ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಂಬೇಡ್ಕರ್ ನೆನಪಲ್ಲಿ

ಶ್ರೀನಿವಾಸ ಜಾಲವಾದಿ

ಬಾಬಾನೂ ನೀನೇ ಬಲಭೀಮನೂ ನೀನೇ
ಕಸದಾಗ ಕುಂತವರ ಬಾಳ ಪ್ರಭೆಯೂ ನೀನೇ!

ತುಳಿಸಿಕೊಂಡವರ ಬಾಳಿಗೆ ಬಂದ ಬೆಳಕು ನೀನು
ಸರ್ವಾಧಿಕಾರಿಗಳ ಅಟ್ಟಹಾಸಕೆ ದುಃಸ್ವಪ್ನ ನೀನು
ಅಂಗೈಯಲ್ಲೇ ಅರಮನೆ ತೋರಿಸಿ ಮರಳು
ಮಾಡಿದವರ ಮೆಟ್ಟಿನಿಂತ ಸಂವಿಧಾನ ಶಿಲ್ಪಿ ನೀನು!

ಕತ್ತಲೆ ರಾಜ್ಯದೀ ಆಳಿದವರದೇ ಆಟವಾದಾಗ
ಅಸ್ಪೃಶ್ಯತೆಯ ಪಟ್ಟ ನೀಡಿ ಬುಗುರಿ ಆಡಿಸಿದವರ
ಸೊಕ್ಕು ಅಡಗಿಸಿದವರ ದಲಿತ ಸರ‍್ಯ ನೀನು
ಅಮಾಯಕರ ಹೃದಯ ಕಮಲದ ದುಂಬಿ ನೀನು!

ಕೆಂಡ ಕಾರುವ ಧರ್ಮಾಂಧ ವಿಷ ಜಂತುಗಳ
ಮಧ್ಯೆ ಅರಳಿದ ಚೆಂಗುಲಾಬಿ ನೀನು
ಶತಮಾನಗಳ ಕಾವು ಇನ್ನೂ ಆರೇ ಇಲ್ಲ
ಸ್ಪೃಶ್ಯತೆಯ ಪರಮ ಸುಖ ನೀನು ಅನುಭವಿಸಲೇ ಇಲ್ಲ!

ಕಗ್ಗತ್ತಲೆಯ ಖಂಡದಲ್ಲಿ ಕಣ್‌ಕಟ್ಟಿಬಿಟ್ಟ ಜನಕೆ
ದಿವ್ಯದೃಷ್ಟಿಯ ನೀಡಲು ಬಂದ ಹರಿಕಾರನು ನೀನು!
ಭವ್ಯಭಾರತದ ಕನಸು ನನಸಾದೀತು ನಿನ್ನ
ಸಂವಿಧಾನವೇ ನಮಗೆ ಪರಮ ಗಂಗೋತ್ರಿ!


About The Author

1 thought on “ಅಂಬೇಡ್ಕರ್ ನೆನಪಲ್ಲಿ”

Leave a Reply

You cannot copy content of this page

Scroll to Top