ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಉದ್ಭವ

ಡಾ ಡೋ ನಾ ವೆಂಕಟೇಶ

ಕವನಗಳು ಒಂಥರಾ
ಜೀವ ಉದ್ಭವಿಸುವ ಪರಿ
ಭ್ರೂಣ ಮೈದಳೆವ ಬಯಕೆ

ಸತತ ಪರಿಶ್ರಮದ
ಕನಸಿನ ಹತ್ಯೆ
ಮತ್ತೆ ನನಸಿನ ಕಸುವು !

ತಪಾಸಿಸಿದ ವೈದ್ಯ ಧುತ್ತೆಂದು ಘೋಷಿಸಿದ
ಗರ್ಭದ ಹಾಗೆ ಕೆಲವೊಮ್ಮೆ
ತೀರದ ಕೆಲಸಕ್ಕೆ ಹೊರಟಾಗ
ಬರೆಯಲೇ ಬೇಕೆನಿಸಿದ ಆ ಅನಿವಾರ್ಯತೆ !

ಕವನೋದ್ಭವಕ್ಕೂ
ಕೂಸಿನುದ್ಭವಕ್ಕೂ ಅಂಥ
ವ್ಯತ್ಯಾಸ ಇಲ್ಲ

ಮಾತ್ರ ಅಲ್ಲಿ ಒಬ್ಬರೇ!
ಇಲ್ಲಿ ಇಬ್ಬರಾದರೂ ಬೇಕು
( ಈಗೀಗ ಇದೂ ಬದಲಾಗುವ
ಸಂಧರ್ಭದ ಸೃಷ್ಟಿ)

ಸಾರಾಂಶ ಇಷ್ಟೇ
ಕವನೋದ್ಭವಕ್ಕೂ
ಮಗುವೋದ್ಭವಕ್ಕೂ ಅಂತಿಂಥ
ವ್ಯತ್ಯಾಸಗಳಿಲ್ಲ !!

ಗೆಳೆಯ ಏನಂತೀಯಾ?


About The Author

4 thoughts on “ಡಾ ಡೋ ನಾ ವೆಂಕಟೇಶ ಕವಿತೆ-ಉದ್ಭವ”

  1. ಕವನೋಧ್ಭವಾಕ್ಕೆ ಕವಿ ಹಾಗೂ ಅವನ ಜೀವನದ ಅನುಭವಗಳು ಬೇಕು. ಇಬ್ಬರ ಪ್ರೇಮ ಕವಿತೆಯಿಂದ ಮಗುವೋಧ್ಭವ ಏನ್ನಾಭಾಹುದ??

  2. Dr K B SuryaKumar

    ಕವನುದ್ಭವಕ್ಕೆ ಬೇಕು ಪರಿಣಿತಿ,
    ಬ್ರುನೋಧ್ವವ ಆಗಿ ಬಿಡಬಹುದು ಅವನತಿ.
    ಎರಡರ ನಡುವಿನ ಸಂಬಂಧ ಅತೀ ಸೂಕ್ಷ್ಮ
    ಮತ್ತೊಮ್ಮೆ ಚಪ್ಪಾಳೆ ❤️

    1. D N Venkatesha Rao

      ಉದ್ಭವಗಳು ನಿರಂತರ. ತದ್ಭವಗಳು ಆಕಸ್ಮಿಕ
      ಸೂರ್ಯ ಥ್ಯಾಂಕ್ಸ್!!

Leave a Reply

You cannot copy content of this page

Scroll to Top