ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅವ್ವಾ.. ನನ್ನವ್ವಾ

ಸವಿತಾ ಇನಾಮದಾರ್

ಮಣ ಭಾರದ ಕನಸಿನ ಗಂಟನ್ನ
ಅಂಜದ ಹೊತ್ತಿದ್ದಿ
ಅಪ್ಪನ ಜಾಗಾ
ಅಳುಕದ ತುಂಬಿದ್ದಿ
ದಿಟ್ಟ ಹೆಜ್ಜೀ ಇಟ್ಟು
ನಿನ್ನ ಜೀವಾ ಸವಿಸಿದ್ದ
ನನ್ನ ನಗಿಯಾಗ ನಿನ್ನ
ಮನದ ನೋವನ್ನ ಮರತಿದ್ದಿ
ಅವ್ವಾ…ನನ್ನವ್ವಾ..

ಹೊಸ ಬೆಳಕನ್ನ
ನೀ ನನಗ ತೋರಿಸಿದ್ಡಿ,
ಹೊಸ ಉಸಿರನ್ನ
ನೀ ನನಗ ಕೊಟ್ಟಿದ್ದಿ,
ನಿನ್ನ ಋಣದ ಕಥಿ ನಾ
ಬರದಷ್ಟೂ ಸಾಲದವ್ವ
ನಿನ್ನ ಪ್ರೀತಿಯ ಬುತ್ತಿ ನಾ
ಉಂಡರೂ ಮತ್ತಷ್ಟು ಬೇಕವ್ವ
ಪ್ರತಿ ಜನಮಕೂ ನೀನ
ಆಗು ನನ್ನ ಹಡದವ್ವ
ನನ್ನ ಜೀವನದ
ನವದುರ್ಗಾ ದೇವಿ ನೀ ಆಗವ್ವಾ.
ಅವ್ವಾ…. ನನ್ನವ್ವಾ.


ಸವಿತಾ ಇನಾಮದಾರ್.

About The Author

Leave a Reply

You cannot copy content of this page

Scroll to Top