ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೀಗೊಂದು ಅಭಿನಂದನೆ

ಟಿ.ದಾದಾಪೀರ್ . ತರೀಕೆರೆ

‘ಪುಷ್ಪ ಸೌಗಂಧಿಕೆ ನೀನು’
ಎಲ್ಲೆಲ್ಲು ನಿನ್ನ ಪರಿಮಳದ ಕಂಪು
ಅಭಿನಂದಿಸಲು ನಿನ್ನ
ದೇವ ಬನದ ಮಂದಾರವೇ ನಾಚಿದೆ

‘ ಹಾಲ್ಬೆಳಕು ಚೆಲ್ಲಿರಲು ನೀನು’
ಅಭಿನಂದಿಸಲು ನಿನ್ನ
ಹುಣ್ಣಿಮೆಯ ಅಂದ ಸಾಲದೇ ಕೊಂಚ ಮಂದ ಎನಿಸಿದೆ

‘ಬೆಳ್ಮುಗಿಲು ನೀನು’
ಬೆಳ್ಳಕ್ಕಿ ಸಾಲು , ಸಂಜೆ ಬಂಗಾರದ ಬಣ್ಣ ನಿನ್ನ ಮೈ ಎಲ್ಲ
ಅಭಿನಂದಿಸಲು
ಕಲಾವಿದರ ಕುಂಚಗಳಲಿ ಬಣ್ಣ ಮಾಸಿದೆ

‘ ಕಣ್ಣು ಹಾಯಿಸಿದಷ್ಟು ಕಾಣುವ
ಕಡಲು ನೀನು’
ನೈದಿಲೆಯ ಸಂಭ್ರಮ ,ಅಲೆಗಳ ಕುಣಿತ ನಿನ್ನಲಿ
ಆಕಾಶ ಸುಮ್ಮನಾದಂತಿದೆ
ಅಭಿನಂದಿಸಲು ದೈಯ೯ವಿಲ್ಲದೆ


About The Author

Leave a Reply

You cannot copy content of this page

Scroll to Top