ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ನಿನ್ನೊಂದಿಗೆ
ನೀನು ನನ್ನೊಂದಿಗೆ ಬದುಕಿನ
ಕೊನೆಯತನಕ
ಕನಸುಗಳ ಜೊತೆಗೆ
ಮನಸ್ಸಿನ ಒಳಗೆ
ಜೀವವಿರುವತನಕ
ಅಲೆಗಳಿಗೆ ಕೊನೆಯಿಲ್ಲ
ಯೋಚನೆಗೆ ಮಿತಿ ಇಲ್ಲ
ಭಾವನಾಲೋಕ ಇರುವ ತನಕ
ಹೂವು ಅರಳುವುದು
ಮನವು ಮನವ ಸೆಳೆಯುವುದು
ಪ್ರೀತಿ ಇರುವ ತನಕ
ಚಂದಿರನ ಕಾಂತಿಗೆ
ಸಾಗರದ ಸೆಳವಿಗೆ ಮುಪ್ಪಿಲ್ಲ
ಜಗವಿರುವತನಕ
ಹಾರಾಟ ಚೀರಾಟ
ಕೂಗಾಟ ಹೋರಾಟ ಮೈಯೊಳಗೆ
ಕಸುವು ಇರುವ ತನಕ
ಕನಸುಗಳಿಗೆ ಬರವಿಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಆಕರ್ಷಣೆ ಮುಗಿಯುವತನಕ
ನಕ್ಕು ನಲಿಯುತ್ತಿರು
ಖುಷಿಯ ಹರಡುತ್ತಿರು
ಉಸಿರು ಕೊನೆಗೊಳ್ಳುವತನಕ ಎಲ್ಲರೊಳಗೊಂದಾಗು
ಒಲವಿಗೆ ಜೊತೆಯಾಗು
ಹೃದಯದ ಮಿಡಿತ ಇರುವ ತನಕ


About The Author

1 thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಿಡಿತಗಳು..”

  1. ಒಲವು ಬದುಕುವ ಒಂದು ಅನುಭಾವ. ಇದು ಗಟ್ಟಿಯಾದಷ್ಟು ಜೀವನ ಪ್ರೀತಿ ಹೆಚ್ಚುತ್ತಲೇ ಹೋಗುತ್ತದೆ. ಮನಸ್ಸಿನ ಒಳಗೆ ಹೊರಗೆ ಭಾವಗಳು ಹಲವು. ಅವುಗಳೆಲ್ಲಾ ಒಂದಾಗಿ ಉಳಿಯುವುದು ಪ್ರೀತಿಯ ಹರಿವಿನೊಳಗೆ. ಉಸಿರೊಳಗೆ ಇದ್ದು ಇಲ್ಲವಾಗುವ ಜೀವದ ಉಳಿವು ಒಂದು ಸೋಜಿಗ. ಆಪ್ತತೆ ಮಾತ್ರ ನಮ್ಮದು ಎಂದು ಸಾರುವ ಕವನದ ಸೂಕ್ಷ್ಮತೆ ಅಡಗಿರುವುದು ಅದರ ನವಿರಾದ ನಿರೂಪಣೆಯಲ್ಲಿ. ನಮ್ಮದೆನ್ನುವ ಹೃದಯಸ್ಪರ್ಶಿ ಭಾವ ಸಂವೇದನೆಯಾಗಿ ಉಳಿದಾಗ ಬದುಕು ಒಂದು ವಿಶ್ವಾಸದ ನಗು ಎನಿಸುತ್ತದೆ. ಪರಿಚಯ,ಆಪ್ತರು, ಪ್ರೀತಿ ಪಾತ್ರರು ಒಂದು ಗೆಲುವಾಗಿ ಉಳಿಯುತ್ತಾರೆ. ಎಲ್ಲವನ್ನೂ ಪ್ರೀತಿಸುವ ಸಾಲುಗಳು ಇಲ್ಲಿ ಮಾತುಗಳಾಗಿ ಕುಳಿತಿವೆ ಎನಿಸುತ್ತದೆ……….ಕವನ ಸುಂದರ……..

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ…

Leave a Reply

You cannot copy content of this page

Scroll to Top