ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ ಹೊಸ ಕವಿತೆ

ಹೆಂಗಸರು ಬರೆದ ಸಾಹಿತ್ಯ

ಅವರ ಪ್ರಚಲಿತ.ಉವಾಚ..,

ಅಯ್ಯೋ..!!
ಗಂಡ ಮಕ್ಕಳು ತವರು
ಅತ್ತೆ ನಾದಿನಿ ಮೈದುನ
ಗೆಳತಿಯರ ಸುತ್ತ ಗಿರಕಿ ಹೊಡೆದ
ಹೆಂಗಸರು ಬರೆದ ಸಾಹಿತ್ಯ
ಛೆ….

ಸೀರೆ ರವಿಕೆ ಬಣ್ಣ ಬಣ್ಣದ ಡ್ಸೆಸ್ ಗಳು
ಲಂಗ ದಾವಣಿ ಮ್ಯಾಕ್ಸಿ ಮಿಡ್ಡಿ ಚೂಡಿದಾರ
ಜೀನ್ಸು ಶರ್ಟು ಲೆಹಂಗ ಸ್ಕರ್ಟು
ಬಹಿರಂಗ ಉಡುಗೆಗಳದೆ ಬಣ್ಣನೆ
ಏನಿದೆ ಅದರಲಿ ಆ ಸಾಹಿತ್ಯದಲಿ..
ಛೆ..ಛೆ..

ಊಟ ತಿಂಡಿ ಕಾಫಿ ಕುರುಕಲು ತಿನಿಸು
ತಂಪು ಹಾಟು ಪಾನೀಯಗಳು
ಕಶಾಯ ಸೂಪು ಹಾಲು ಮಜ್ಜಿಗೆ
ಏನೇನಿಲ್ಲ ಆ ಸಾಹಿತ್ಯದಲಿ
ಛೆ..ಛೆ..ಛೆ..

ತಟ್ಟೆ ಲೋಟಗಳು ಪಿಂಗಾಣಿ ಪಾತ್ರೆಗಳು
ಭರಣಿ ಕಲಗಡಿಗೆ ಮಡಕೆ
ತಾಮ್ರ ಹಿತ್ತಾಳೆ ಸ್ಟೀಲು ಪ್ಲಾಸ್ಟಿಕ್ ಚರ್ಚೆಗಳು
ಮತ್ತೇನಿಲ್ಲ ಅದರಲಿ
ಛೆ..ಛೆ..ಛೆ..ಛೆ..

ಸ್ವಚ್ಚತೆ ಅಲಂಕಾರ ಗೃಹಬಳಕೆ ವಸ್ತುಗಳು
ವಿವಿಧ ವಿನ್ಯಾಸ ಕಸೂತಿ ಬಣ್ಣದ ಕಾರ್ಪೆಟ್ಡು
ಸೋಫಾ ಕುರ್ಚಿ ಕಿಟಕಿ ಕವರ್ರುಗಳು
ಹೂದಾನಿ ಶೋಕೇಸಿನ ಸಾಮಾನುಗಳು
ಇದರದೇ ಬರಹ ಏನಿಲ್ಲ ಅದರಲಿ
ಛೆ..ಛೆ…!!

ಮತ್ತೇನೂ ಮಗದೊಂದು ಇಲ್ಲದ ಸಾಹಿತ್ಯ
ಗೊತ್ತಿಲ್ಲವೆ ಹೆಂಗಸರ ಬುದ್ಧಿ
ಮೊಣಕಾಲ ಕೆಳಗೆ‌..!
ಛೆ..ಛೆ..!!

ನನ್ನ ಸ್ವಗತ ಉವಾಚ ಈಗ..,

ಉಸ್ಸಪ್ಪಾ..! ಅಯ್ಯಪ್ಪಾ..!!
ಅವರೆಲ್ಲರ ಮಾತು
ತಲೆಗೊಂದೊಂದು..ತೋರಿದಂತೆ
ಎದೆಯ ತೂರಿಕೊಳ್ಳುವ ಶರಗಳು..!!

ಮಹಾತ್ಮರೆ…
ಕೊಳಕು ಬಟ್ಟೆ ಒಗೆದ ಕೈಗಳು
ಎಂಜಲು ತಟ್ಟೆ ತೊಳೆದ ಕರಗಳು
ತೊಟ್ಟಿಲು ತೂಗುವ ಕೈಗಳು
ಹಾಲೂಡಿಸಿ,ತುತ್ತುಣಿಸಿ
ಮುತ್ತಿಟ್ಟು ಹೆಸರಿಟ್ಟು
ಮೈಸವರಿ ತಲೆ ನೇವರಿಸಿ
ಅನವರತ ಶುಭಕೋರುವ
ಆ ಎಲ್ಲ ಸತತ ಹಾರೈಕೆಗಳು

ನಿದ್ದೆ ಕಾಣದೆ ಜಂತಿ ಎಣಿಸಿದ ಕಂಗಳು
ಬಾಗಿಲ ಹೊಸಿಲಲಿ ನಿಂತ ಗಳಿಗೆಗಳು
ನಿರೀಕ್ಷಿಸಿದ ವರ್ತನೆಗಳು
ಉಕ್ಕುವ ಭಾವಗಳು
ಬಂಧಿಸಿದ ಕಾಮನೆಗಳು
ಇಷ್ಟವಿರಲಿ ಇಲ್ಲದಿರಲಿ
ಎಲ್ಲರೊಳಗೊಂದಾದ ಸಮ್ಮತಗಳು
ಪಾಲಿನದನ್ನು ಸ್ವೀಕರಿಸಿದ ಒಮ್ಮತಗಳು
ಇವೆಲ್ಲ ಹೆಂಗಸರವೆ…!!
ತಿಳಿಯಬೇಕಿತ್ತು ನೀವು..
ಹೇಳಿ
ಇವುಗಳನ್ನೆಲ್ಲ ಮರೆತಿರಾ..
ಬದುಕಿನ ಹಸಿ ಹಸಿ ಸಾಹಿತ್ಯವ
ಮನಬಂದಂತೆ ಹಂಗಿಸುವವರೆ‌….

ಹೇಳಿ..
ಇವೆಲ್ಲ ಇರದಿದ್ದಲ್ಲಿ..
ಬದುಕ ಬಿಟ್ಟು ಇರುತ್ತಿದ್ದಿರಾ‌…??
ಉಪವಾಸ ಬರೆಯುತ್ತಿದ್ದಿರಾ…??!

============================

ಅನಸೂಯ ಜಹಗೀರದಾರ

About The Author

2 thoughts on “ಅನಸೂಯ ಜಹಗೀರದಾರ-<strong>ಹೆಂಗಸರು ಬರೆದ ಸಾಹಿತ್ಯ</strong>”

  1. ಸುಜಾತಾ ಲಕ್ಮನೆ

    ಚಂದದ ನೈಜ ಸಂಗತಿ ಬಿಂಬಿಸಿದ ಕವನ…
    ಹೆಂಗಸರ ಸಾಹಿತ್ಯವೆಂದರೆ ಈಗಲೂ ಸಾಹಿತ್ಯ ಲೋಕ ತನ್ನ ಓರೆಗಣ್ಣಿನಲ್ಲೇ ನೋಡುತ್ತೆ….

Leave a Reply

You cannot copy content of this page

Scroll to Top