ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರುನಾಡ ಕಲೆಗೆ ಅದರಲ್ಲೂ ಚಿತ್ರಕಲೆಗೆ ಹಾಸನ ಜಿಲ್ಲೆಯ ಕೊಡುಗೆಯೂ ಸಾಕಷ್ಟಿದೆ. ಈ ಕಲೆಯ ನೆಲೆಯನ್ನು ಪರಿಚಯಿಸಲು ಹೊರಟು ನನಗೆ  ಪ್ರತಿಭಾನ್ವಿತ ಚಿತ್ರಕಲಾವಿದೆ  ಚಂದ್ರ ಪ್ರಭಾರವರ ಮಾಹಿತಿಯನ್ನು ಒದಗಿಸಿದವರು  ಚಿತ್ರಕಲಾವಿದರು ಚಂದ್ರಕಾಂತ ನಾಯರ್. ಚಂದ್ರಪ್ರಭಾರಿಗೆ  ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ. ಈ ಆಸಕ್ತಿಯೇ ಹವ್ಯಾಸವಾಗಿ ಇಂದು ಚಿತ್ರಕಲೆಯಲ್ಲಿ ಪ್ರಭುದ್ಧರಾಗಿದ್ದಾರೆ.

ಕಲಾವಿದೆ ಚಂದ್ರಪ್ರಭರವರು ಶಿವಣ್ಣ ಹಾಗೂ ಪದ್ಮ ದಂಪತಿಗಳ ಮಗಳಾಗಿ ಜುಲೈ ೧೫ ರಂದು ಅರಕಲಗೂಡು ತಾಲೂಕಿನಲ್ಲಿ ಜನಿಸಿದರು. ಇವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಅರಕಲಗೂಡುನಲ್ಲಿ ಮುಗಿಸಿ ನಂತರ ಚಿತ್ರಕಲಾ ಅಭ್ಯಾಸಕ್ಕಾಗಿ ಹಾಸನದ ನಿರ‍್ಮಲ ಚಿತ್ರಕಲಾ ಶಾಲೆಗೆ ಸೇರುತ್ತಾರೆ.  ಕಲಾ ಶಾಲೆಯಲ್ಲಿ ಉಪನ್ಯಾಸಕರ ಪ್ರೋತ್ಸಾಹದಿಂದ ಕಲೆಯ ಅನೇಕ ತಂತ್ರಗಾರಿಕೆ,  ಮಾದ್ಯಮ ಬಳಸುವ ವಿಧಾನ, ಚಿತ್ರಕಲೆಯ ಅನೇಕ ಆಯಾಮಗಳನ್ನು ಅರಿತುಕೊಳ್ಳಲು ಅನುಕೂಲವಾಗುತ್ತದೆ.

ಅಲ್ಲಿಂದ ಮುಂದೆ ಕಲೆಯಲ್ಲಿ ಪ್ರಾಯೋಗಿಕ ಚಿಂತನೆಯಿಂದಾಗಿ ೨೦೧೮ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎಫ್.ಎ ಸ್ನಾತಕೋತ್ತರ  ಪದವಿಯನ್ನು ಸಂಪೂರ್ಣ ಗೊಳಿಸಲು ನೆರವಾಗುತ್ತದೆ.
 ಚಿತ್ರಕಲಾ ಪದವೀದರೆ  ಪ್ರಸ್ತುತ ನಗರದ ಪ್ರತಿಷ್ಠಿತ ಶಾಲೆ ಹಾಸನ್ ಪಬ್ಲಿಕ್ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾಯ೯ ನಿರ‍್ವಹಿಸುತ್ತಿದ್ದಾರೆ. ಇವರದು ಬದುಕಿನುದ್ದಕ್ಕೂ ಸ್ವಾಭಿಮಾನದ ಜೀವನ. ಕಲೆಯಲ್ಲಿ ಜೀವಂತಿಕೆಯನ್ನು ಕಂಡು ಕರುನಾಡ ಕಲೆಯ ಸಿರಿವಂತಿಕೆಯನ್ನು ಕಾಣಬಯಸುವ ಕಲಾ ಸರಸ್ವತಿ. ಸಾವಿರಾರು ಮಕ್ಕಳ ಹೃದಯದಲ್ಲಿ ತನ್ನ ಕುಂಚದಿಂದ ಕಣ್ಣಿಗೆ ಹಬ್ಬದ ರಸದೂಟ ನೀಡಿ ಆತ್ಮೀಯತೆಯ ಮುಗ್ಧ ನಗುವನ್ನು ,,ಆಸಕ್ತಿಯನ್ನು ಉಂಟುಮಾಡುವ ಚೈತನ್ಯ ಶಕ್ತಿ ಚಂದ್ರಪ್ರಭಾರವರದ್ದಾಗಿದೆ.
ಚಂದ್ರಪ್ರಭಾರವರು ಬಿಡಿಸಿದ ವೈವಿಧ್ಯಮಯ ಚಿತ್ರಗಳ ಕಲಾಕೃತಿಗಳೆಂದರೆ ಸಾಮಾಜಿಕ ಚಿತ್ರಗಳು, ಸೃಜನಾತ್ಮಕ ಚಿತ್ರಗಳು ಕ್ರಿಯಾತ್ಮಕ ಚಿತ್ರಗಳು, ರೇಖಾಚಿತ್ರಗಳು,  ದೇವಿ ದೇವತಾ ಚಿತ್ರಗಳು, ಅದ್ಭುತ ಶಿಲಾಬಾಲಕಿಯ ಚಿತ್ರಗಳು ,ಪ್ರಕೃತಿ ರಮಣೀಯ ಚಿತ್ರಗಳು ,ಪ್ರಾಣಿ-ಪಕ್ಷಿಗಳ ಸುಂದರ ನೋಟಗಳ ಚಿತ್ರಗಳು, ಗಿಡ ಮರಗಳ ರಮ್ಯತೆಯ ಚಿತ್ರಗಳು ,ಕವಿ ಹೃದಯ ಗೆದ್ದ ಆಕಾಶದ ಮೇಘಮಾಲ ಚಿತ್ರಗಳು, ನೂರಾರು ಮಕ್ಕಳು ಬಯಸುವ ಚಿತ್ರಗಳು, ಒಂದೆರಡಲ್ಲ ನೂರಾರು ವೈವಿಧ್ಯ ಚಿತ್ರಕಲಾ ಲೋಕ.

ಕರ್ನಾಟಕ  ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಚಿತ್ರಕಲಾ ಮೇಳಗಳು ಮತ್ತು ಚಿತ್ರಕಲಾ ಕ್ಯಾಂಪ್  ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾರ‍್ಯಕ್ರಮಗಳ ರಂಗಮಂಟಪಗಳನ್ನು ಸಜ್ಜುಗೊಳಿಸುವಲ್ಲಿ ವಿಶಿಷ್ಟ ಕಲಾಪ್ರತಿಭೆ ಇವರಲ್ಲಿದೆ. ತಮ್ಮ  ಬಿಡುವಿನ ಸಮಯದಲ್ಲಿ ಚಿತ್ರಕಲೆಗಾಗಿ ಆಸಕ್ತಿ ತೋರಿಸುವ ಮಕ್ಕಳಿಗೆ ಮಹಿಳೆಯರಿಗೆ ಉಚಿತವಾಗಿ ಚಿತ್ರಕಲೆ ಕಲಿಸುವ ಗುರುವಾಗಿದ್ದಾರೆ. ಚಿತ್ರಕಲೆಗೋಸ್ಕರ ತನ್ನ ಬಾಳನ್ನೇ ಮುಡುಪಾಗಿಟ್ಟು  ಬದುಕು ನಡೆಸುತ್ತಿರುವ  ಚಂದ್ರಪ್ರಭ ಮೇಡಂ ಚಿತ್ರಕಲೆ ಎಂಬ ಸಾಗರದಲ್ಲಿ  ಸ್ವಂತ ಶಕ್ತಿಯಿಂದ ಗುರುತಿಸಿಕೊಳ್ಳುವ ಹೆಮ್ಮೆಯ ಸಾಧಕಿ.
——————————————–

About The Author

1 thought on “ಚಿತ್ರಕಲಾವಿದೆ ಚಂದ್ರಪ್ರಭಾರ ಕುಂಚದಲ್ಲಿ ರೂಪುತೆಳೆದ ನವ್ಯ ಕಲೆ ನೂರೂರು-ಗೊರೂರು ಅನಂತರಾಜು, ಹಾಸನ.”

Leave a Reply

You cannot copy content of this page

Scroll to Top