ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ
ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಹುಡುಕುತ್ತಿದೆ ಮನ ಇರುಳಲಿ ಬೆಳಕ ಹೊಳಹಿನಂತೆಎದೆಯಾಳದಿ ನೀ ಹಚ್ಚಿದ ಪ್ರೀತಿಹಲವು ಭಾವಗಳು ಬಿರಿದುಮನ ತಣಿಸಿದ ಹೃದಯಇಂದು ಬರಿದಾಗಿ ಏಕಾಂತದಲಿಹುಡುಕುತ್ತಿದೆ ಮನ ನಿನ್ನ ದಾರಿಯ… ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನಮುದಗೊಂಡ ಮನದ ಕನಸಿಗೆ ಜೀವ ಒಂದಾಗಿನಿನ್ನುಸಿರಲಿ ನನ್ನುಸಿರು ಮಿಳಿತವಾಗಿಇಂದು ಹುಡುಕುತಿದೇ ಮನಕುಳಿರ್ಗಾಳಿಯಲಿ ಆ ಬಿಸಿಯುಸಿರ…. ಬದುಕಿನ ಮನದ ಆಸೆಗೆಯೋಧನೆಂಬ ಬುತ್ತಿಯ ಹೆಗಲೇರಿಸಿನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ… ವೀರಾವೇಷದಿ ನೀ ಮೆರೆದೆನಾಡ ರಕ್ಷಣೆಗೆ ಶತ್ರು ಪಡೆ ಬಡಿದುರಣಭೂಮಿಯಲಿ ಉಸಿರ ಕಳಚಿ ಅಮರನಾದೆಇಂದು ಹುಡುಕುತ್ತಿದೆ ಮನಹಲವು ರುಂಡದ ನಡುವೆ ನನ್ನೊಲವಿನ ಜೀವವ ತಿಲಕವಿಲ್ಲದ ಬರಿದಾದ ಹಣೆಗೆನಿನ್ನ ಬೆರಳ ನೆತ್ತರನಿಟ್ಟು ಸುಮಂಗಲೆಯಾಗಿಸಿದೆಅರಳಿದ ಹೂ ಮುಡಿಗಿರಿಸಿ ಕನಸ ಬಿತ್ತಿದೆಛಿದ್ರವಾದ ಕನಸ ಹಿಡಿದು ಶೂನ್ಯ ನೋಟದಲಿಇಂದು ಹುಡುಕುತ್ತಿದೆ ಮನ ನಿನ್ನ ನೆತ್ತರವ…
ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ Read Post »









