ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಪ್ಪು ಮಣ್ಣಿನ
ತುತ್ತಿನ ಚೀಲ
ಸೋರುತಿದೆ;
ಕರ ಭಾರವ ಏರಿ
ತುಂಬಲು
ತಡಕಾಡುತಿದೆ;
ನಡೆಯುವ
ದಾರಿಯ ಮಣ್ಣಲಿ
ಹನಿಯಾಗಿ ಜಿನುಗುತಿದೆ;
ನಡೆದಾಡಿದ
ಜನವು ಹೊಸ ದಾರಿಗೆ
ಕಾಯುತಿದೆ;
ಧರಣಿ ಹೀರಿದ
ಜಲವು ,ಸುಂಕವಾಗಿ
ಚೀಲದ ಹಾದಿಯ
ಸೇರುತಿದೆ;
ಭಾರ ಹೊತ್ತ ಮಣ್ಣ
ಕಣವು
ನೀರಿಗಾಗಿ ನರರ
ಬೇವರ
ಬಯಸುತಿದೆ;
ಆಸೆಯ ಬಿಸಿಲು
ತೋರಿಸಿ
ತೆರಿಗೆಯ ಹನಿಯಲಿ
ಮೋಡವಾಗಲು
ಕುಣಿಯುತಿದೆ;
ಇಲ್ಲದ ಹನಿಯ ನಂಬಿ
ಧರಣಿಯ
ಬರಡಾಗಿಸಿ
ಮುಗ್ದ ಜೀವಗಳ
ರಕ್ತವ ಹೀರುತಿದೆ !!
ನೊಂದ ಎದೆಗಳು
ಅದೇ ಸುಂಕದ
ನೀರಲಿ ಕೆರೆಯ
ಕನಸು
ಕಾಣುತಿದೆ !!


About The Author

Leave a Reply

You cannot copy content of this page

Scroll to Top