ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಣುಶಕ್ತಿ ಬಾಂಬು
ಪಕ್ಷಿ ಪ್ರಾಣಿಯ ಕೊಂದು
ಹೆಮ್ಮೆಯಲಿ ಮೆರೆಯುವೆವು
ಭೂಪರೆಂದು

ಎಲ್ಲೆಂದರಲ್ಲಿ ಮೊಬೈಲ್ ಟವರ್
ಹದ್ದು ಗುಬ್ಬಿ ಬೆಳವ ಗೀಜಗ
ದಾರಿಯಲಿ ಸತ್ತು ಹೋದವು
ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ

ಕಾಡು ಕಡಿದೆವು ನಾವು
ಕಾಂಕ್ರೆಟಿನ ಗೂಡು
ಕೆರೆ ಹಳ್ಳ ನದಿಯೊತ್ತಿ
ನೆಲವ ಮಾಡಿದೆವು ಸುಡುಗಾಡು

ಮದ್ದು ಗುಂಡು ಪಟಾಕಿ
ಕುಲಗೆಟ್ಟಿತು ವಾಯು
ಡಿಜೆ ವಾಹನ ಯಂತ್ರಗಳ ಸಪ್ಪಳ
ಕಿವುಡರಾದೆವು ಶಬ್ದ ಮಾಲಿನ್ಯ

ಬದುಕ ಬೇಕು ನಾವು
ಬದುಕಿಸುತ ಜಗವನ್ನು
ಭೂಮಿ ಒಡೆಯರು ನೋಡು

ಹುಲಿ ಆನೆ ಜಿಂಕೆಗಳು

About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು”

  1. ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯದ ದುಷ್ಪರಿಣಾಮ ಗಳಿಗೆ ಮನುಷ್ಯನ ಸ್ವಾರ್ಥ ಕಾರಣ .. ಹಾಗೂ ಪರಿಸರದ ಈ ಸ್ಥಿತಿಗೆ ,ನಮ್ಮನ್ನು ನಾವೇ ಅವಲೋಕನ ಮಾಡಿಕೊಂಡು ಅದರ ಸಂರಕ್ಷಣೆಗಾಗಿ ಸುಂದರ ನಾಳೆಗಳಿಗಾಗಿ ನಾವು ಪಣ ತೊಡುವದು ಎಷ್ಟು ಮುಖ್ಯ ಎಂಬ ಸೂಕ್ಷ್ಮ ಅಂಶಗಳ ಸುಂದರ ಅನಾವರಣ ಸರ್. ಪರಿಸರದ ಸಂರಕ್ಷಣೆ ಕುರಿತು ತಮ್ಮ ಕಳಕಳಿಯ ಕಾಳಜಿ …ತಮ್ಮಂತೆ ಎಲ್ಲರಲ್ಲೂ ಮೂಡಿದರೆ ಈ ಧರೆ ಒಂದು ಸೊಗಸಾದ ನಂದನವನ ವಾಗುತ್ತದೆ.

Leave a Reply

You cannot copy content of this page

Scroll to Top