ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಷ್ಟವಾದರೂ ಸರಿ
ಇಷ್ಟವಾದರೂ ಸರಿ
ಅಡಿಗೆ ಮಾಡಿ ಬಡಿಸಬಹುದು ಉಣ್ಣಿಸಲೂಬಹುದು
ಹಸಿವೆ ಇದ್ದಾಗ ಮಾತ್ರ

ಬಿಗಿದು ಅಪ್ಪಿಕೊಳ್ಳಬಹುದು
ಒಪ್ಪಿಕೊಳ್ಳಬಹುದು
ಸಿಡಿಮಿಡಿ ಗೊಳ್ಳಬಹುದು
ಪ್ರೀತಿಯ ಮಳೆಗೆರೆಯಬಹುದು ಮನಸ್ಸಿನೊಳಗೆ
ಪ್ರೀತಿ ಒಲವು
ತುಂಬಿದ್ದಾಗ ಮಾತ್ರ

ಕರಗಬಹುದು
ಮರುಗಬಹುದು
ನೋವ ನೀಗಬಹುದು
ಒಲವ ತೋರಬಹುದು
ಸ್ಪಂದಿಸುವ ಹೃದಯ
ಜೊತೆಗೆ ಇದ್ದಾಗ ಮಾತ್ರ

ಇರದ ಪ್ರೀತಿಗೆ
ಮೊಳ ಉದ್ದ ಮಲ್ಲಿಗೆ
ಕೆಂಪು ಗುಲಾಬಿ
ಎಲ್ಲವೂ ವ್ಯರ್ಥ
ಅರ್ಥವಿಲ್ಲದ
ಹುಚ್ಚು ಕನಸಿಗೆ

ಮಾತಲ್ಲಿ ನಯವಿರಲಿ
ಮುಖದಲ್ಲಿ ನಗುವಿರಲಿ
ಅಂಥ:ಕರಣದಲಿ
ಪ್ರೀತಿ ತುಂಬಿರಲಿ
ಒಲವ ಒರತೆ
ಜಿನುಗುತ್ತಿರಲಿ
ಪ್ರೀತಿಯ ಅಂತರಗಂಗೆ
ತುಂಬಿ ತುಳುಕುತ್ತಿರಲಿ

ಬಾಗಿ ಮಾಗಿದಾಗ
ಬದುಕುವುದ ಕಲಿತಾಗ
ಇಂಚಿಂಚೂ ಜೀವಿಸಿದಾಗ
ಸೋಲು ಗೆಲುವು ಯಾವಲೆಕ್ಕ
ಬದುಕು ಚೊಕ್ಕ ಚೊಕ್ಕ
ಎಲ್ಲವೂ ಪಕ್ಕಾ ಪಕ್ಕಾ

————————–

About The Author

1 thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಂತರಗಂಗೆ…”

  1. ಬದುಕು ಎಂದರೆ ನಾಳಿನ ಒಲುಮೆ. ಬದುಕು ಎಂದರೆ ಎಲ್ಲವುಗಳ ನಡುವೆ ಇರುವ ಬಾಂಧವ್ಯದ ಬೆಸುಗೆ. ಮಾತು, ಮೌನ, ಪ್ರೀತಿ ಅಭಿಮಾನದ ಪರಿಭಾಷೆ. ಅಸ್ತಿತ್ವದಲ್ಲಿ ಅದರ ಅಂತರಂಗದ ಖುಷಿಯ ಸಾಕ್ಷಿಗಳು ಮನದಿ ಸದಾ ಜೀವಂತ. ಸೋಲು ಗೆಲುವಿನ ನಡುವೆ ಏನಿದ್ದರೂ ನೋಟ ಭಾವಕ್ಕೊಂದು ಹೊಸ ಮುನ್ನುಡಿ…….ಬದುಕು ಚೆಂದ ಬದುಕಲು ಎನ್ನುವ ಕವನದ ಅಂತರಾಳ ಸುಂದರ……. ಅಷ್ಟೇ ಸರಳ ……

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.
    ಕುಮಟಾ.

Leave a Reply

You cannot copy content of this page

Scroll to Top