ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸರಳ ಸೂತ್ರ ಎಸ್ ನಾಗಶ್ರೀ ಆರುತಿಂಗಳಾದರೂ ಬಳಸದ್ದನ್ನುಬಿಸಾಡುವುದು ಕ್ಷೇಮವೆಂದರುಒಪ್ಪಿದೆಬಟ್ಟೆಬರೆಯೆಲ್ಲಾ ಹರಡಿಹತ್ತಾರು ಚೂಡಿ, ಸೀರೆ, ರವಿಕೆಫಳಗುಟ್ಟುವ ಕಿವಿಯೋಲೆಜಾಮೂನ್ ಬಟ್ಟಲುಲೆಕ್ಕವಿರದಷ್ಟು ಲೋಟ, ತಟ್ಟೆಓದಲಾಗದ ಪುಸ್ತಕರೀಫಿಲ್ಲು ತೀರಿದ, ತಿರುಪು ಗಟ್ಟಿಯಿದ್ದಪೆನ್ನುಖಾಲಿ ಹಾಳೆಯ ಪುಸ್ತಕಡೈರಿಗಳನುತಿರುಗಾಮುರುಗಾ ನೋಡಿಪೇರಿಸಿಟ್ಟೆ ಗುಜರಿಗೆ ಹಾಕಿನೂರಿನ್ನೂರು ಎಣಿಸುವುದೆಷ್ಟರ ಮಾತು?ಬಡವರಿಗೆ ಕೊಡಬೇಕುಹಬ್ಬದ ಸಂಜೆ ಅವರುಟ್ಟು ತೊಟ್ಟುಸಂಭ್ರಮಿಸಬೇಕುಕನಸುಗಳ ಮುಗುಚಿ ಹಾಕಿಮಲಗಿದ್ದು ಗೊತ್ತುಈ ನೆನಪುಗಳು ಜೀವ ತಿನ್ನುತ್ತವೆಹೊತ್ತೊಯ್ಯುತ್ತವೆ ಕಪ್ಪಿರುವೆಯಂತೆತಲೆ ಮೇಲೆ ಭಾರ ಗಂಟೊಂದನುನಜ್ಜುಗುಜ್ಜಾದ ತಟ್ಟೆಯಲ್ಲೇಅನ್ನವುಣ್ಣುವ ಅಪ್ಪಹರಿದ ಸೀರೆಯುಡುವ ಅಜ್ಜಿಬೇಯಿಸುವ ಪಾತ್ರೆಯೂ ಇಲ್ಲದೆಬೀದಿಗೆ ಬಿದ್ದಗೃಹಭಂಗದ ನಂಜಮ್ಮಹೀಗೆ ಯಾವುದೋ ನೆನಪುಗಳುಗೀಟುಗಳೆಳೆದುಕಾಟಕೊಡುತ್ತವೆತಂತಿಯ ಮೇಲಿನ ಬಟ್ಟೆಗಳಂತೆಫಟಫಟಿಸುತ್ತದೆ ಮನಸು ವರಾಂಡದ ಮೂಲೆಯಲ್ಲಿಗಂಟಾಗಿ ಕೂತ ಸಾಮಾನುಗಳನ್ನುಮತ್ತೆ ಬಿಚ್ಚಿ ಜೋಡಿಸುತ್ತೇನೆಎರಡು ಸೀರೆನಾಲ್ಕಾರು ಡಬ್ಬಆಚೆ ಹಾಕುವುದಕ್ಕೆಇಡೀ ದಿನ ಬೇಕೆಎಂದವರನ್ನುಕಣ್ಣಲ್ಲೇ ಸುಟ್ಟುಅಡುಗೆಗಿಡುತ್ತೇನೆ ಹುರಿಯುವಾಗ, ಹೆಚ್ಚುವಾಗತೊಳೆದು ಹರಡುವಾಗಸರಳ ಬದುಕಿನ ಸೂತ್ರಕಡಿಮೆ ವಸ್ತುಗಳಲ್ಲಿದೆಎಂದವರ ಮಾತು ಮಥಿಸುತ್ತಾಗಹನ ಚಿಂತನೆಗಿಳಿಯುತ್ತೇನೆಮತ್ತೆ ಮರೆಯುತ್ತೇನೆಮರೆವೊಂದೇ ಸರಳವೆನಿಸಿನಕ್ಕುಬಿಡುತ್ತೇನೆ

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ ಕೆ.ಟಿ.ಜಯಶ್ರೀ ಮುಂಬಾಗಿಲ ತಳಿರ ಸ್ವಾಗತಪಂಚಭೂತ ತತ್ವದರಿವನುಹರವುವ ಹೊಸ ಮಡಕೆಯಲಿಘಮಘಮಿಸುತಿದೆ ಪೊಂಗಲ್ಎಳ್ಳು ಬೆಲ್ಲ ಮೆಲುನುಡಿದಿವೆ ಜರತಾರಿ ತೊಟ್ಟ ಕುವರಿಯರಮೆರವಣಿಗೆ ಸಾಗಿದೆ ಸಂಜೆಯಲಿ ಪಥ ಬದಲಿಸಿ ಸಾಗುವಾಗಸೂರ್ಯ ಸಂಭ್ರಮದಿನಗೆ ಚೆಲ್ಲಿತಾ ರಂಗಿನ ರಂಗವಲ್ಲಿಉಷೆ ಸ್ಪರ್ಶಕೆಪುಳಕಮೈಮನದಲಿ ಎಳ್ಳು ಬೆಲ್ಲ ಹಂಚುವ ಸಡಗರಕೆಲಲನೆಯರ ಲಾಲಿತ್ಯದ ಮೆರಗು ರಾಸುಗಳ ಕಿಚ್ಚಿನ ಓಟಎಳೆಯರ ಗಾಳಿಪಟದಾಟಮುಗುದೆಯರ ಕೋಲ್ಮಿಂಚಿನೋಟಹರುಷ ಉಕ್ಕಿದೆ ಸುಗ್ಗಿಕಣಿತದಿ ಸಂಕುಚಿತ ಮನದ ತಮ ಕರಗಿಸಾಗಲಿ ಸೂರ್ಯ ಅಶಾಂತಿಯ ಪಥದಿಂದ ಶಾಂತಿ ಸಾಮರಸ್ಯದ ಸಂಕ್ರಮಣ ಕಾಲದತ್ತ

Read Post »

ಕಾವ್ಯಯಾನ

ವೀಣಾ ನಿರಂಜನ ಬರೆಯುತ್ತಾರೆ

ಎದೆಯ ಕದ ಇಷ್ಟಿಷ್ಟೇ ತೆಗೆದು
ಮೌನವನ್ನು ಒಳಗೆ
ಬಿಟ್ಟುಕೊಳ್ಳುವ ಸುಖ
ದಕ್ಕಿದವರಿಗಷ್ಟೇ ಗೊತ್ತು

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಉನ್ನತಿಯ ಕಡೆಗೆ…. ಚಂದಕಚರ್ಲ ರಮೇಶ್ ಬಾಬು ಹೊಸವರ್ಷದ ಈ ವಾರಉತ್ಥಾನದ ಕರೆಯ ವಾರ ಏಳಿ ಎದ್ದೇಳಿಗುರಿ ಮುಟ್ಟುವ ವರೆಗೆ ನಿಲ್ಲದಿರಿಎನ್ನುತ್ತ ಎಲ್ಲರಿಗುಉತ್ತೇಜನ ಕೊಟ್ಟಸಂತನೊಬ್ಬನ ಹುಟ್ಟು ದಿನ ತನ್ನ ತಳದ ಪಯಣವನ್ನು ಮುಗಿಸಿಊರ್ಧ್ವದ ಕಡೆಗೆ ನಡೆಯುತ್ತಪ್ರಗತಿಯ ದಿಸೆಯಲ್ಲಿಪಾಠ ಹೇಳುವಉತ್ತರಾಯಣದ ಸೂರ್ಯನ ಹಬ್ಬ ತನ್ನ ದಾರದ ಬೇರುಕೆಳಗಿದ್ದರೇನುತಾನು ಗಗನಕ್ಕೇರಿನಭದ ನಗರಿಯಲ್ಲಿನಗಾರೆ ಹೊಡೆಯುತ್ತಎತ್ತರಕ್ಕೇರುವ ಸಂದೇಶವೀಯುವಪತಂಗುಗಳ ಪರ್ವ ಎಲ್ಲೆಲ್ಲೂ ಹರಡುತ್ತಎಲ್ಲರನ್ನೂ ನಡುಗಿಸಿದಮಹ ಮಾರಿಯನ್ನುಮಣಿಸುವ ಲಸಿಕೆಯ ಭರವಸೆಶುರುವಾಗುವ ಶುಭದಿನ

Read Post »

ಅಂಕಣ ಸಂಗಾತಿ, ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ನಂದಿನಿ ಹೆದ್ದುರ್ಗ ನನ್ನದೆಯ ಗಾಯಗಳಾವೂ ನನ್ನವಲ್ಲ..ನೀನದರ ಒಡೆಯ..ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂ‌ನಿನ್ನವೇ ಕೊಡುಗೆ..ನೊಂದು ನೋಯಿಸಿದ್ದಾದ ಮೇಲೆಒಂದು ಅಂತರದಲಿ ನೀ ನಿಂತು‌ ನೋಡುವೆ.ಈ ಕ್ರೂರ ಮೌನದೊಳಗೆಎಷ್ಟೊಂದು ಪ್ರಶ್ನೆಗಳು.. ಬಗೆದು ತೋರಬಹುದೇ ಒಲವ ಈ ಬಗೆಯನ್ನು?ಹಗಲು ಹೊಳೆಯುವುದೆ ಇರುಳ ಈ ಹುಣ್ಣಿಮೆಗೆ?ಎದೆಯೊಳಗೆ ನೋವು ಉಲಿಯುವ ಹಕ್ಕಿಗೆ ಹೆಸರಿದೆಯೇ?ನಾನು ಬರುವ ಮೊದಲು ಎಷ್ಟೊಂದು ಸುಖಿ ನೀನು!! ಮಾತು ಮಹಲುಗಳಿಗಿಲ್ಲಿ ನೋವ ಅಡಿಪಾಯಹೊರಡಲೇ ಎನುವಾಗಷ್ಟೇ ನರಳು ನಿಟ್ಟುಸಿರುಎರಡು ಹೂವೆಸಳು,ಬೆಳುದಿಂಗಳು,ಎದೆಯ ಆಲಾಪಕ್ಕೂಬಿಡುವಿಲ್ಲ ನಿನಗೆ ಶೂನ್ಯ ಹುಟ್ಟಿಸಿದ್ದೂ‌ ನೀನೇ.ಕೋಲಾಹಲಕ್ಕೆ ಕಾರಣವೂ ನೀನೇನಾನು ಅಮಾವಾಸ್ಯೆ ಇರುಳು…ನೀನು ನಡುರಾತ್ರಿ ಎರಗುವ ನೋವುಒಲವೂ ಅಲೌಕಿಕ…!!!ದಯಮಾಡಿ ನಿನ್ನ ಬರಡು ದೇವರಿಗೆ ತಿಳಿಹೇಳು.__—————————–

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ಹಾಡು ವಸುಂಧರಾ ಕದಲೂರು ಇಂದಿನ ಹೊಸತುನಾಳೆ ಹಳತಾಗಬೇಕುಮತ್ತೆ ನಾಳೆಯೂ ಹೊಸತುದಿನವಾಗಬೇಕು.ಕ್ಷಣ ಕಳೆದು ಸಮಯಉರುಳುತಿರಬೇಕುಬೇರೆ ಗಳಿಗೆ ನಮಗಾಗಿಮರಳಿ ಬರಬೇಕು. ಬೆಳಕು ಮತ್ತೆ ಮತ್ತೆಉದಯಿಸುತಾ ತಾಹೇಳುವುದು ಏನನ್ನು?ನಿನ್ನೆಯೂಬಂದಿದ್ದೆನೆಂಬ ಬೇಸರವನ್ನೇ?!ಇರುಳ ಕತ್ತಲಲಿ ಮತ್ತೆಮುಳುಗುವ ಭಯವನ್ನೇ..?! ಅನುಕರಿಸು ದಿನಪನನುಅನುಸರಿಸು ಇಳೆಯಪರಿಭ್ರಮಣೆಯನು.ಆಗು ನೀ ನವ ನಾವೀನ್ಯಚೈತನ್ಯ ದೀವಿಗೆ.ಅಲೆಯಾಗು ಸೆಲೆಯಾಗುಭೋರ್ಗರೆದು ಮೊರೆದುಮಗುವಾಗಿ ಶರಣಾಗುಕಡಲ ದೇವಿಗೆ. ನೀನಾಗದಿರು ಎಂದೆಂದಿಗೂಚಿತ್ತ ಚಾಂಚಲ್ಯಚಕ್ರವ್ಯೂಹದಲಿ ಸಿಲುಕಿತೊಳಲುವ ಬಂಧಿಯಾದಖೈದಿಯಂತೆ;ಚಿಂತಿಸೊಮ್ಮೆ ಮನದೆರೆದುನೀ ಆಗು ನಿಗೂಢ ವ್ಯೂಹಕಳಿಚಿ ಅನಂತದೆಡೆಗೆ ಹಾರುವಪತಂಗದಂತೆ.

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿಗೊಂದು ಪ್ರಶ್ನೆ   ಸುಜಾತಾ ರವೀಶ್ ದುಗುಡದ ಛಾಯೆ ಆವರಿಸಿದ ಚಿಂತೆಯ ಕಾವಳ ಹೊದ್ದ ಮನಕೆ ತರಬಹುದೇ ಸಂಕ್ರಾಂತಿ ನಿನ್ನಾಗಮನ ಹೊಸ ಚೈತನ್ಯದ ಶಾಖದ ಕಾವನು? ಜಡ್ಡು ಕಟ್ಟಿರುವ ಜೀವನ ಜಾಡ್ಯಕೆಋತು ಪರಿವರ್ತನೆಯ ಔಷಧಿಯೇ? ಹೇಮಂತನ ಮಬ್ಬು ಆಲಸ್ಯಕೆ ಮಾಗಿಯ ರೋಗಕೆ ನೀ ಮದ್ದೇ? ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆನಿತ್ಯ ನೂತನ ಸಂಭ್ರಮ ತರುವ ಆವರ್ತನೆ ಏಕತಾನತೆಯ ಬೇಸರದ ಬದುಕಿಗೆ ನೀ ತರಬಹುದೇನು ಹೊಸ ಬದಲಾವಣೆ?  ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ ಬರಬಹುದೆ ಈಗ ಸಫಲತೆಯ ಸುಗ್ಗಿ? ಸಿಗುವುದೇ ಪರಿಶ್ರಮಕ್ಕೊಂದು ಬೆಲೆ ಬಾಳಪಯಣಕೊಂದು ಗಮ್ಯ ನೆಲೆ? ಕಾಯುತಲಿದೆ ಹೃದಯ ನೊಂದು ನಲುಗಿ ಮುದುಡಿ ಸೊರಗಿ ಬಳಲಿ ಬೆಂಡಾಗಿ ಮೊಗ್ಗಾದ ಭಾವಗಳ ಅರಳಿಸಬಹುದೇ ಎಂದು ಜರುಗಿ ನಿರೀಕ್ಷಿಸುತಲಿರುವ some ಕ್ರಾಂತಿ?   

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಯಕ್ಷಿಯ ಪ್ರಶ್ನೋತ್ತರ ಡಾ. ರೇಣುಕಾ ಅರುಣ ಕಠಾರಿ ಗಂಭೀರವಾಗಿ ಭೀಗುತ್ತಿದ್ದ ಕಾಲವದುಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲಕಾಲದೊಳಗೆಯೆ ಅಡಗಿದ ಜೀವಸಾರದ ಕಡೆಗೆಬವಣೆಯ ಹುಡಕ ಹೊರಟ ಯಕ್ಷಿ ನಾ! ಮುರುಟಿದ ಕನಸಗಳೆಲ್ಲವೂ ಮೆರವಣಿಗೆಗೆ ಸಿದ್ದವಾಗಿದ್ದು ತಿಳಿಯಲಿಲ್ಲ.ಎಲ್ಲಾ ಎಲ್ಲೆಯನ್ನು ಮೀರಿ ಹತಾಟೆಯ ಹಿಂದೆ ಸರಿದಿತ್ತು.ಹಂಸದ ನಡುಗೆ ಕುರ್ಮದ ಆಯಸ್ಸು ಕಣ್ಮಂದೆ ನಿಂತಿತ್ತು..ಕಡಲಳೊಗಿನ ಲವಣ ಮಾತ್ರ ನೀರಲ್ಲಿಯೇ ತೆಲುತ್ತಿತ್ತು. ದುಗುಡು ದುಮ್ಮಾನಗಳಿಗೆ ವಿವೇಕ ಹೇಳಿ ಸಾಕಾಗಿತ್ತುಅನುಭವ ಅನುಭಾವದತ್ತ ಸಾಗಿದ ಪಯಣ ನಿಲ್ಲುತ್ತಿರಲಿಲ್ಲಬದುಕಿನ ಎಲ್ಲ ಮಗ್ಗಲುಗಳು ಸ್ಮಶಾನದ ಅಂಗಳದಲ್ಲಿ ನಲಿಯುತ್ತಿದ್ದವು.ಹೇಳದೆ ಹೊರಟ ಯಕ್ಷಿಯ ಯೋಚನೆಗೆ ನಿಲುವು ಸಿಕ್ಕುವುದಾದರು ಹೇಗೆ? ಬೇವರು, ಮಣ್ಣಿನ ವಾಸನೆಗೆ ಮೆಚ್ಚಿ ಬಂದವರು ಯಾರು ಇಲ್ಲ.ತೊಟ್ಟು, ಮಾಗಿದ ರೂಪಲಾವಣ್ಯದ ಸಂತೃಪ್ತಿಗೆ ಸೇರೆ ಸಿಕ್ಕವರೇ ಹೆಚ್ಚು.ಇಳೆಯ ಗರ್ಭದೊಳಗೆ ಸಿಲುಕಿದ ನಾ ಎಂಬುವುದು ಮಾಂiÀiವಾಗಿದೆಹತಾಶೆಯೊಂದಿಗೆ ಅಂಟಿಕೊAಡಿದ್ದ ಒಡನಾಟಕ್ಕೆ ತೆರೆ ಹಾಕುವ ಕಾಲ ಬಂದಾಯಿತು. ಚರಿತ್ರೆಯ ಪುಟಗಳ ಹಿಂದಿನ ಕಥೆಗೇನು ಉತ್ತರವೂ ಇದೆ, ಬರೆದಿದ್ದು ಇದೆ.ಆದರೆ ಮುಂದಿನ?ಪ್ರೀತಿ ಸಂಕೋಲೆಗಳಿAದ ಹೆಣೆದುಕೊಂಡ ಅದೆಷ್ಟೋ ಹೆಣ್ಣು ತಡಕಾಡಿ,ಬೆಂದ ಕಥೆ ಮೂಲೆಗೆ ಸೇರಿದ್ದು ಇದೆಲ್ಲಾ?ಈ ಯಕ್ಷಿಯ ಪ್ರಶ್ನೊತ್ತರಗಳಿಗೆ ಉತ್ತರದ ಮಾತೆಲ್ಲಿ,ಸಿಗದೆ, ಬತ್ತದ ಬದುಕು ಹುಡುಕುತ್ತ,ಹೊರಟ ನಾ ಯಕ್ಷಿಯಲ್ಲದೇ ಮತ್ತೇನು ??

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಚೀನಾದ ಚೈನ… ವಾಯ್.ಜೆ.ಮಹಿಬೂಬ ಹೋಗ್ಹೋಗು ಕರೋನಾಎಲ್ಲಾ ಕೂಗಿ ಹೇಳೋಣಾ!!ಪ!! ಕರುಣೆಯಿಲ್ಲದ ಕರೊನಾಬಂತೋ ಒಕ್ಕರಿಸಿಜಗವು ನಿತ್ಯ ಹಾಳಗೆಡವಿತುಜೀವ ಮುಕ್ಕರಿಸಿ !!೧!! ಚೀನಾದೊಳಗ ಚೈನಭವಕ ತಂತೋ ಊನಭಾರತವೂ ಮೌನ !ಮನವೂ ಮಸಣ ತಾಣ !!೦೨!! ಹಿಂದೂ-ಮುಸಲ್ಮಾನಅದಕೇನಿಲ್ಲ ಖುನ !ಪಾರ್ಸಿ-ಬುದ್ದ-ಜೈನಮಾಡಲಿಲ್ಲ ಮನನ!!೦೩!! ಕರುಣೆ ಇಲ್ಲ ಅದಕಹೊಡತ ತಂತೊ ಧನಕಜೀವ ಹಿಂಡಿತಲ್ಲೊದುಡಿದು ತಿನ್ನೊ ದಿನಕ!!೦೪!! ಹಸಿವು ತಾಳಲ್ಲಿಲ್ಲಪಥವೂ ಕಾಣುತಿಲ್ಲಹಂಗರೆದು ನಡೆದು ನಾವುನಡುವೆ ಸತ್ತೆವಲ್ಲೊ !!೦೫!!

Read Post »

You cannot copy content of this page

Scroll to Top