ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮೌನದಲ್ಲಿನ ಮಾತು

ಶ್ರೀವಲ್ಲಿ ಮಂಜುನಾಥ ಕವಿತೆ

ಏನ ಹೇಳಲಿ ಸಖನೆ,
ನೀ ನುಡಿಯದಿರಲೇನು
ನಿನ್ನ ಈ ಮೌನದಲೇ
ನನ್ನ ಹಿಡಿದಿಟ್ಟಿರುವೆ !

ನಿಶೆಯಳಿದು,ಉಷೆಯುದಿಸೆ
ಹೊನ್ನಯೆಳೆಯಂದದಿ
ನಿನ್ನ ದನಿಯದು ತಾ
ಆಗಸದಿ ಮೂಡುವುದು!

ಹಕ್ಕಿಯೆದೆಗೂಡಿಂದ
ಹೊರಟ ದನಿಯಲಿ
ನಿನ್ನ ಇನಿದನಿಯು
ಕಲರವವಗೈದಿಹುದು !

ಆ ಇನಿದನಿಯನ್ನು
ಆಲಿಸಿದ ಈ ಬುವಿಯ
ಮರಗಳು, ಮೌನದಲೆ
ಹೂವುಗಳ ಅರಳಿಸುತ್ತಿಹುದು!

ಮೌನದಾ ಸೆರಗಲ್ಲೆ
ಮಾತುಗಳಡಗಿದೆಯಲ್ಲ
ಮನದ ಮಾತುಗಳನೆಲ್ಲ
ಕಂಗಳರುಹಿದೆಯಲ್ಲ!

ಮೌನದರಮನೆಯರಸ,
ಮಾತನಾಡದೆಯೆನಗೆ
ಗಿಳಿಮಾತ ಕಲಿಸಿದಾ
ನಿನಗೆ ನಾ ಶರಣು !!


ಶ್ರೀವಲ್ಲಿ ಮಂಜುನಾಥ

About The Author

1 thought on “ಮೌನದಲ್ಲಿನ ಮಾತು”

  1. ಹೆಚ್. ಮಂಜುಳಾ.

    ಚೆನ್ನಾಗಿದೆ ಮೇಡಂ ಮೌನದಲ್ಲಿನ ಮಾತು…ಧನ್ಯವಾದಗಳು ತಮಗೆ.

Leave a Reply

You cannot copy content of this page

Scroll to Top