ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನನಗೂ ಒಮ್ಮೆ ಸಾವಾಗುತ್ತದೆ….!

ಶಂಕರಾನಂದ ಹೆಬ್ಬಾಳ

Wooden bright colours Ganesha Canvas Abstract Painting, Size: 18 X 14  Inches, | ID: 22361622112

ಒಡಲನುಡಿಯಿದು ಸುಳ್ಳಲ್ಲ
ನನಗೂ ಒಮ್ಮೆ ಸಾವಾಗುತ್ತದೆ….!

ಉತ್ತುಂಗಕ್ಕೇರುವ ಕವಿತೆ
ನನ್ನ ಉಳಿಸಲಿಕ್ಕಿಲ್ಲ
ಭಾವಲೋಕದಿ ನಾ ಬದುಕಿದರೂ
ನನಗೂ ಒಮ್ಮೆ ಸಾವಾಗುತ್ತದೆ….!

ಬಳ್ಳಿಯಲಿ ಅರಳಿದ ಬ್ರಹ್ಮಕಮಲ
ಹೂವಂತೆ ನನ್ನ ಆಯಸ್ಸು
ಬಲು ಕಡಿಮೆ
ನಾನು ಎಷ್ಟೆ ಬೇಕಾದರೂ
ನನಗೂ ಒಮ್ಮೆ ಸಾವಾಗುತ್ತದೆ…!

ಅಮರ ವ್ಯಕ್ತಿ ನಾನಾಗಲಿಕ್ಕಿಲ್ಲ
ಸಮರಗೈಯಲು ನಾ ಬಂದವನಲ್ಲ
ಪ್ರಮಾದವನು ಮಾಡದೆ ಬದುಕಿದವನಲ್ಲ
ಬದುಕಿದರೂ ಇರುವವನಲ್ಲ
ನನಗೂ ಒಮ್ಮೆ ಸಾವಾಗುತ್ತದೆ…!

ನಾನು ಉಳಿಸಿದ್ದೇನು
ನಾನು ಗಳಿಸಿದ್ದೇನು
ಎಲ್ಲವೂ ಶೂನ್ಯಸಾಧನೆ
ಗಳಿಸಿದ್ದು ಅನುಭವಿಸಲಿಕ್ಕಿಲ್ಲ
ನನಗೂ ಒಮ್ಮೆ ಸಾವಾಗುತ್ತದೆ…!

ಇದು ಬಿರುನುಡಿಯಲ್ಲ
ಇದು ಹಿತೋಕ್ತಿಯು ಅಲ್ಲ
ಇದು ಕಟೋಕ್ತಿಯು ಅಲ್ಲ
ಇದು ವಕ್ರ ತುಂಡೋಕ್ತಿಯಲ್ಲ
ಇದೇ ವಾಸ್ತವ ಸತ್ಯ…!
ಕೇಳಿದರೆ,
ಮನಸಿಗೆ ನೋವಾಗುತ್ತದೆ…!


About The Author

Leave a Reply

You cannot copy content of this page

Scroll to Top