ರಾಜೇಶ್ವರಿ ಎಚ್ ಬಜ್ಪೆ ಕವಿತೆ-ನೆನಪು
ಕಾವ್ಯ ಸಂಗಾತಿ ರಾಜೇಶ್ವರಿ ಎಚ್ ಬಜ್ಪೆ ನೆನಪು ಮತ್ತೆ ಮತ್ತೆ ಸೆಳೆಯುತ್ತಿದೆನಿನ್ನ ಪ್ರೀತಿ ನನ್ನೆಡೆದೂರ ತೀರ ಸಾಗಿ ನಡೆದರೂಕಣ್ಣ ನೋಟ ನಿನ್ನೆಡೆ ಹೂವಿಗೇನು ಗೊತ್ತು ಗಮ್ಯಅರಳಿ ನಗುವ ಬೀರಿತುತೇರನೆಳೆದು ಚೆಲುವ ಬೀರಿಮರೆತು ಮಂದೆ ಸಾಗಿತು ಮೊಳಕೆಯೊಡೆದ ಭಾವ ಬಲಿತುಮನವ ಹಸಿರು ಮಾಡಿದೆಏನ ಬೇಡದೆ ಸತ್ತ್ವ ತನ್ನದೆನೂರು ಕನಸಿನ ಬೇರಿದೆ ಕಾಣದಿರುವ ಬಂಧ ಹಳೆಯದುಬೆಸೆದ ಕ್ಷಣವು ಯಾವುದೋಹೊಸೆಯದಂತೆ ಸರಿಸಿ ದೂರಕೆನಗೆಗು ಸಂಭ್ರಮ ಯಾರದೋ ಹರಿವ ಕಾಲವು ಹೊಸತು ಬಯಸೆಸಡಿಲಗೊಂಡಿತು ಒಲುಮೆಸುಪ್ತದೀಪ್ತಿ ಬೆಳಗುತಿರಲುನಿಜದ ಭಾವವು ಚಿಲುಮೆ
ರಾಜೇಶ್ವರಿ ಎಚ್ ಬಜ್ಪೆ ಕವಿತೆ-ನೆನಪು Read Post »









