ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಲೆಕ್ಸಾಂಡರ್ ನಂತೆ ಜಗತ್ತು
ಗೆಲ್ಲುತ್ತೇನೆಂಬ ಆಸೆ ನನಗಿಲ್ಲ
ಟಾಟಾ-ಬಿಲ್೯-ಅಂಬಾನಿಯಂತೆ
ಶ್ರೀಮಂತನಾಗಬೇಕೆಂದು ಕನಸೆನಿಲ್ಲ !

ಹೊರಡುವ ಮುನ್ನ
ನನ್ನಾಕೆಯ
ಕಂಬನಿ ಜಾರದಂತೆ
ಅವಳ ಕನಸುಗಳಿಗೆ
ನೀರುಣಿಸಿ ಬೇಳೆಸಬೇಕೆಂಬ ಆಸೆ !

ಹೊರಡುವ ಮುನ್ನ
ಬಳಿಯಿದ್ದ ಅಕ್ಷರದ ಬೀಜಗಳನ್ನು
ಎಲ್ಲೆಲ್ಲಿಯೂ ಬಿತ್ತಿ
ನೀರುಣಿಸಿ ಬೆಳೆಸಿ
ಫಲ ಕೊಡುವದನ್ನು
ನೋಡುವ ಆಸೆ !

ಹೊರಡುವ ಮುನ್ನ
ದ್ವೇಷಿಸುವವರನ್ನೆಲ್ಲ ಪ್ರೀತಿಸಿ
ಶತೃಗಳನ್ನು ಮಿತ್ರರಾಗಿಸಿ
ಎಲ್ಲರ ಎದೆಯಾಳದಲ್ಲಿ
ನೆನಪಿನ ನಕ್ಷತ್ರವಾಗಿ
ನೆಲೆಯಾಗುವ ಆಸೆ ?


About The Author

4 thoughts on “ನಾಗಪ್ಪ ಸಿ ಬಡ್ಡಿ ಅವರ ಕವಿತೆ-ಹೊರಡುವ ಮುನ್ನ”

Leave a Reply

You cannot copy content of this page

Scroll to Top