ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುಗಾದಿ

ಭಾರತಿ ಕೇದಾರಿ ನಲವಡೆ

Ugadi - Wikipedia

ಸನಾತನ ಸಂಸ್ಕೃತಿಯ ನಾವಿನ್ಯತೆಯ ನವವರ್ಷದ ಆದಿ
ಸಂಭ್ರಮದವೃಷ್ಟಿ ಹಸಿರ ಚಿತ್ತಾರದಿ ಮಿಂದು ಮನವ ತಣಿಸಿದೆ ಯುಗಾದಿ
ಹೊಸತನ ನೆನಪಿಸಿದೆ ಕನಸ ಕಟ್ಟುವ ಅವಿರತದ ನವರಂಗದ ಹಾದಿ
ಮನಮನದ ಬೆಸುಗೆಗೆ ಪ್ರೀತಿ ನಂಬಿಕೆಗಳ ಸಂಜೀವಿನಿಯೇ ಬುನಾದಿ//

ಸಿಹಿಕಹಿಯ ಸಮರಸದ ಬಲವಿರೆ ಜೀವನಕೆ ತಾಳ್ಮೆಇರೆ ಧನ್ಯ
ಸುಖದುಃಖದ ಪಯಣದಿ ಯಾವತ್ತೂ ಮಾನವೀಯತೆಯೇ ಮಾನ್ಯ
ಬೇವು-ಬೆಲ್ಲದ ಸಮಪಾಕವಿರದೇ ಎಂದಿಗೂ ಬದುಕದು ಶೂನ್ಯ
ಪ್ರತಿಕ್ಷಣವ ವೃಥಾವ್ಯಯಿಸದೇ ಸತ್ಕಾರ್ಯದಿ ಸಾಧನೆಗೆ ಮುನ್ನುಗ್ಗು ಗಣ್ಯ//

ಕೋಮುದಳ್ಳುರಿಯಲಿ ಹೊತ್ತುರಿಯುತಿದೆ ಜಗವಿಂದು
ಮಾಡದ ಪಾಪಕೆ ಬಲಿಯಾಗಿವೆ ಮುಗ್ಧಜೀವಗಳಿಂದು
ಆತ್ಮೀಯತೆಯ ಕೊಲೆಮಾಡಿ ಕ್ರೌರ್ಯದ ರುದ್ರ ನರ್ತನ ಎಂದೂ
ನವವರುಷದ ಶುಭದೊಸಗೆ ಸಾರಿದೆ ಶಾಂತಿಯನಿಂದು//

ಹೊಸ ಚಿಗುರ ಅಪ್ಪುವ ಹಳೆಬೇರಿನ ಬಂಧ
ಸಾಗಲಿ ವಿಶ್ವಪಥದೆಡೆಗೆ ಯುಗಾದಿಯ ಅನುಬಂಧ
ಸೌಹಾರ್ದತೆಯ ಸಿಹಿ ಸುಗ್ಗಿಗೆ ಬೆಸುಗೆಯ ಸಂಬಂಧ
ಉಸಿರಿರುವವರೆಗೂ ಹಸಿರಾಗುವ ಹೊಸತನದ ಸಮರಸದ ಈ ಬಂಧ//


About The Author

2 thoughts on “ಯುಗಾದಿ”

  1. Gopal Torlekar

    ತುಂಬಾ ಅರ್ಥಗರ್ಭಿತ ಸಮಯೋಚಿತ ಕವನ ಅಭಿನಂದನೆಗಳು

  2. Shivaleela hunasagi

    ಯುಗಾದಿಯ ಶುಭಾಶಯಗಳು… ಕವಿತೆಯಂತೆ ಯುಗಾದಿ ಎಲ್ಲರ ಮನಬೆಳಗಲಿ…

Leave a Reply

You cannot copy content of this page

Scroll to Top