ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿವಾಳಿ ತೆಗೆದ ದಾರಿ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

The Progressive Revolution: Modern Art for a New India' Review: A Movement  Looks Forward - WSJ

ಬದುಕ ಅರಳುವ ಹೊತ್ತಿನಲ್ಲಿ
ಬೇರುಗಳ ಕಿತ್ತಿ,ಒಳಗೊಳಗೆ ನಗುತ್ತಿದ್ದೀರಿ
ನಮಗರಿಲ್ಲವೆಂದು ನಮ್ಮ-
ನಮ್ಮ ಸಾವಿಗೆ ಸುಂಕ ಕೇಳಿದ್ದೀರಿ

ನಮಗೆ ಹಸಿವಿನದೇ ಚಿಂತೆ
ಮೂರು ನಾಲಿಗೆಯ ಮೇಲೆ ನಿವಾಳಿಸಿಟ್ಟ ನಿಮ್ಮ ತೆಂಗಿನಕಾಯಿ ತಿಂದು,
ನಿವಾರಿಸಿದ ನಿಕೃಷ್ಟ ಹಸಿವು ತೃಷೆ ನಮ್ಮದು.,
ತಿಪ್ಪೆಯ ಎಂಜಲೆಲೆಯು
ಸತ್ತು ಹುಟ್ಟಿದೆ ನಮಗಾಗಿ

ಸಾಕಿನ್ನು…..
ನೆರಳ ಒಡೆತನ ಬಿಡುತ್ತೇವೆ ಬಿಡಿ
ನಿಮಗಿರಲಿ
ಬಾನ ಬೆಸುಗೆ
ನೆಲದ ಮೈಥುನ
ಆಪ್ತತೆಯ ತಂಗಾಳಿ ಸವರಿ,
ನಾಕು ದಿನದ ಬದುಕಿಗೆ,ನೂರಾರು ವರುಷದವರೆಗೆ
ಕಚಗುಳಿಯಿಡಲಿ ನಿಮ್ಮನೆಯ ಸಿರಿ

ಆಳರಸರು ನೀವು
ಬಿರುಸು-ತುರುಸು ಬಾಣ
ಬತ್ತಳಿಕೆ ತುಂಬ ಬೆರಗು ಬಂಧಿ
ಕಾಂಚಣದ ಮೇಲೆ ಬೆತ್ತಲು ಮಂದಿ
ನಿಮಗೇ ದಕ್ಕಲಿ ನೆಲ ಮುಗಿಲಂಗಳ
ಕಾನೂನು ಕಟ್ಟಳೆ ಅಧಿಕಾರ

ನಮ್ಮೊಡಲಿನ ಕಿಚ್ಚು ಲೊಚಗುಟ್ಟಿದರೂ…
ಸಾಕು ನಮಗೆ
ಬೆವರ ಮಳೆ
ನಿಶ್ಯಕ್ತಗಾಳಿ!
ಗಾಯಗೊಂಡ ಕನಸುಗಳ
ಸರಿಪಡಿಸಿಕೊಳ್ಳುತ್ತೇವೆ
ಗೋರಿಯೊಳಗೆ!

ಬದುಕ ಅರಳುವ ಹೊತ್ತಿನಲ್ಲಿ
ಬೇರುಗಳ ಕಿತ್ತಿ,ಒಳಗೊಳಗೆ ನಗುತ್ತಿದ್ದೀರಿ
ನಮಗರಿಲ್ಲವೆಂದು ನಮ್ಮ-
ನಮ್ಮ ಸಾವಿಗೆ ಸುಂಕ ಕೇಳಿದ್ದೀರಿ

ನಮಗೆ ಹಸಿವಿನದೇ ಚಿಂತೆ
ಮೂರು ನಾಲಿಗೆಯ ಮೇಲೆ ನಿವಾಳಿಸಿಟ್ಟ ನಿಮ್ಮ ತೆಂಗಿನಕಾಯಿ ತಿಂದು,
ನಿವಾರಿಸಿದ ನಿಕೃಷ್ಟ ಹಸಿವು ತೃಷೆ ನಮ್ಮದು.,
ತಿಪ್ಪೆಯ ಎಂಜಲೆಲೆಯು
ಸತ್ತು ಹುಟ್ಟಿದೆ ನಮಗಾಗಿ

ಸಾಕಿನ್ನು…..
ನೆರಳ ಒಡೆತನ ಬಿಡುತ್ತೇವೆ ಬಿಡಿ
ನಿಮಗಿರಲಿ
ಬಾನ ಬೆಸುಗೆ
ನೆಲದ ಮೈಥುನ
ಆಪ್ತತೆಯ ತಂಗಾಳಿ ಸವರಿ,
ನಾಕು ದಿನದ ಬದುಕಿಗೆ,ನೂರಾರು ವರುಷದವರೆಗೆ
ಕಚಗುಳಿಯಿಡಲಿ ನಿಮ್ಮನೆಯ ಸಿರಿ

ಆಳರಸರು ನೀವು
ಬಿರುಸು-ತುರುಸು ಬಾಣ
ಬತ್ತಳಿಕೆ ತುಂಬ ಬೆರಗು ಬಂಧಿ
ಕಾಂಚಣದ ಮೇಲೆ ಬೆತ್ತಲು ಮಂದಿ
ನಿಮಗೇ ದಕ್ಕಲಿ ನೆಲ ಮುಗಿಲಂಗಳ
ಕಾನೂನು ಕಟ್ಟಳೆ ಅಧಿಕಾರ

ನಮ್ಮೊಡಲಿನ ಕಿಚ್ಚು ಲೊಚಗುಟ್ಟಿದರೂ…
ಸಾಕು ನಮಗೆ
ಬೆವರ ಮಳೆ
ನಿಶ್ಯಕ್ತಗಾಳಿ!
ಗಾಯಗೊಂಡ ಕನಸುಗಳ
ಸರಿಪಡಿಸಿಕೊಳ್ಳುತ್ತೇವೆ
ಗೋರಿಯೊಳಗೆ!


About The Author

Leave a Reply

You cannot copy content of this page

Scroll to Top