ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಹವಾಸದಿ ಸಾಗುತ
ಸಲೀಸಾಗಿ ನಾ ಸೋತೆ
ಸಲ್ಲಾಪದ ಸವಿನುಡಿಗೆ…

ತಾಕೀತು ಮಾಡದೆ
ತಕರಾರು ಇಲ್ಲದೆ ತಲೆಬಾಗಿದೆ
ನಲುಮೆಯ ಪ್ರೀತಿ ಮೋಡಿಗೆ…

ಒಲವಿನ ಚಿಲುಮೆಯಲಿ
ಹಗುರಾಗಿ ನಾ ಮಿಂದೆ
ಪ್ರೇಮ ಅನುರಾಗದ ಹಾಡಿಗೆ…

ಕನಸಿನ ಮೆರವಣಿಗೆಗೆ
ಜೋಕೆಯಿಂದ ಸಾಗಿದೆ
ಮೆಲ್ಲನೆಯ ಈ ನನ್ನ ನಡಿಗೆ…

ಬೆಸೆಯಿತು ಇಬ್ಬರ ಸಾಂಗತ್ಯ
ತನುವಿನ ನರ ನಾಡಿಗೆ


About The Author

Leave a Reply

You cannot copy content of this page

Scroll to Top