ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುಗಾದಿ ವಿಶೇಷ

ಬಾ ಬಾ ವಸಂತ

ಬಾ ಬಾ ವಸಂತ ಬಳಿಗೆ
ಹೊಸವರುಷದ ಬಾಗಿಲಿಗೆ

ಕಾದಿರುವೆ ನಿನಗಾಗಿ
ನಿನ್ನ ಬರುವಿಕೆಗಾಗಿ

ಹರುಷ ಹೊತ್ತು ಬಾ
ವಿರಹ ಸರಿಸು ಬಾ

ಹಳೆ ಗುರುತುಗಳ ಅಳಿಸು
ನೋವ ಹೃದಯವ ನಗಿಸು

ಹೂಗಳ ಮೂಡಿಸು ಅಂಬರಕೆ
ಹಸಿರ ಹಾಸು ಭೂಮಿಗೆ

ಉದುರಿದ ಎಲೆಗಳ ಬೇಸರ ಮರೆಸು
ವನರಾಶಿಗೆ ನವಚೇತನ ತುಂಬಿ ಹರಸು

ಕೋಗಿಲೆಯೊಂದು ಹಾಡ ಹಾಡಲಿ
ಕವಿಗೊಂದು ಕವಿತೆ ಹುಟ್ಟಲಿ

ಜಗಕೆ ಜ್ಯೋತಿಯಾಗು
ನೋವ ನೀಗಿ ಸ್ನೇಹಿಯಾಗು

ಹಗಲು-ರಾತ್ರಿಗೂ ತಂಗಾಳಿಯಾಗು
ಬೇವು-ಬೆಲ್ಲದ ಸಮ್ಮಿಲನಕ್ಕೆ ಸಾಕ್ಷಿಯಾಗು

ಕೋಗಿಲೆಯ ಗಾನಸಿರಿ
ನವಿಲಿನ ನಾಟ್ಯ ಮೀರಿ

ಹೊಂಬೆಳಕ ಆಶಾದೀಪವಾಗು ಭಾಸ್ಕರನಲಿ
ಹೂಬಳ್ಳಿಗಳ ಚಿತ್ತಾರ ಬಿಡಿಸು ಚೈತ್ರಮಾಸದಲಿ

ಶುಭಕೋರು ಸರ್ವಜನಕು
ಸುಗ್ಗಿ ಸಂಭ್ರಮ ಸಾರು ರೈತರ ಮನಕು

ಬಾ ಬಾ ವಸಂತ ಬಳಿಗೆ
ಹೊಸ ವರುಷದ ಬಾಗಿಲಿಗೆ


ಒಲವು

About The Author

Leave a Reply

You cannot copy content of this page

Scroll to Top