ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮನವ ಕದ್ದವಳೆ

ಮಾಜಾನ್ ಮಸ್ಕಿ

Jasmine Flower | Flowers in hair, Jasmine flower, Beautiful girl indian

ಮಲ್ಲಿಗೆಯ ಮುಡಿದು ನಗುತ್ತಿರುವ ಚೆಲುವೆ
ಹೊಳಪಿನ ಮೃದು ಮೈಯ್ಯ ಪ್ರೇಯಸಿಯೇ
ನಿನ್ನ ಕಣ್ಣೋಟದಲ್ಲಿ ಮನವ ಕದ್ದವಳೆ
ನಿನ್ನ ತುಟಿ ಅಂಚಿನ ಹೂ ನಗೆಯಲ್ಲಿ ಅರಳಿರುವೆ

ಚೈತ್ರ ತಂದ ಚಿಗುರಿನಂತೆ ನಿನ್ನ ಸೌಂದರ್ಯ ಸುಧೆ
ನಿನ್ನ ಹೆಜ್ಜೆಯ ಗುರುತಿನಲ್ಲಿ ನೆನಪುಗಳು ಶಿಶಿರವಾಗಿದೆ
ನೀ ಬರುವ ಹಾದಿಗೆ ದೃಷ್ಟಿ ಹಾಸಿದೆ
ನಿನ್ನ ನೋಡದೆ ಎದೆ ಬಡಿತ ಚಡಪಡಿಸಿದೆ

ನಿನ್ನ ಆಸರೆಯಲ್ಲಿಯೇ ನನ್ನ ಉಸಿರು ನಿಂತಿದೆ
ಸಾವೆ ಇರಲಿ ಬದುಕೆ ಇರಲಿ ನನ್ನ ಜೊತೆ ಸ್ಪಂದಿಸು
ನೀನಿಲ್ಲದ ನನ್ನ ಬದುಕು ಧರೆಗೆ ಅರ್ಪಿಸು
ಕೇಳೇ ಸಖಿ ನಿನ್ನ ಪ್ರೀತಿಯ ಘಮಲಿನಲಿ ಅಮಲೇರಿಸು

ಹೊಸ ಬಾಳಿನ ಹೊಂಗಿರಣದ ಅರಸಿಯಾಗು
ಬದುಕಿನ ಏಳು ಬೀಳಿನ ಹೊಂದಳಿದಾಗು


About The Author

1 thought on “ಮನವ ಕದ್ದವಳೆ”

Leave a Reply

You cannot copy content of this page

Scroll to Top