ಹೀಗೆ ರಸ್ತೆಯಲ್ಲಿ
ಅಂದದ ಚೆಂದದ
ಸುಂದರ ಹೃದಯ
ಆಗ ನಿನ್ನ ಕಾವ್ಯ ಕವನ
ಹವಳು ಪೋಣಿಸಿದ ಮುತ್ತಿನ ಹಾರವು
ಆಗ ಮಾಲ್ ನ ರೆಸ್ಟ್ ರೂಮಿನ ಕನ್ನಡಿ ಕೂಡ ಗುರುತು ಹಿಡಿಯದು
ಹುಡುಗನ ಕಣ್ಣು ತುಂಬಿದ ಸಮುದ್ರ
ಕನ್ನಡಿ ಕೂಡ ಗುರುತು ಹಿಡಿಯದು Read Post »
ಸ್ನೇಹಿತನಷ್ಟೇ ಆಗಬಲ್ಲೆಯ
ನೀ ನನಗೆ ಗೆಳೆಯ ?
ಸ್ನೇಹಿತನಷ್ಟೇ ಆಗಬಲ್ಲೆಯ….? Read Post »
ಪುಸ್ತಕಸಂಗಾತಿ ನೊಂದವರ ಬಾಳಿಗೆ ಬೆಳಕಾದ ಬೆಳಕನಿಚ್ಚಣಿಕೆ ಗಜಲ್ ಎಂಬ ಮಾಯಾಂಗನೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯಪ್ರಕಾರವೇನೊ ಎನ್ನುವಷ್ಟರಮಟ್ಟಿಗೆ ಬರಹಗಾರರನ್ನು ಒಪ್ಪಿಸಿಕೊಂಡು, ಅಪ್ಪಿಕೊಂಡು ಬರಸಿಕೊಳ್ಳುತ್ತ ಸಾಗುತ್ತಿದೆ. ಗಜಲ್ ಗಾಯನ ಕೇಳುತ್ತಿದ್ದರೆ ನಾವು ಭಾವನಾ ಲೋಕದಲೊಮ್ಮೆ ವಿಹರಿಸಿ ಬರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮನ್ನು ಸಮ್ಮೋಹನಗೊಳಿಸಿ ಭಾವಪರವಶಗೊಳಿಸಿ ಕೇಳುಗರು ಹಾಗೂ ಓದುಗರ ಮನದ ಭಿತ್ತಿಗೆ ಸಂತೃಪ್ತಿಯನ್ನು ಲೇಪಿಸುತ್ತವೆ. ಅನ್ಯ ಭಾಷೆಯಿಂದ ಕನ್ನಡಕ್ಕೆ ಬಂದರು ಕನ್ನಡದಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿ ಮುನ್ನುಗ್ಗುತ್ತ ಹೋಗುತ್ತಿರುವುದಕ್ಕೆ ಗಜಲ್ ಕಾರರ ಸಾಹಿತ್ಯ ಪ್ರೌಢಿಮೆಯೆ ಕಾರಣವಾಗಿದೆ ಎನ್ನಬಹುದು. ಯಾವುದೇ ವಿಜಯ ಸುಖಾ ಸುಮ್ಮನೆ ಲಭಿಸುವುದಿಲ್ಲ. ಅದಕ್ಕಾಗಿ ದೊಡ್ಡ ಧ್ಯಾನವನ್ನು ಮಾಡಬೇಕಾಗುತ್ತದೆ. ತನ್ನನ್ನೇ ತಾನು ಮರೆತು ಭಾವಲೋಕದಲ್ಲಿವಿಹರಿಸಬೇಕಾಗುತ್ತದೆ. ಆಗ ಮಾತ್ರ ಗಜಲ್ ಗಳಿಗೆ ಜೀವಂತಿಕೆ ದಕ್ಕುತ್ತದೆ. ಗಜಲ್ ಗಳ ಸೆಳೆತ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ನಾವು ಚಿಕ್ಕವರಿದ್ದಾಗ ಡಿ . ಡಿ ದೂರದರ್ಶನ ಚಂದನ ವಾಹಿನಿಯಲ್ಲಿ ಹಿಂದಿ ಗಜಲ್ ಗಳು ಪ್ರಸಾರವಾಗುತ್ತಿದ್ದವು. ಸಾಹಿತ್ಯ, ಸಂಗೀತದ ಗಂಧ ಗಾಳಿ ತಿಳಿಯದ ವಯಸ್ಸದು. ಆದರೂ ಗಜಲ್ ಗಾಯನ ಬಂತೆಂದರೆ ಸಾಕು ಅರ್ಥವಾಗದ ಭಾಷೆಯಾದರೂ ನಾವು ಅದನ್ನು ತದೇಕಚಿತ್ತದಿಂದ ಕೇಳಿ ಆಸ್ವಾದಿಸುತ್ತಿದ್ದೆವು. ಇಂದು ಕನ್ನಡದಲ್ಲಿಯೂ ಅಂತಹ ಅವಕಾಶಗಳು ಓದುಗರಿಗೆ, ಕೇಳುಗರಿಗೆ ದೊರೆಯುತ್ತಿರುವುದು ಹರ್ಷದ ಸಂಗತಿಯಾಗಿದೆ. ಗಜಲ್ ಎಂಬ ವೃಕ್ಷ ಇಂದು ಹೆಮ್ಮರವಾಗಿ ಬೆಳೆದು ನಾಡಿನೆಲ್ಲೆಡೆ ತನ್ನ ಕೊಂಬೆಗಳನ್ನು ಚಾಚಿ ಅದ್ಭುತವಾಗಿ ಸಾಹಿತ್ಯ ಕೃಷಿ ಮಾಡಿಸಿಕೊಂಡು ಜನರಿಗೆ ಆಪ್ಯಾಯಮಾನವಾಗಿದೆ. ಇಂದು ಗಜಲ್ ಯುವಕರಿಂದ ಹಿಡಿದು ವಯಸ್ಕರಾದಿಯಾಗಿ ವಯೋವೃದ್ಧರವರೆಗೂ ಎಲ್ಲರಿಗೂ ಆಪ್ತವಾಗಿ ಗಜಲ್ ಬರಹ ಸಾಗುತ್ತಿದೆ. ಗಜಲ್ ನಿನಾದಕೆ ತಲೆದೂಗದವರಿಲ್ಲ. ಅಂತಹ ಅದ್ಭುತ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಜಲ್ ಕಾವ್ಯ ಲೋಕಕ್ಕೆ ಎರಡು ಅದ್ಭುತ ಕೃತಿಗಳನ್ನು ಕೊಡುಗೆಯಾಗಿ ನೀಡಿರುವುದು ಚಂಪಾರವರ ಸಾಹಿತ್ಯಾಭಿರುಚಿಗೆ ಹಿಡಿದ ಕೈಗನ್ನಡಿಯಾಗಿದೆ. ಚಂಪೂ ಎಂಬ ಕಾವ್ಯನಾಮದಿಂದ ಸಾಹಿತ್ಯಲೋಕದಲ್ಲಿ ತಮ್ಮನ್ನು ಪರಿಚಯಿಸಿಕೊಂಡ ಚಂದ್ರಶೇಖರ ಯಲ್ಲಪ್ಪ ಪೂಜಾರ ಅವರ #ಬೆಳಕ #ನಿಚ್ಚಣಿಕೆ ಏರಿ ಬಂದ ನಂತರ ನಾನು ಗಜಲ್ ಕಾರರ ಮನೋಗತವನ್ನು ತಮ್ಮೆಲ್ಲರ ಮುಂದಿಡುವ ಪ್ರಯತ್ನ ಮಾಡುತ್ತಿರುವೆ. ಇವರ ಎರಡು ಗಜಲ್ ಸಂಕಲನಗಳನ್ನು ಓದಿರುವೆ. ಎರಡು ಹೊತ್ತಿಗೆಗಳು ಬೆಳಕನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ನಾವು ಬಹಳ ಸೂಕ್ಷ್ಮವಾಗಿ ಗುರುತಿಸಬಹುದು. ಇವರು ಕತ್ತಲೆಯಲ್ಲಿ ಇರುವವರಿಗೆ ಅಂದರೆ ಹತಾಶೆ,ದುಃಖ, ಶೋಷಣೆ, ಅನ್ಯಾಯ, ಅಸಮಾನತೆ, ಸಾಮಾಜಿಕ ತುಳಿತಕ್ಕೊಳಗಾಗಿ ಸಾಮಾಜಿಕ ಬದುಕಿನ ಕತ್ತಲೆಯಲ್ಲಿ ಜೀವಿಸುವ ಜನಗಳಿಗೆ ಭರವಸೆ, ಕನಸು, ನ್ಯಾಯ, ಸುಖ, ಸಂತೋಷದ ಬೆಳಕನ್ನು ನೀಡುವ ಚೈತನ್ಯದಾಯಕವಾಗಿ ಇವರ ಲೇಖನಿ ದುಡಿಸಿಕೊಂಡಿದೆ ಎಂಬುದು ನಮಗೆ ಇವರ ಗಜಲ್ ಗಳನ್ನು ಓದಿದ ನಂತರ ನಮಗೆ ಅರ್ಥವಾಗುತ್ತದೆ. ಈ #ಬೆಳಕ #ನಿಚ್ಚಣಿಕೆ# ಎಂಬ ಶೀರ್ಷಿಕೆಯೆ ವಿಶೇಷವಾಗಿದ್ದು ನಿಚ್ಚಣಿಕೆ ಎಂದರೆ ಏಣಿ. ಬೆಳಕ ನಿಚ್ಚಣಿಕೆ ಎಂದರೆ ಬೆಳಕನರಸುತ್ತ ಏರುವ ಏಣಿಯಾಗಿದೆ. ದುರಿತದ ಬೇಗುದಿಯಲ್ಲಿ ನೊಂದು ಬೆಂದು ಹೊರಬರಲು ದಾರಿಕಾಣದೆ ತೊಳಲಾಡುವ ಮನೆಗಳಿಗೆ, ಅಸಮಾನತೆಯ ಚಕ್ರವ್ಯೂಹದಲ್ಲಿ ಬಂಧಿಯಾದ ಜನಗಳಿಗೆ, ಶೋಷಿತರಿಗೆ, ಅಸಹಾಯಕರಿಗೆ, ದೀನದಲಿತರಿಗೆ, ಕತ್ತಲೆಯಿಂದ ಹೊರ ಬರಲು ಪರಿತಪಿಸುವ ಜೀವಗಳಿಗೆ, ಬೆಳಕಿನ ಸಾಧನೆಯ ಪಥದಲ್ಲಿ ಚಲಿಸಲು ಮಾರ್ಗದರ್ಶನ ನೀಡುವ ನೀಲಿನಕ್ಷೆಯಾಗಿದೆ. ಇವರೆಲ್ಲ ಕತ್ತಲೆಯೆಂಬ ಅಂಧಕಾರದಿಂದ ಹೊರಬರಲು ಬೆಳಕಿನ ಅನುಭವ ಪಡೆಯಲು ಬೆಳಕ ನಿಚ್ಚಣಿಕೆ ಏರಬೇಕು.ಈ ನಿಚ್ಚಣಿಕೆ ತಯಾರಿಸುವಲ್ಲಿ ಗಜಲ್ ಕಾರರು ಸಾಕಷ್ಟು ಪ್ರಯಾಸ ಪಟ್ಟಿದ್ದಾರೆ ಎಂಬುದು ಗಜಲ್ ಗಳನ್ನು ಓದಿದ ನಂತರವಷ್ಟೇ ಓದುಗ ಪ್ರಭುಗಳ ಅರಿವಿಗೆ ಬರುತ್ತದೆ. ಈ ಬೆಳಕ ನಿಚ್ಚಣಿಕೆ ಗಜಲ್ ಸಂಕಲನವು 66 ಗಜಲ್ ಗಳಿದ್ದು #ನೇರಿಶಾ #ಪ್ರಕಾಶ ನದಲ್ಲಿ ಪ್ರಕಟವಾಗಿದೆ. ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ವಿರಕ್ತಮಠ ದೇಶನೂರ್ ಅವರು ಶುಭ ಹಾರೈಸಿದ್ದಾರೆ. ಹಡಗಲಿಯ #ಇಮಾಮ್ #ಸಾಹೇಬ್ ಸೋತು ಸುಣ್ಣವಾದವರ ನಡುವೆ ಬಣ್ಣವಾದ ಚಂಪೂ ಎಂಬ ಮಿಸ್ರಾ ದೊಂದಿಗೆ ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ. ಇವರು ಗಜಲ್ ನ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸುತ್ತ, ರಾಜಾಶ್ರಯದಲ್ಲಿ ಗಜಲ್ ಕಾರರು ವಾದ ಪ್ರತಿವಾದದ ಮೂಲಕ ತಮ್ಮ ವಿದ್ವತ್ತನ್ನು ಪ್ರದರ್ಶಿಸುತ್ತಿದ್ದರು. ಉತ್ಪ್ರೇಕ್ಷೆ ಹಾಗೂ ರೂಪಕಗಳನ್ನು ಸೊಗಸಾಗಿ ಕಟ್ಟಿಕೊಟ್ಟ ಕವಿಗಳಿಗೆ ಸುಲ್ತಾನ, ನವಾಬರಿಂದ ಬಹುಮಾನ, ಸನ್ಮಾನ ಲಭಿಸುತ್ತಿದ್ದವು ಎಂಬ ವಿಚಾರಗಳನ್ನು ಓದುಗರ ಮುಂದಿಟ್ಟಿದ್ದಾರೆ. ಗಜಲ್ ಕಾರರಾದ ಚಂಪೂ ರವರ ಸಾಹಿತ್ಯ ಯಾನವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತ ದಶಕದ ಹತಾಶೆ, ನೋವು ಅವಮಾನಗಳ ನಂತರ ಸನ್ಮಾನದ ರೂಪದಲ್ಲಿ ಎರಡು ಕೃತಿಗಳು ಜನ್ಮತಾಳಿವೆ ಎಂದು ವಿವರಿಸಿದ್ದಾರೆ. ಚಂಪು ರವರ ಗಜಲ್ ಗಳನ್ನು ಜನಗಳು ಒಳಗಣ್ಣಿನಿಂದ ನೋಡುವ ಅಗತ್ಯತೆ ಇದ್ದು ಅಲ್ಲಿ ಅಡಕವಾಗಿರುವ ಗೂಡಾರ್ಥವನ್ನು ಅರಿತುಕೊಳ್ಳಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಈ ಗಜಲ್ ಸಂಕಲನಕ್ಕೆ ಬಳ್ಳಾರಿಯ ಸಾಹಿತಿಗಳಾದ #ಅಬ್ದುಲ್ #ಹೈ #ತೋರಣಗಲ್ಲ ರವರು ಜಡಕ್ಕೆ ಜೀವತುಂಬಿ ಝಲಕಿಸುವ ಗಜಲ್ ಕಾರರಾದ ಚಂಪೂ ರವರು ನವಿರಾದ ರೂಪಕ, ಪ್ರತಿಮೆಗಳನ್ನು ಬಳಸಿಕೊಂಡು ತಾತ್ವಿಕ ಹಸಿವು ಅರಿವಿನ ಜಾಡು ಹಿಡಿದು ವಿಷಯನ್ನು ಬಗ್ಗಿಸಿ ಒಗ್ಗಿಸಿಕೊಳ್ಳುವ ಪ್ರಜ್ಞಾವಂತಿಕೆ, ಬದುಕು ಕಟ್ಟುವ, ಕ್ರಿಯೆಯನ್ನು ಘನಗೊಳಿಸುವ ತಂತ್ರಗಾರಿಕೆ ,ಲಘು ಸ್ವರೂಪದ ಭಾವಗಳನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವ ಕಲಾತ್ಮಕಕತೆ ಜೊತೆಗೆ ಸಮಾಜದಲ್ಲಿ ದಕ್ಕಿದ ಅನುಭವಗಳನ್ನು ಅಕ್ಷರಗಳ ಮುಖೇನ ನೇಯುವ ನೇಯ್ಗಾರಿಕೆ ಇವರಿಗೆ ಕರಗತವಾಗಿದೆ ಎಂದು ತುಂಬು ಮನದಿಂದ ಶ್ಲಾಘಿಸುತ್ತ ಭಾಷೆಯ ಹಂಗು ತೊರೆದು ಬರೆಯುವ ಗಜಲ್ಕಾರ ಎಂಬ ಮಿಸ್ರಾದೊಂದಿಗೆ ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ. ಬೆಳಕ ನಿಚ್ಚಣಿಕೆಗೆ ನಾಡಿನ ಪ್ರಖ್ಯಾತ ಚಿತ್ರ ಕಲಾವಿದರಾದ #ಟಿ.#ಎಫ್.#ಹಾದಿಮನಿ ಅವರು ಬಹಳ ಆಕರ್ಷಕವಾದ ಹಾಗೂ ಅರ್ಥಪೂರ್ಣವಾದ ಮುಖಪುಟ ವಿನ್ಯಾಸವನ್ನು ರಚಿಸಿದ್ದು, ಈ ಗಜಲ್ ಶೀರ್ಷಿಕೆಯ ಮೆರಗನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಓದುಗರ ಮನದಲ್ಲಿ ಗಜಲ್ ಸಂಕಲನ ಹೊತ್ತು ತರುವ ವಿಚಾರಧಾರೆಗಳ ಒಳಗುಟ್ಟನ್ನು ಈ ಮುಖಪುಟ ವಿನ್ಯಾಸ ಸ್ಪಷ್ಟವಾಗಿ ಬಿಂಬಿಸುತ್ತದೆ. ಗಜಲ್ ಲೋಕದಲ್ಲಿ ನಿತ್ಯ ಭಾವಪರವಶರಾಗಿ ಮಿಂದೆದ್ದ ಬಳಿಕ ಬೆಳಕ ನಿಚ್ಚಣಿಕೆ ಪುಟಿದೆದ್ದಿದೆ ಎಂಬುದು ಸತ್ಯ ಸಂಗತಿಯಾಗಿದೆ. ಬಹು ಸೂಕ್ಷ್ಮ ಸಂವೇದನೆಗಳ ಮೂಲಕ ಅರಿವಿನ ಜಾಡಿನಲ್ಲಿ ಸಾಗಿ ತಲುಪಿಸಬೇಕಾದ ಸಂದೇಶವನ್ನು ಬಹಳ ಪ್ರಜ್ಞಾಪೂರ್ವಕವಾಗಿ ಹೆಣೆದು ಕಾವ್ಯ ಕಟ್ಟುವ ಪರಿ ಅನನ್ಯ ಹಾಗೂ ಅಮೋಘವಾಗಿದೆ. ಓದುಗರಿಗೆ ಇವರ ಗಜಲ್ಗಳು ನೋವಿನ ಬಿಸಿಯುಸಿರಲಿ ಬೇಯುತ್ತಿರುವವರಿಗೆ ಸಾಂತ್ವನದ ತಂಪನೆರೆಯುವ ವಿಶಾಲ ವೃಕ್ಷದಂತೆ ಭಾಸವಾಗುತ್ತದೆ. ಕಷ್ಟಗಳೆಂಬ ಮರಳುಗಾಡಿನಲ್ಲಿ ಪರಿತಪಿಸುತ್ತಿರುವ ಮಂದಿಗೆ ನೆಮ್ಮದಿ ನೀಡುವ ಭರವಸೆಯ ತುಂಬುವ ಒಯಸಿಸ್ ನಂತೆ ಕಾಣುತ್ತವೆ. ಇವರು ಬಳಸುವ ಅಭೂತಪೂರ್ವವಾದ ರೂಪಕಗಳಿಂದ ಮಿಸ್ರಾ ಗಳು ಓದುಗರಿಗೆ ವಾಚ್ಯವೆನಿಸದೆ ಗಜಲ್ ಓದಿನ ತೃಪ್ತಿಯನ್ನು ಓದುಗರೆದೆಗೆ ಬಿತ್ತುತ್ತವೆ. ಇವರ ಗಜಲ್ ಗಳು ಕೇವಲ ವ್ಯಕ್ತಿಗತ ರೂಪದಲ್ಲಿ ಮೂಡಿಬರದೆ ಸಾರ್ವತ್ರಿಕ ವಸ್ತುವಾಗಿ ಬಿಂಬಿತವಾಗಿವೆ. ಸಾವಿರಾರು ನೊಂದ ಮನಗಳ ಪ್ರತಿಭಟನೆಯ ಧ್ವನಿಯಾಗಿವೆ. ವೈಯಕ್ತಿಕ ನೆಲೆಯಲ್ಲಿ ನಿಲ್ಲದೆ ಸಾಮಾಜಿಕ ನ್ಯಾಯ ಕೇಳುವ ನ್ಯಾಯವಾದಿಯಾಗಿ, ಹಾಗೂ ಸಮಾಜದ ಓರೆಕೋರೆಗಳನ್ನು ತಿದ್ದುವ ಚಿಕಿತ್ಸೆಕನಾಗಿ ಕಂಡುಬರುತ್ತಾರೆ. ಇವರು ಓದುಗರಿಗೆ ಪ್ರೀತಿ ಪ್ರೇಮದ ರಸಪಾಕವನ್ನು ಉಣಬಡಿಸಲು ಸೈ, ಅನ್ಯಾಯವನ್ನು ಪ್ರತಿಭಟಿಸುವ ಸಾತ್ವಿಕ ಹೋರಾಟಕ್ಕೂ ಸೈ. ಬಡತನದ ರೋಧನೆ, ಹಸಿವಿನ ಆಕ್ರಂದನ ವಿವಿಧ ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ನಿರಾಶೆಯ ಕಾರ್ಮೋಡ, ಅಸಹಾಯಕತೆಯ ಕಣ್ಣೀರು ಓದುಗರ ಕಂಗಳನ್ನು ಒದ್ದೆಯಾಗಿಸುತ್ತವೆ. ಕೆಲವು ಅನಿಷ್ಟ ಪದ್ಧತಿಯ ಕರಾಳ ದರ್ಶನ ಮಾಡಿಸುವ ಗಜಲ್ ಗಳ ಅಶ್ ಅರ್ ನೋಡಬಹುದು. ನಿರಾಸೆಯ ಬದುಕಲ್ಲಿ ಮುಂಬರುವ ಹೊಸ ದಿನಗಳಿಗಾಗಿ ಆಶಾವಾದದ ಹೊಂಗನಸುಗಳನ್ನು ಹೊತ್ತು, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಜನರಿಗೆ, ನವ ನವೀನ ದಾರಿಗಳನ್ನು ತೋರುವ ಪ್ರಯತ್ನವನ್ನು ಬೆಳಕ ನಿಚ್ಚಣಿಕೆಯಲ್ಲಿ ಕಾಣಬಹುದು. ಜೀವನದಲ್ಲಿ ಜಿಗುಪ್ಸೆಗೊಂಡು ಬದುಕಿನ ಆಸೆಯನ್ನು ಕಳೆದುಕೊಂಡ ಮಂದಿಗೆ ಆಶಾವಾದದ ಚಿಲುಮೆಯನ್ನು ಸಿಂಪಡಿಸುತ್ತವೆ. ಮೌಲ್ಯಗಳ ಆಚರಣೆಯ ಜನರಿಗೆ ವೈಚಾರಿಕ ಹಾಗೂ ಪ್ರಗತಿಪರ ಚಿಂತನೆಗಳನ್ನು ಬಿತ್ತುವ ವಿಚಾರವಾದಿಗಳಾಗಿ ಈ ಗಜಲ್ ಗಳು ಮೂಡಿಬಂದಿವೆ. ಗಜಲ್ ಕ್ಷೇತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನವಾದ ರೂಪಕಗಳ ಮೂಲಕ ಗುರುತಿಸಿಕೊಂಡಿರುವ ಗಜಲ್ ಕಾರರುಗಳನೇಕ. ಅಂತಹವರ ಸಾಲಿನಲ್ಲಿ ಚಂಪೂ ಅವರು ಸಹ ಒಬ್ಬರು. ಒಂದು ಕಬ್ಬು ಗಾಣಕ್ಕೆ ಸಿಕ್ಕಿ ಚೆನ್ನಾಗಿ ರುಬ್ಬಿಸಿಕೊಂಡು ಸಿಹಿಯಾದ ಕಬ್ಬಿನರಸ ಕೊಡುವಂತೆ ಚಂಪೂವರ ಕೈಗೆ ಸಿಕ್ಕ ವಸ್ತು ಅಮೋಘವಾದ ರೂಪಕ, ಪ್ರತಿಮೆ, ಉಪಮಾನ ಗಳಿಂದ ಅಲಂಕರಿಸಲ್ಪಟ್ಟು ಓದುಗನಿಗೆ ಆಪ್ತವೆನಿಸುವ ಸಾಲುಗಳು ಗಜಲ್ ರೂಪ ಪಡೆದುಕೊಂಡು ಕಾಡಿಸಿಕೊಂಡು ಓದಿಸಿಕೊಳ್ಳುತ್ತವೆ. ಇವರ ಗಜಲ್ ಗಳು ಕೇವಲ ಶಬ್ದಾಲಂಕಾರಗಳ ವೈಭವೀಕರಣ ಮಾತ್ರವಲ್ಲ. ಅಮೋಘವಾದ ಭಾವದೊನಲು, ಅದ್ಭುತವಾದ ರೂಪಕಗಳನ್ನು ಒಳಗೊಂಡು ಓದುಗನ ಮನದಲ್ಲಿ ಅಚ್ಚಾಗಿ ಎಂದು ಮರೆಯದ ಕರ್ಣ ಕೊಳದಲ್ಲಿ ಸಂಗ್ರಹವಾಗಿ ಶಾಶ್ವತವಾದ ರೂಪಕ ಸಾಮ್ರಾಜ್ಯವನ್ನು ಸ್ಥಾಪಿಸುತ್ತದೆ. ನಮ್ಮ ನಾಡಿನ ಹೆಸರಾಂತ ಕವಿಗಳು ಕನ್ನಡ ಸಾಹಿತ್ಯದಲ್ಲಿ ಬಳಸಿರುವ ರೂಪಕಗಳಿಂದಾಗಿ ಅವರ ಸಾಲುಗಳು ಕಾವ್ಯಮಯವಾಗಿ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವುದನ್ನು ನಾವು ಕಾಣಬಹುದು. ಈ ನಿಟ್ಟಿನಲ್ಲಿ ಚಂಪೂ ಅವರು ರೂಪಕಗಳ ಹಿಮಾದ್ರಿ ಯನೇರುವ ಪ್ರಯತ್ನ ಮಾಡಿ ಗೆದ್ದಿದ್ದಾರೆ ಎನ್ನಬಹುದು. ಇವರು ಹೆಕ್ಕಿ ತರುವ ನವ ನವೀನ ಪದ ಪುಂಜಗಳಿಂದಾಗಿ ಕನ್ನಡ ಶಬ್ದ ಭಂಡಾರದಲ್ಲಿ ನಿಸ್ತೇಜವಾಗಿ ಇರುವ ಅಗಾಧ ಶಬ್ದಸಂಪತ್ತು ಉಪಯೋಗಿಸಲ್ಪಟ್ಟು ಇವು ಮುಖ್ಯವಾಹಿನಿಗೆ ಬಂದು ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಓದುಗರಿಗೆ ಮತ್ತಷ್ಟು ಹೊಸ ಪದ ಪುಂಟಗಳ ಪರಿಚಯವಾಗುತ್ತದೆ. ಇವರು ನಾಡಿನ ಹೆಸರಾಂತ ಕವಿ ಶ್ರೇಷ್ಠ ರ ಕಥೆ ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ತಮ್ಮ ಗಜಲ್ ಗಳಲ್ಲಿ ರಧೀಪ್ ರೂಪದಲ್ಲಿ ಬಳಸಿಕೊಂಡಿರುವುದು ಅವರ ಅಧ್ಯಯನಶೀಲತೆ ಹಾಗೂ ಅಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉದಾಹರಣೆಗೆ ಚೋಮ, ಬಸವ, ಹೀಲಿ, ಹೂವಯ್ಯ,ಶರೀಫ್, ಸುರಗಿ, ನಳಿನಿ, ನಶೀಬ್,ಬೋಧಿ, ಬಸವಾ, ಉರ್ವಿ,ದೇಹಿ, ದೇವಾ, ರುಸ್ತುಂ, ಸುರಭಿ, ಬುಲ್ ಬುಲ್ , ಅಹಲ್ಯೆ , ತ್ಯಕ್ತನಾರಿ, ಮುಂತಾದ ಪದಗಳನ್ನು ಗಜಲ್ ಗಳನ್ನು ಮತ್ತಷ್ಟು ಮಗದಷ್ಟು ಸಾಣೆ ಹಿಡಿದಿವೆ. ಜೊತೆಗೆ ಇವರ ಗಜಲ್ ಗಳಲ್ಲಿ ಅನ್ಯ ಭಾಷೆಯ ಪದಗಳ ಅರ್ಥವನ್ನು ಕಾಣಬಹುದು. ಓದುಗರಿಗೆ ಗೊಂದಲ ಮೂಡದಂತೆ ಎಚ್ಚರವಹಿಸುವ ಗಜಲ್ ಕಾರರು ಅಪರಿಚಿತ ಪದಗಳ ಅರ್ಥವನ್ನು ವಿವರಿಸಿದ್ದಾರೆ. ದೇಶಿಯ ಸೊಗಡಿನಲ್ಲಿ ಮೂಡಿಬಂದ ಅವರ ಗಜಲ್ ಗಳು ಓದುಗ ಪ್ರಭುಗಳನ್ನು ತಮ್ಮೆಡೆಗೆ ಆಕರ್ಷಿಸುತ್ತವೆ. ಕವಿಯ ಸಾಹಿತ್ಯದ ಹೋರಾಟವು ಬಂಡಾಯವೆ ಆಗಿದ್ದರು ಎಲ್ಲೂ ಅಹಿಂಸೆಗೆ ಪ್ರೇರಣೆ ನೀಡದಂತೆ ಕ್ರೌರ್ಯ ಮೆರೆಯದಂತೆ ತಮ್ಮ ಹರಿತವಾದ ಲೇಖನಿಯ ಮೂಲಕ ಮಾರ್ಮಿಕವಾಗಿ ಛಡಿಯೇಟು ಬೀಸುತ್ತ ಸಾತ್ವಿಕವಾದ ಹಾಗೂ ಸೈದ್ಧಾಂತಿಕವಾದ ಪಥದಲ್ಲಿ ಸಾಗಿರುವುದು ಕವಿಯ ಸಾಮರಸ್ಯದ ನಡೆ ಹಾಗೂ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿದೆ. ಚಂಪೂರವರು ತಮ್ಮ ಸಾಹಿತ್ಯದಲ್ಲಿ ಧಮನಿತರ ಪರವಾಗಿ ಮಾತನಾಡುವಾಗ, ಉಳ್ಳವರ ಹುನ್ನಾರವನ್ನು ಬೆಳಕಿಗೆ ತರುವಲ್ಲಿ, ನಿರ್ಭಯದ ಹೆಜ್ಜೆಯಿಟ್ಟು, ನಿರ್ಧಾಕ್ಷಿಣ್ಯವಾಗಿ ಪ್ರತಿಭಟಿಸುವ ಪರಿ ಎಲ್ಲರಿಗೂ ಆಪ್ತವಾಗುತ್ತದೆ. ಇವರು ಸತ್ವಪೂರ್ಣ ಹಾಗೂ ಸತ್ಯಪೂರ್ಣ ಗಜಲ್ ಸಾಹಿತ್ಯ ಕೃಷಿಯ ಮೂಲಕ ತಮ್ಮದೇ ಆದ ವಿಶಿಷ್ಟವಾದ ಛಾಪು ಮೂಡಿಸುತ್ತಿದ್ದಾರೆ. ಸಾಹಿತ್ಯ ಪ್ರಕಾರ ಯಾವುದಾದರೂ ಅವುಗಳ ಪರಮಾರ್ಥ ಗುರಿಯೆಂದರೆ ಓದುಗನಿಗೆ ನ್ಯಾಯ ಒದಗಿಸುವುದು. ಅವನ ಮನಸ್ಸನ್ನು ಸಂತೋಷಪಡಿಸುವುದು. ಓದಿದ ಸಂತೃಪ್ತಿಯನ್ನು ಅವನೆದೆಗೆ ಬಿತ್ತುವುದು. ಬರೆದ ಬರಹದಿಂದ ಕಿಂಚಿತ್ತಾದರೂ ಸಕಾರಾತ್ಮಕ ಬದಲಾವಣೆಯಾದರೆ, ನೊಂದವರಿಗೆ ಬೆಳಕಾದರೆ ಅದು ಗೆದ್ದಂತೆ. ಈ ನಿಟ್ಟಿನಲ್ಲಿ ಅವರ ಪಯಣ ಆಶಾದಾಯಕವಾಗಿದೆ. ಇಲ್ಲಿ ಗಜಲ್ ಕಾರರು ತಮ್ಮ ಬದುಕಿನ ಕೆಲವು ಅನುಭವಗಳು, ತಾವು ಕಂಡಿದ್ದ ಘಟನೆಗಳನ್ನು, ನೋಡಿದ ದೃಶ್ಯಾವಳನ್ನು ಗಜಲ್ ರೂಪದಲ್ಲಿ ಭಟ್ಟಿ ಇಳಿಸಿದ್ದಾರೆ. ಜೊತೆಗೆ ಅವುಗಳ ಪರಿಹಾರದ ದಾರಿಯನ್ನು ಕೂಡ ಅವರೆ ತೋರುತ್ತಾ ಸಾಗಿದ್ದಾರೆ. ಇದನ್ನು ಅರ್ಥೈಸಿಕೊಂಡು ಸರಿಯಾದ
You cannot copy content of this page