ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಯ.ಮಾ.ಯಾಕೊಳ್ಳಿ

😍 Love Art 😍 Images অপ্রকাশিত হৃদয় - ShareChat - ভারতের নিজস্ব সোশ্যাল  নেটওয়ার্ক

ನಿನ್ನ ಸಲುವಾಗಿ ಕಾಯುತ್ತಲೇ ಇರುವಾಸೆ ಈ ಜನುಮವೆಲ್ಲ
ನಿನ್ನದೊಂದು ಆಣತಿಗಾಗಿ ಕಾಯುವಾಸೆ ಈ ಜನುಮವೆಲ್ಲ

ನೀನೊಂದು‌ ಮುಗಿಯದ ಸಂಭ್ರಮ ಈ ಜನುಮಕೆ
ಪಡೆದ ಭಾಗ್ಯ ನನದು ಬಳಸುತ್ತಿರುವಾಸೆ ಈ ಜನುಮವೆಲ್ಲ

ಬಾನಂಗಳದಿ ಮಿನುಗುವ ನಕ್ಷತ್ರವೆ ಮಿಣುಕು
ನೋಡುತ್ತ ಹೂವಾಗಿದೆ ಪಡೆಯುವಾಸೆ ಈ ಜನುಮವೆಲ್ಲ

ಎಲ್ಲ ದೇವತೆಗಳ ಬಾಗಿಲು ಮುಚ್ಚಿದವು ನೀನು ಬಂದೊಡನೆ
ನಿನ್ನೊಲುಮೆ ವರವೇ ಸಾಕು ಕೂಡುವಾಸೆ ಈ ಜನುಮವೆಲ್ಲ

ಎಂತಹ ಹುಚ್ಚು “ಯಯಾ”ನದು, ಹುಚ್ಚರದೇ ಲೋಕವಿದು
ಕೇವಲ ನಿನ್ನನೇ ಹಚ್ಚಿಕೊಳುವಾಸೆ ಈ ಜನುಮವೆಲ್ಲ


About The Author

1 thought on “ಗಜಲ್”

Leave a Reply

You cannot copy content of this page

Scroll to Top