಕರುಗಿತೇನೋ ಮನುಷ್ಯನ ಭಾವನೆಗಳ ಭಾರಕ್ಕೆ

    1. ಪರಿಶುದ್ಧ ಮನಸ್ಸಿನ ಭಾವಕ್ಕೆ ಕಲ್ಲು ಕೂಡ ಕರಗಿತೇನೋ ಎನ್ನುವ ಸಾರ್ಥಕ ಭಾವ. ಕವಿತೆ ಸುಂದರ….

  2. ಮನೆ ಮನಸುಗಳ ಮಾತಿಗೆ, ಸುಮ್ಮನೆ ಕುಳಿತು, ನಕ್ಕು ಹಗುರಾಗಿ ಹೋಗಲು ಹೋಗಲು, ಕಲ್ಲಿನ ಬೆಂಚು ಒಂದು ಆಪ್ತ ಆಸನ. ಕಥೆಯಾಗಲಿ ವ್ಯಥೆಯಾಗಲಿ ಕೇಳಿಸಿ ಕೊಳ್ಳಲು ಒಂದು ಸಹಹೃದಯದ ಮನಸ್ಸು ಬೇಕು. ಭಾವನೆಗಳು ತೆರೆದು ಕೊಳ್ಳಲು, ಕೇಳಿಸಿಕೊಳ್ಳಲು, ಕಲ್ಲು ಬೆಂಚಿನ ಪಾತ್ರವೂ ಇಲ್ಲಿ ಮುಕ್ಯ. ನಮ್ಮ ಸ್ವಗತಕ್ಕೂ ಕಲ್ಲು ಬೆಂಚು ಸಹಕಾರಿಯಾಗಿದೆ..

    ನಾನಾ ಬಾಡ

  3. ಪ್ರಕಟಿಸಿದ ಸಂಗಾತಿ ಬಳಗಕ್ಕೆ ತುಂಬಾ ತುಂಬಾ ಧನ್ಯವಾದಗಳು……..
    ಜೊತೆಗೆ ಓದಿ ಅಭಿಮಾನದಿಂದ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದಗಳು……..

Leave a Reply

You cannot copy content of this page

Scroll to Top