ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆಸೆ—ಕನಸು

ಅಬ್ಳಿ,ಹೆಗಡೆ

ಮುನಿಸುಗೊಂಡು
ಮನಸು ಮುಚ್ಚಿದಾಗ-
ಆಸೆ ಕದತೆರೆದು
ಕರೆಯುತ್ತದೆ..ಸುಂದರ
ಕನಸುಗಳನ್ನ….
ಸಾಂತ್ವನ ಹೇಳುವದಕ್ಕೆ….
ಬಣ್ಣದ ರಂಗೋಲಿ ಬಿಡಿಸಿ,
ಖುಷಿ ಪಡುವದಕ್ಕೆ….
ಖಾಲಿ ಬಾನಲ್ಲಿ ಚುಕ್ಕಿಗಳ

ಚೆಲ್ಲಾಡುವದಕ್ಕೆ….
ಪೇಲವ ಮುಖದ
ಒಣಗಿದ ತುಟಿಗೆ
ಹೂ ಮುತ್ತನೊತ್ತಿ,
ಹಸಿ,ಹಸಿಯಾಗಿಸುವದಕ್ಕೆ….
ಮಾಗಿಯ ಚಳಿಗೆ
ನಡುಗುವ ಮೈ,ಮೈ-
ಸ್ಪರ್ಶಿಸಿ,ಬೆಂಕಿಯಕಿಡಿ-
ಹೊತ್ತಿಸಿ,………
ಬೆಚ್ಚಗಾಗಿಸುವದಕ್ಕೆ…..
“ಅರ್ಥ”ವಾಗದ್ದನ್ನು
ಅರ್ಥವಾಗಿಸುವದಕ್ಕೆ….
“ಅಸಹ್ಯ”ವೆನಿಸಿದ್ದನ್ನೂ
ಸಹ್ಯವಾಗಿಸುವದಕ್ಕೆ……
“ಆಸೆ” ಕದತೆರೆದು,
ಕರೆಯುತ್ತದೆ..ಸುಂದರ
ಕನಸುಗಳನ್ನ….!


About The Author

Leave a Reply

You cannot copy content of this page

Scroll to Top