ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಹೃದಯ ಭಾಷೆ

ಅನುವಾದಿತ ಕಥೆ ಹೃದಯ ಭಾಷೆ ತೆಲುಗು ಮೂಲ: ಕಳ್ಳೆ ವೆಂಕಟೇಶ್ವರ ಶಾಸ್ತ್ರಿ                               ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಬೆಳೆಗ್ಗೆ ಐದು ಗಂಟೆಗೆ ಆತ ತನ್ನ ಫ್ಲಾಟಿನಿಂದ ಹೊರಗಡೆ ಬಂದ. ಆತನ ಫ್ಲಾಟ್ ತುಂಬಾ ಚಿಕ್ಕದು. ಗ್ರೌಂಡ್ ಫ್ಲೋರ್ ನಲ್ಲಿತ್ತು. ಒಂದು ಹಾಲು, ಒಂದು ಮಲಗುವ ಕೋಣೆ, ಅಡುಗೆಮನೆ, ಬಾತ್ರೂಮ್ ಕಮ್ ಟಾಯ್ಲೆಟ್ ಇವು ಅದರ ಭಾಗಗಳು. ಬಾಗಿಲು ಮುಚ್ಚಿ, ಚಿಲಕವಿಟ್ಟು ಅದಕ್ಕೆ ಬೀಗ ಹಾಕಿದ. ಹೊರಗಡೆ ಇನ್ನೂ ಕತ್ತಲಿತ್ತು. ಬೆತ್ತದ ಆಸರೆಯಿಂದ ಸದ್ದಿಲ್ಲದೇ ಬೇಗಬೇಗ ನಡೆಯುತ್ತಿದ್ದ. ಆತನ ಹೆಗಲಿಗೆ ಕ್ಯಾನ್ವಾಸಿನ ಹೆಗಲು ಚೀಲ ನೇತಾಡುತ್ತಿತ್ತು. ಆತನ ಹೆಸರೇನು ಅಂತ ಅಲ್ಲಿರುವವರಿಗೆ ಗೊತ್ತಿರಲಿಲ್ಲ. ಆ ಫ್ಲಾಟ್ ಆತನ ಸ್ವಂತದ್ದೇ. ಹಾಗಾದರೇ, ಆತನನ್ನು ಏನಂತ ಕರೆಯುತ್ತಾರೆ ? ಆತನನ್ನು ಯಾರೂ ಕರೆಯುವುದಿಲ್ಲ. ಇನ್ನೂ ಹೇಳಬೇಕಾದರೆ ಆತನ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಇನ್ನುವರೆಗೂ ಆತನನ್ನು ಕರೆಯುವ ಅಗತ್ಯವೇ ಬಿದ್ದಿರಲಿಲ್ಲ ಅಲ್ಲಿ ವಾಸಿಸುವವರಿಗೆ. ಆತನ ವಯಸ್ಸು ಹೆಚ್ಚುಕಡಿಮೆ ಅರವತ್ತು ದಾಟಿ ಎಪ್ಪತ್ತರ ಒಳಗೆ ಇರಬಹುದು. ಆ ವಯಸ್ಸಿಗೆ ತಕ್ಕ ಹಾಗೆ, ಅತಿ ಸಾಧಾರಣವಾಗೇ ಇರುತ್ತಾನೆ ಆತ. ಆದರೇ…. ಯಾವಾಗಲೂ ಒಂದೇ ತರ ಇರುವುದಿಲ್ಲ . ಸ್ವಲ್ಪ ದಿವಸ ಮೀಸೆ ಇಟ್ಟಿದ್ದರೆ, ಮತ್ತೆ ಕೆಲದಿನ ತೆಗೆದಿರುತ್ತಾನೆ. ಒಂದು ದಿನ ಬೋಳಉತಲೆಯೊಂದಿಗೆ ಪ್ರತ್ಯಕ್ಷವಾದರೆ, ಮತ್ತೆ ಕೆಲ ದಿನ ಉದ್ದ ಕೂದಲಿನ ಸಾಧುವಿನ ತರ ಕಾಣಿಸಿಕೊಳ್ಳುತ್ತಾನೆ. ಆತನ ದಿರಿಸು ಬಹು ವಿಚಿತ್ರ. ಪೈಜಾಮಾ, ಜುಬ್ಬಾ ಧರಿಸಿದ್ದು, ತಲೆಗೆ ವಿದೇಶೀ ಟೋಪಿ ಇಡುತ್ತಾನೆ. ಒಮ್ಮೊಮ್ಮೆ ಪಂಚೆ ಉಟ್ಟು, ಮೇಲೆ ಶಲ್ಯ ಹಾಕಿ ತಿರುಗುತ್ತಾನೆ. ಮತ್ತೊಮ್ಮೆ ಯಾವುದೋ ನಾಮ ಹಣೆಯಮೇಲೆ ಧರಿಸಿರುತ್ತಾನೆ. ಸರಿ….. ಈಗ ಆತ ಎತ್ತ ಹೋಗುತ್ತಿದ್ದಾನೆ ? ನೇರ ಪಾರ್ಕಿನ ಕಡೆಗೆ ಹೋಗುತ್ತಿದ್ದಾನೆ. ಆ ದಾರಿಯಲ್ಲಿ ಆತನನ್ನು ನೋಡಿ ಬೊಗಳಲು ನಾಯಿಗಳಿಲ್ಲ. ಎಲ್ಲವನ್ನು ಮುನಿಸಿಪಾಲಿಟಿಯವರು ಎಲ್ಲೋ ಸಾಗಿಸಿದ್ದಾರೆ. ಆದರೆ ಅದು ಆತನ ದೂರುಗಳಿಂದಲೇ ಆದದ್ದು ಎಂದು ಅವರಿಗೆ ಗೊತ್ತಿಲ್ಲ. ಇದೋ…. ದಿನಾ ಬೆಳಗ್ಗೆ ಪತ್ರಿಕೆ ಹಾಕುವ ಹುಡುಗರು ವೇಗವಾಗಿ ಸೈಕಲ್ ತುಳಿಯುತ್ತ ಬರುತ್ತಿದ್ದಾರೆ. “ ಇವರುಗಳೆಲ್ಲ ಕನ್ನಡಿಗಳನ್ನು ತೊಗೊಂಡು ಹೋಗುತ್ತಿದ್ದಾರೆ. ಕನ್ನಡಿಯೊಳಗೆ ನೋಡಿಕೊಳ್ಳದಿದ್ದರೆ ಜನರಿಗೆ ಏನೂ ಅರ್ಥವಾಗುವುದಿಲ್ಲ, ಪಾಪ “ ಅಂದುಕೊಂಡ ಆತ. ಆತ ಅಷ್ಟೇ….. ದಿನಪತ್ರಿಕೆಯನ್ನು ’ ಕನ್ನಡಿ’ ಅಂತ ಕರೆಯುತ್ತಾನೆ. ಜನಗಳ ಮನೋಭಾವಗಳಿಗೆ ಕನ್ನಡಿ ಹಿಡಿಯುವುದು ಮತ್ತು ಜಗತ್ತಿನಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಕನ್ನಡಿಯಂತೆ ತೋರಿಸುವುದು ದಿನಪತ್ರಿಕೆಗಳೇ ಆದ ಕಾರಣ ಆತ ಅವುಗಳಿಗೆ ಆ ಹೆಸರು ಇಟ್ಟುಕೊಂಡಿದ್ದಾನೆ. ಆತನ ವ್ಯವಹಾರವೇ ಅಷ್ಟು ! ಎಲ್ಲಾ ಸಂಕೇತ ಭಾಷೆಯಲ್ಲಿರುತ್ತೆ. ಆತ ಬರೆದಿಟ್ಟುಕೊಳ್ಳುವ ದಿನಚರಿ ಸಹ ಅದೇ ಭಾಷೆಯಲ್ಲಿರುತ್ತದೆ. ಈ ಅಭ್ಯಾಸ ಆತನಿಗೆ ಹೇಗೆ ಬಂತೋ ಯಾರಿಗೂ ಗೊತ್ತಿಲ್ಲ. ಆತ ಸಂದಿಗಳಲ್ಲಿ ನಡೆಯುವುದಿಲ್ಲ. ಮುಖ್ಯರಸ್ತೆಯ ಮೇಲೇನೇ. ಅದೂ ಸಹ ಮಾರ್ನಿಂಗ್ ವಾಕ್ ಮತ್ತು ಜಾಗಿಂಗ್ ಗಳ ಸಮ್ಮಿಶ್ರಣವಾಗಿರುತ್ತೆ. ಆತ ಹೀಗೆ ಎಷ್ಟು ದಿನಳಿಂದ ಅಥವಾ ಎಷ್ಟು ವರ್ಷಗಳಿಂದ ಮಾಡುತ್ತಿದ್ದಾನೋ ಯಾರಿಗೂ ಗೊತ್ತಿಲ್ಲ. ಇದೀಗ ಆ ಮಸೀದಿ ಪಕ್ಕದ ಮುಖ್ಯರಸ್ತೆಯ ಮೇಲಿನ ಕಾಫೀ ಹೋಟಲ್ ತೆಗೀತಿದ್ದಾರೆ. ಅದೋ ತೆಗೆದರು…..! “ ಹೌದು. ಕಷಾಯ ಕುಡಿದು ತುಂಬಾ ದಿನ ಆಯ್ತು. ನಡಿ. ಅಂತರಾತ್ಮಕ್ಕೆ ಹೋಗಿ ಸ್ವಲ್ಪ ಗಂಟಲಿಗೆ ಹಾಕೋಣ.” ಅಂತ ಹೇಳಿತು ಅವನ ಒಳ ಮನಸ್ಸು. ಅಂತರಾತ್ಮ… ಇದು ಆತ ಹೊಟೆಲಿಗೆ ಇಟ್ಟುಕೊಂಡ ಹೆಸರು….. ಅದರಲ್ಲಿ ಹೋಗಿ ಕೂತ. ಮಾಣಿ ಬಂದ ತಕ್ಷಣ “ ಕಷಾಯ” ಅಂದ. ಅವನಿಗೆ ಕನ್ನಡ ಬರುವುದಿಲ್ಲ. ಏನು ? ಎನ್ನುವ ಹಾಗೆ ಕೈಯಿಂದ ಸನ್ನೆ ಮಾಡ್ದ. ಆತ ಗೋಡೆಯ ಮೇಲಿದ್ದ ಪದಾರ್ಥಗಳ ಪಟ್ಟಿಯ ಬಳಿಗೆ ಹೋಗಿ ಕಾಫಿ ಅಂತ ಇದ್ದ ಕಡೆಗೆ ಬೆಟ್ಟು ಮಾಡಿ ತೋರಿಸಿದ. “ ಓಹೋ ! ಕಾಫೀ ಕ್ಯಾ….” ಅಂತ ತನ್ನಲ್ಲೇ ನಗೆಯಾಡುತ್ತ ಹೋದ ಅವನು. ಕಾಫಿ ಕುಡಿದ ಮೇಲೆ “ ಕವಡೆ ” ಕೊಟ್ಟು ಹೊರಬಂದ. ಕವಡೆ ಎಂದರೆ ದುಡ್ಡು… ಕಿಸೆಯಲ್ಲಿ ಕವಡೆ ಕಾಸಿಲ್ಲ ಅಂತಾರಲ್ಲ…. ಅದಕ್ಕೆ ದುಡ್ಡಿಗೆ ಕವಡೆ ಅಂತ ಹೆಸರಿಟ್ಟುಕೊಂಡಿದ್ದಾನೆ ಆತ. ಮತ್ತೆ ನಡೆಯಲು ಮೊದಲಿಟ್ಟ .  ಕೆಲ ಯುವಕರು ಟೀ ಷರ್ಟ್ ಮತ್ತು ಷಾರ್ಟ್ ಧರಿಸಿ ಜಾಗಿಂಗ್ ಗೆ ಬರುತ್ತಿದ್ದರು. ತನ್ನಲ್ಲೇ ನಕ್ಕ ಆತ. ಯಾಕೆ ಅಂತ ಅವನಿಗೂ ಗೊತ್ತಿಲ್ಲ. ಬಹುಶಃ ಒಂದು ಕಾಲದಲ್ಲಿ ತಾನು ಸಹ ಇದೇ ರೀತಿ ಯೌವನದಲ್ಲಿ ತುಂಬಿ ತುಳುಕುತ್ತಾ ಹೋರಿಯ ತರ ಓಡುತ್ತಿದ್ದ, ಈಗ ’ ನೆರಳು ’ ಬಿದ್ದು ತನಗೆ ಸಾಧ್ಯವಾಗುತ್ತಿಲ್ಲ ಎನ್ನುವ ಭಾವ ವಿರಬಹುದು. ನೀವೆಲ್ಲರೂ ನಾಳೆ ಇದೇ ’ ನೆರಳು’ ನಿಮ್ಮಮೇಲೆ ಬೀಳುವಾಗ ನನ್ನ ಹಾಗೆ ಆಗುತ್ತೀರಿ ಎನ್ನುವ ಇನ್ನೊಂದು ಭಾವ ಸಹ ಇರಬಹುದು. ನೆರಳು ಎಂದರೆ ಮುಪ್ಪು ಅಂತ ಅವನರ್ಥ. ಪಾರ್ಕಿನೊಳಗೆ ಕಾಲಿಟ್ಟ. ಒಳಗೆ ಎಂಥಾ ಒಳ್ಳೆ ಸಂಗೀತ ! ಪಾರ್ಕಿನಲ್ಲಿ….. ಆ ಸಮಯದಲ್ಲಿ ಸಂಗೀತನಾ… ಅಂತ ನೀವು ಕೇಳಬಹುದು. ಪ್ರಶಾಂತತೆಗೆ ಆತನ ನಿಘಂಟುವಿನಲ್ಲಿಯ ಹೆಸರು ಸಂಗೀತ…… ಪ್ರಶಾಂತತೆಗಿಂತ ಮಿಗಿಲಾದ ಇಂಪಾದ ಸಂಗೀತ ಬೇರೇ ಇರಲಾರದು ಅಂತ ಆತನ ಅಚಲ ನಂಬಿಕೆ. ಹೂಗಿಡಗಳ ನಡುವೆ ಹಾಕಿದ ಬಂಡೆಗಳ ಮೇಲೆ ನಡೆಯುತ್ತಿದ್ದ. ಪಕ್ಕಕ್ಕೆ ನೋಡುತ್ತಾ “ ಈ ಹುಡುಗೀರು ಇನ್ನೂ ಏಳ್ಳಿಲ್ಲ ಅಂತ ಕಾಣತ್ತೆ….. ಮಲ್ಕೊಳ್ಳಿ.  ನಿದ್ರೆಮಾಡಿ.  ಸೊಗಸಾದ ಕನಸು ಕಾಣಿರಿ ಹಾಯಾಗಿ…. ನನ್ನ ಮುದ್ದು ಹುಡುಗಿಯರೇ “ ಅಂದ. ಹೌದು. ಮತ್ತೆ……ಆ ರಸಿಕನ ಹೃದಯದ ಭಾಷೆಯ ಪ್ರಕಾರ ಹೂಗಳು ಮತ್ತು ಹುಡುಗಿಯರೂ ಒಂದೇ….. ಹಾಗಾದರೆ ಹುಡುಗಿಯರಿಗೆ ಏನು ಹೆಸರಿಟ್ಟಿದ್ದಾನೋ ಅಂತ ನಿಮಗೆ ಸಂದೇಹವಾಗಬಹುದು ಅಲ್ಲವೇ ! ಅದೋ ನೋಡಿ…. ಸ್ವಲ್ಪ ದೂರದಲ್ಲಿ ಇಬ್ಬರು ಹುಡುಗೀರು ಸ್ಕಿಪ್ಪಿಂಗ್ ಮಾಡ್ತಾ ಇದ್ದರು. “ ಹಾಯ್ ಚಾಕ್ಲೆಟ್ಸ್ “ ಅಂತ ಸಂಬೋಧಿಸಿದ. ಅವರು ಸಣ್ಣಗೆ ನಕ್ಕರು. ಹುಡುಗೀರಿಗೆ ಚಾಕ್ಲೆಟ್ ಗಳೆಂದರೆ ಇಷ್ಟ ಅಲ್ಲವಾ ! ಅದಕ್ಕೆ ಅವರಿಗೆ ಆ ಹೆಸರು. ಅಲ್ಲಿಗೆ ಆತನಿಗೆ ನಡೆದು ನಡೆದು ಸಾಕಾಯಿತು. ಕಾಲು ಹರಿಯುತ್ತಿದೆ ಎನಿಸಿತು. ಒಂದು ಮಂಚದ ಮೇಲೆ ಕುಳಿತುಕೊಂಡ…. ಪಾರ್ಕಿನಲ್ಲಿಯ ಕಲ್ಲಿನ ಸೋಫಾಗಳೆಲ್ಲಾ ಆತನಿಗೆ ಮಂಚಗಳೇ. ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಧ್ಯಾನದಲ್ಲಿ ಮಗ್ನನಾದ. ಸಮಯ ಆರುಗಂಟೆಯಾಯಿತು. ಬೆಳಕಿನ ಕಿರಣಗಳು ಜಗತ್ತನ್ನು ಬೆಳಗಲು ಶುರುಮಾಡಿದ್ದವು. ಹತ್ತು ನಿಮಿಷದ ನಂತರ ಕಣ್ಣು ಬಿಟ್ಟು ಅಲ್ಲಿಂದ ಎದ್ದ. ಮತ್ತೆ ನಡಿಗೆ. ತೋಟದಲ್ಲಿ ಸುತ್ತಾಡುತ್ತಾ ಯಾವುದೋ ಹಾಡು ಹಾಡಿಕೊಳ್ಳುತ್ತಿದ್ದ. ಆತನ ಪಕ್ಕಕ್ಕೆ ನಡೆಯುತ್ತಿದ್ದ ಐವತ್ತರ ಪ್ರಾಯದ  ಹೆಂಗಸು ಆತನ ರಾಗವನ್ನು ಉತ್ಸುಕತೆಯಿಂದ ಆಲಿಸಿದಳು. ಏನೂ ಅರ್ಥವಾಗಲಿಲ್ಲ. ಯಾವುದೋ ಹಳೆಯ ಹಾಡಿನ ಅಣಕ ಅದು. ಆದರೇ ಪದಗಳು ಅರ್ಥವಾದಹಾಗೆ ಅನಿಸಲಿಲ್ಲ. ಅದು ಆತನ ಸಂಕೇತ ಭಾಷೆಯಲ್ಲಿತ್ತು. ಮೆಲ್ಲಗೆ ತನ್ನಲ್ಲಿ ತಾನೇ ನಕ್ಕು, ಸರಸರಾ ಆತನನ್ನ ದಾಟಿ ಹೋದಳು. ಸೌಂದರ್ಯ ಬೆಣ್ಣೆಯಹಾಗೆ… ಕರಗಿಹೋಗುತ್ತಿರುತ್ತೆ. ಆದರೆ ಆನಂದ ಪಾಯಸದ ತರ ಒಂದು ದಿವ್ಯ ಅನುಭವ. ಜೀವನ ಒಂದು ಪ್ರವಾಹ. ಇವೆಲ್ಲ ಸೇರಿಸಿ ಹಾಡಿದ ಅಣಕ ಹಾಡು ಯಾರಿಗೆ ತಾನೇ ಅರ್ಥವಾದೀತು ? ಬೆಳ್ಳನೆ ಬೆಳಗಾಯಿತು. ಚುರುಕಾಗಿ ನಡೆಯುತ್ತಿದ್ದ ಆತ ಒಂದು ಕ್ಷಣ ಶಾಕ್ ಹೊಡೆದವರ ಹಾಗೆ ಎದೆಯ ಮೇಲೆ ಕೈಯಿಟ್ಟುಕೊಂಡು ಕಲ್ಲಿನ ತರ ಹಾಗೇ ನಿಂತು ಬಿಟ್ಟ. ಎದೆಗೆ ಯಾರೋ ಮೊನಚಾದ ಭರ್ಜಿಯಿಂದಿ ತಿವಿದಹಾಗೆ ಅನಿಸಿತು. ಆತನಿಗೆ ಹೃದಯಾಘಾತವಾಗಿತ್ತು. ಅದು ಆತನಿಗೆ ಮೊದಲನೆಯಸಲ ಅನುಭವಕ್ಕೆ ಬಂದಿತ್ತು. ಹಣೆಯ ಮೇಲೆ ಬೆವರು ಮಡುಗಟ್ಟಿತು. ಮೈಯಲ್ಲೆಲ್ಲಾ ಛಳುಕು ಬಂದಂತಾಯಿತು. ದೇಹ ಬೆಂಡಾಗುತ್ತಿತ್ತು. ನೆಲಕ್ಕೆ ಕುಸಿದ. ಯಾರೋ ಆತನ ಮುಖಕ್ಕೆ ನೀರು ಚೆಲ್ಲಿ, ಎಬ್ಬಿಸಿ ಕೂರಿಸಿದರು. ಕಣ್ಣು ತೆಗೆದು ನೋಡಿ ಎದುರಲ್ಲಿ ಕಂಡ ಮಧ್ಯವಯಸ್ಸಿನ ವ್ಯಕ್ತಿಯನ್ನೊಮ್ಮೆ ಕೃತಜ್ಞತೆಯಿಂದ ನೋಡಿದ. “ ಧಾರೆ….ಧಾರೆ…. “ ಎಂದ. “ಏನಂದ್ರಿ ?” ಆ ಉಪಕಾರಿ ಕೇಳಿದ. ಅವನ ಕೈಲಿದ್ದ ಬಾಟಲಿಯ ಕಡೆಗೆ ನೋಡುತ್ತಾ ಆತ “ ಧಾರೆ “ ಎಂದ. ಅರ್ಥ ಮಾಡಿಕೊಂಡವನ ಹಾಗೆ ಅವನು ಆ ಬಾಟಲ್ ಎತ್ತಿ ನೀರು ಕುಡಿಸಿದ. ಗುಟುಕು ಹಾಕುತ್ತಾ ಕುಡಿದು ಚೇತರಿಸಿಕೊಂಡ. ತನ್ನ ಪ್ರಾಣ ಉಳಿಸಿದವನಿಗೆ ಕೈಯೆತ್ತಿ ನಮಸ್ಕರಿಸುತ್ತಾ “ ರತ್ನಗಳು “ ಎಂದ. ಕೃತಜ್ಞತೆಗಳು ರತ್ನದ ಹಾಗೆ ಅಂತ ಅವನಿಗೆ ಗೊತ್ತಾಗದೇ ಈತನನ್ನ ಹುಚ್ಚನನ್ನ ನೋಡುವ ಹಾಗೆ ನೋಡಿ ನಕ್ಕ ಅವನು. ನಮ್ಮ ಕತೆಯ ನಾಯಕ ತನ್ನ ಬೆತ್ತದ ಸಹಾಯದಿಂದ ಮೇಲೆದ್ದ. ಆ ಹೊಸಬ ಮುಂದಕ್ಕೆ ಸಾಗಿದ. ಮತ್ತೆ ನಡೆಯಲು ಮೊದಲು ಮಾಡಿದ. ಆದರೆ ತುಂಬಾ ಹೊತ್ತು ನಡೆಯಲಾಗಲಿಲ್ಲ ಆತನಿಗೆ. ಒಂದು ಆಟೋ ನಿಲ್ಲಿಸಿ, ಹತ್ತಿ “ ನಡೆ ” ಎನ್ನುವ ಹಾಗೆ ಸನ್ನೆ ಮಾಡಿದ. “ ಎಲ್ಲಿಗೆ ?” ತನ್ನ ಕಿಸೆಯಿಂದ ಒಂದು ವಿಜಿಟಿಂಗ್ ಕಾರ್ಡ್ ತೆಗೆದು ಅವನಿಗೆ ತೋರಿಸಿದ. ಅದರಲ್ಲಿ ಆತನ ಹೆಸರಿಲ್ಲ. ಅದು ನೀಲಿಮಾ ಟವರ್ಸಿನ ವಿಳಾಸವಿರುವ ಕಾರ್ಡ್. ಅದರ ಮೇಲಿನ ಒಂದು ಮೂಲೆಯಲ್ಲಿ ಪೆನ್ನಿನಿಂದ ೧೦೧ ಅಂತ ಬರೆದಿತ್ತು. ಹತ್ತು ನಿಮಿಷಗಳಲ್ಲಿ ಆಟೋ ಅಪಾರ್ಟ್ ಮೆಂಟಿನ ಮುಂದೆ ನಿಲ್ಲುತ್ತಲೇ, ಆತ ಹಣ ಕೊಟ್ಟು ತನ ಮನೆಗೆ ನಡೆದ. ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಏನೋ ನೆನಪಾಗಿ ಹಿಂತಿರುಗಿದ. ಅಲ್ಲಿಗೆ ಸ್ವಲ್ಪ ದೂರದಲ್ಲಿದ್ದ ಟೀ ಹೋಟಲ್ ಕಡೆಗೆ ನಡೆದ. ಅದರ ಪಕ್ಕಕ್ಕೆ ಒಂದು ಟೆಲಿಫೋನ್ ಬೂತ್ ಇತ್ತು. ಗಾಜಿನ ಬಾಗಿಲು ತೆಗೆದು ಅದರಲ್ಲಿ ಹೋಗಿ ಕೂತ. ಮೈ ದಣಿವಿನಂದ ನಡುಗುತ್ತಿತ್ತು. ಕಿಸಿಗೆ ಕೈಹಾಕಿ ಯಾವುದೋ ಕಾಗದ ಹೊರಗೆ ತೆಗೆದ. ಅದರಲ್ಲಿಯ ಯಾವುದೋ ಫೋನ್ ನಂಬರ್ ನೋಡಿ ಅದನ್ನ ಅಲ್ಲಿ ಕುಳಿತಿದ್ದ ಹುಡುಗಿಗೆ ತೋರಿಸಿದ. ಆ ಹುಡುಗಿ ಆ ನಂಬರ್ ನ ತನ್ನ ಹತ್ತಿರವಿದ್ದ ಕಾಗದದ ಮೇಲೆ ಬರೆದುಕೊಂಡಳು. ಆತ ಏನೋ ನೆನಪಿಸಿಕೊಳ್ಳುವ ಹಾಗೆ ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ ಅಂತ ಕಂಡಿತು. ತನ್ನ ಕಿಸೆಯಲ್ಲಿಯ ವಿಜಿಟಿಂಗ್ ಕಾರ್ಡ್ ತೆಗೆದು ಅವಳಿಗೆ ಕೊಟ್ಟು “ ಈ ವಿಳಾಸಕ್ಕೆ ಒಂಬತ್ತು ಗಂಟೆಗೆ ಬರಲಿಕ್ಕೆ ಹೇಳು” ಎನ್ನುವ ಹಾಗೆ ಸನ್ನೆ ಮಾಡಿದ. ಅವಳಿಗೆ ಅರ್ಥವಾಯಿತು. ಫೋನ್ ರಿಂಗಾಗುತ್ತಿತ್ತು. ನಿಮಿಷದ ನಂತರ “ ಹಲೋ “ ಎಂದಳು ಆ ಹುಡುಗಿ. ಆತ ಅವಳ ಕಡೆಗೇ ನೋಡುತ್ತಿದ್ದ. “ ಹಲೋ….. ಈ ನಂಬರ್ ಯಾರದು ಸರ್.  ಲಾಯರ್ ಪರಮಹಂಸ ಅವರದಾ ? ಇಲ್ಲಿ ನೀಲಿಮ ಟವರ್ಸಿನ  ೧೦೧ ನೇ ಫ್ಲಾಟಿನ ಯಾರೋ ಹಿರಿಯರು ಫೋನ್ ಮಾಡ್ತಾ ಇದಾರೆ. ನಿಮ್ಮನ್ನ ಅವರ ಮನೆಗೆ ಒಂಬತ್ತು ಗಂಟೆಗೆ ಬರಲು ಹೇಳ್ತಾ ಇದ್ದಾರೆ “ ಆಕಡೆಯಿಂದ “ ಆಯಿತು” ಅಂತ ಕೇಳಿಸುತ್ತಲೇ ಫೋನ್ ಇಟ್ಟು “ ಬರ್ತಾರಂತೆ” ಎಂದಳು. ಆತ ಹಣ ಆಕೆಯ ಕೈಯಲ್ಲಿಟ್ಟು “ ರತ್ನಗಳು, ವಜ್ರಗಳು “ ಅಂತ ಹೇಳಿ ಹೊರಬಂದ. ಆ ಹುಡುಗಿ ಸ್ವಲ್ಪ ವಿಚಿತ್ರವಾಗಿ, ಸ್ವಲ್ಪ ಭಯದಿಂದ, ಸ್ವಲ್ಪ ಮುಜುಗರದಿಂದ, ಆಸಕ್ತಿಯಿಂದ ನೋಡುತ್ತಲೇ ಇದ್ದಳು. ಆತ ಮನೆ ಸೇರಿ ಬೀಗ ತೆಗೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡ. ಲಾಯರ್ ತಪ್ಪದೇ ಬರುತ್ತಾರೆಂದು ಆತನಿಗೆ ಗೊತ್ತು. ಆತನಿಗೀಗ ನಿಜವಾಗ್ಲೂ ಆತಂಕ ಹೆಚ್ಚಿತ್ತು. ತನಗೆ ಮೊದಲನೆಯ

ಹೃದಯ ಭಾಷೆ Read Post »

ಇತರೆ

ಯುವ ಗಜಲ್‌ ಕವಿ ಶಿವಪ್ರಕಾಶ ರು ಕುಂಬಾರ ಹೆಸರು: ಶಿವಪ್ರಕಾಶ ರು ಕುಂಬಾರ(ನಂರುಶಿ ಕಡೂರು) ವಯಸ್ಸು: ೩೨ ಶಿಕ್ಷಣ: ಐಟಿಐ ,ಡಿಪ್ಲೋಮಾ ವೃತ್ತಿ: ಬೆಂಗಳೂರು ಮೆಟ್ರೋ ರೈಲ್ವೆನಲ್ಲಿ ಕಿರಿಯ ಅಭಿಯಂತರ ಪ್ರಕಟಿತ ಕೃತಿಗಳು : ೧) ಅಮೃತ ಸಿಂಚನವು ನಿಮಗಾಗಿ ( ಕವನ ಸಂಕಲನ) ೨) ಕಾಮನ ಬಿಲ್ಲು ಬಣ್ಣ ಬೇಡುತಿದೆ (ಗಜಲ್ ಸಂಕಲನ) ೩) ನೇರಿಶಾ (ಗಜಲ್ ಸಂಕಲನ) ಸಂಗಾತಿಓದುಗರಿಗೆ ಇವರದೊಂದು ಗಜಲ್ ಸತ್ತವನ ಮನೆಯ ಗೋಳು ನನಗೂ ಕೇಳುತಿದೆ ಗಾಲಿಬ್ಯಮ ಕಿಂಕರರ ನರ್ತನ ಎಲ್ಲೇ ಮೀರುತಿದೆ ಗಾಲಿಬ್ ಹಸಿದ ಹೆಬ್ಬುಲಿಯಂತೆ ರಣಕೇಕೆ ಹಾಕುವುದು ಏಕೆಮಸಣವು ನರ ಜೀವಗಳ ತಾನೇ ಬೇಡುತಿದೆ ಗಾಲಿಬ್ ಅಂಗುಲಿಮಾಲನಂತೆ ಕೊರಳಲಿ ಅದೆಷ್ಟು ಬುರುಡೆಗಳೋಜಗವನು ಸುತ್ತುತ ತಮಟೆ ಬಡಿದು ಸಾರುತಿದೆ ಗಾಲಿಬ್ ಮೊಗ್ಗುಗಳನೂ ಬಿಡದೆ ಚಿವುಟಿ ಊದುವುದು ನ್ಯಾಯವೇರಾಶಿ ಹೆಣಗಳ ತೋರಿಸಿ ಎಚ್ಚರ‌ ನೀಡುತಿದೆ ಗಾಲಿಬ್ ಹೇಡಿಯಂತೆ ಹೆದರಿ ಇನ್ನೆಷ್ಟು ದಿನ ಉಸಿರ ಹಿಡಿದಿಡಲಿನಂರುಶಿ ಜೀವ ಕೂಡ ಎಲ್ಲರಲಿ ಸೇರುತಿದೆ ಗಾಲಿಬ್. **********************************

Read Post »

ಅನುವಾದ

ಅನುವಾದಿತಕವಿತೆ ನನ್ನ ಗಾಂಧಿ ಕನ್ನಡಕ್ಕೆ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ನನ್ನ ಗಾಂಧಿ ಬೋಳು ತಲೆ ಕಣ್ಣಲ್ಲಿ ಚಾಳೀಸುಕೈಯಲ್ಲಿ ಕೋಲುಮುಖದಲೊಂದು ಮಾಗಿದ ನಗೆಯಗಾಂಧಿ ನನ್ನೊಳಗೆ ನೀನುತಾತನಾಗಿ ಹುಟ್ಟಿದೆ ಹೆಡ್ ಮಾಸ್ತರರ ಕೋಣೆಯಗೋಡೆಯ ಮೇಲೆಪೋಟೋದಲ್ಲಿ ನೀನಿದ್ದೆವರುಷದಲ್ಲಿ ಮೂರು ಬಾರಿನನ್ನ ಕೈಗೂ ನಿಲುಕಿಚೌಕಟ್ಟು ತಿಕ್ಕಿ ಗಾಜು ಒರೆಸಿಹೂಮಾಲೆ ಹಾಕಿ ಜೈಕಾರ ಕೂಗಿಲಡ್ಡು ತಿನ್ನುವಾಗಬಾಯಿ ತುಂಬ ಸಿಹಿಮನದಲ್ಲಿ ಖುಷಿ ಬೆಳೆದಂತೆ ನಾನು ನೀನೂ ಬೆಳೆದೆತಾತ ಮಹಾತ್ಮನಾದೆಸರಳ ಸತ್ಯ ಅಹಿಂಸೆಗಳಸಾಕಾರ ಮೂರ್ತಿಯಾದೆಬೆಳಕಾದೆ ಧಮನಿಯಲಿ ಬಿಸುಪುಮನದಲ್ಲಿ ಹುರುಪುತುಂಬಿದ್ದ ಕಾಲದಲಿಹೊನಲಿಗೆದುರು ಈಜುವ ಕನಸಿತ್ತುಕಂಗಳಲಿ ನಿನ್ನ ಬಿಂಬವಿತ್ತು ನಿನ್ನ ಹಾಗೆ ಚಾಳೀಸುನನಗೂ ಬಂದಿದೆ ಈಗಕಚೇರಿಯ ನನ್ನ ಕುರ್ಚಿಯ ಹಿಂದೆನಿನ್ನ ಪಟ ತೂಗು ಹಾಕಿರುವೆ ಕಣ್ಣಾಡಿಸುವೆ ಹೆಣ್ಣಿನ ಮೇಲೆರಿಗಿದರಕ್ಕಸರ ಎಫ್ ಐ ಆರ್ಪ್ರತಿಗಳ ಮೇಲೆಪಾನಮತ್ತ ಪಿಶಾಚಿ ಪತಿಯಕತೆ ಹೇಳುವ ಡಿ ಐ ಆರ್ ನಪುಟಗಳ ಮೇಲೆಹತ್ತಿಕ್ಕುವೆ ಎದೆಯೊಳಗೆಭುಗಿಲೇಳುವ ಹೊನಲಅದು ಪಾದಮಸ್ತಕಾದಿಯಾಗಿ ಹರಿದುಪೆನ್ನಿನ ತುದಿಯಲ್ಲಿ ಸ್ತಬ್ದವಾಗುವುದು ಬಾಪೂ ನಿನ್ನ ಚರಿತೆಅರಿವುದೆಷ್ಟು ಸುಖವೋಆ ಹಾದಿಯ ತುಳಿವಸುಖವೂ ನನ್ನೀ ಆತ್ಮಕ್ಕಿರಲಿ My Gandhi.. Bald head,spectacled eyes,A stick in hands,A smile on ur wrinkled face,Gandhi you were born as aGrandpa in me. You were in a photoOn a wall of the chamberOf our headmaster.Even I could reach youThrice in a year. When we were eating a ladduAfter scrubbing the frame,Cleaning the glass,Decorating with a garland,And hailing a JaiSweetness in my mouth,And happiness filled my heart. You too grew along with me,Grandpa became a Mahatma,You became an embodimentOf simple truth,non violenceAnd lit our path. At a time when there wasWarmth in veins, spirit in the heart,Dreamt of swimming against the tide,Your image was in my eyes. Now I too have gotspectacles like you.Hanging a portrait of yoursOn the wall behind my chairIn my office. I am glancing the FIRsOf the devils who pouncedUpon the girls.DIR pages telling the storiesOf drunken demonic husbands. I Control the flamming riverIn my heart,that flows throughoutFrom head to toeand settles at the tip of the pen. Bapu, how cheerful I becomeknowing your story,Let the same happiness fill my soul,While treading your path. *******************************

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಗುರುತುಗಳು ಗುರುತುಗಳುಮೂಲ ಮಲೆಯಾಳ ; ಸೇತು ಕನ್ನಡಕ್ಕೆ : ಡಾ.ಅಶೋಕ್ ಕುಮಾರ್ಪ್ರಕಾಶನ : ಕೇಂದ್ರಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೧ಬೆಲೆ : ರೂ.೨೦೦ಪುಟಗಳು : ೩೪೬ ಇದು ಮುಖ್ಯವಾಗಿ ಸಿಂಗಲ್ ಪೇರೆಂಟ್ ಆಗಿರುವ ಒಬ್ಬ ತಾಯಿ ಮತ್ತು ಮಗಳ ಸುತ್ತ ಹೆಣೆಯಲಾದ ಕತೆ.  ತಾಳ ತಪ್ಪಿದ ವೈವಾಹಿಕ ಜೀವನದಿಂದ ನೊಂದು ಸ್ವತಂತ್ರವಾಗಿ ಬಾಳುತ್ತೇನೆಂದು ಸಬರ್‌ವಾಲ್ ಕುಟುಂಬವು ನಡೆಸುತ್ತಿರುವ ಒಂದು ಕಂಪೆನಿಯ ಹೆಚ್.ಆರ್.ಮುಖ್ಯಸ್ಥೆಯಾಗಿ ಸೇರುತ್ತಾಳೆ ಪ್ರಿಯಂವದಾ ಮೆನೋನ್.  ಬುದ್ಧಿವಂತೆಯಾದ ಆಕೆ ಪರಿಶ್ರಮ ಪಟ್ಟು ದುಡಿಯುವವಳು.   ತನ್ನ ಪ್ರೀತಿಯ ಮಗಳು ನೀತುವನ್ನು ಎಂ.ಬಿ.ಎ.ಓದಿಸುತ್ತಿದ್ದಾಳೆ. ಅಪ್ಪನ ಪ್ರೀತಿಯೆಂದರೆ ಏನೆಂದು ತಿಳಿಯದ ನೀತು ವಾಚಾಳಿಯಾಗಿ ಬೆಳೆಯುತ್ತಾಳೆ ಒಮ್ಮೆ ತನ್ನ ಉದ್ಯೋಗದ ಒಂದು ಭಾಗವಾಗಿ ಗೋವಾದಲ್ಲಿ ನಡೆಯುವ ಉದ್ಯಮಿಗಳ ಸೆಮಿನಾರಿನಲ್ಲಿ ಪ್ರಿಯಂವದಾ ಪ್ರಬಂಧ ಮಂಡಿಸುತ್ತಾಳೆ. ಅಲ್ಲಿ ಆಕೆ ಬಹಳ ಹಿಂದಿನಿಂದಲೂ ತನ್ನ ಗುರುವೆಂದು ಭಾವಿಸಿ ಗೌರವಿಸುತ್ತಿದ್ದ ಡಾ.ರಾಯ್ ಚೌಧುರಿಯನ್ನು ಭೇಟಿಯಾಗುತ್ತಾಳೆ.  ಮಾತನಾಡುತ್ತ ಆತನಿಗೆ ಮಾನಸಿಕವಾಗಿ ತುಂಬ ಹತ್ತಿರವಾಗುತ್ತಾಳೆ. ಅವರ ಸಂಬಂಧ ಊರಿಗೆ ಮರಳಿದ ನಂತರವೂ ಮುಂದುವರಿಯುತ್ತದೆ.  ಆದರೆ ಆತನೊಂದಿಗಿನ ಅಮ್ಮನ ಈ ಆತ್ಮೀಯತೆ ನೀತುವಿಗೆ ಇಷ್ಟವಾಗುವುದಿಲ್ಲ. ನೀತುವಿನ ತಿರಸ್ಕಾರವು ಪ್ರಿಯಂವದೆಯ ಔದ್ಯೋಗಿಕ ಮತ್ತು ಕೌಟುಂಬಿಕ ಜೀವನದ ಸಂತೋಷಕ್ಕೆ ಭಂಗ ತರುತ್ತದೆ.  ತನ್ನ ಮನೆಗೆ ಬರುವ ನೀತುವಿನ ಗೆಳತಿಯರ ಮೂಲಕ ಅವಳ ಜತೆಗೆ ರಾಜಿ ಮಾಡಿಕೊಳ್ಳಲು ಪ್ರಿಯಂವದಾ ಪ್ರಯತ್ನಿಸುತ್ತಾಳೆ.  ನೀತು ಹರಿನಾರಾಯಣನೆಂಬ ತನ್ನ ಬುದ್ಧಿಜೀವಿ ಸಹಪಾಠಿಯ ಸ್ನೇಹ ಬೆಳೆಸುತ್ತಾಳೆ.  ಗೆಳತಿಯರು ಬೇಡವೆಂದು ಉಪದೇಶಿಸಿದರೂ ಉಪಯೋಗವಾಗುವುದಿಲ್ಲ. ನೀತು ಅಮ್ಮನನ್ನು ನಿರ್ಲಕ್ಷಿಸಿ ವಿದೇಶದಲ್ಲಿದ್ದ ತನ್ನ ಅಪ್ಪ ರಂಜಿತ್‌ಗೆ ಹತ್ತಿರವಾಗಲು ಪ್ರಯತ್ನಿಸುತ್ತಾಳೆ. ಹತಾಶಳಾದ ಪ್ರಿಯಂವದಾಳ ಕನಸುಗಳಲ್ಲಿ ಅವಳು ಗೋವಾದಲ್ಲಿ ಕಂಡ ಪಾತ್ರಗಳು ಮತ್ತೆ ಮತ್ತೆ ಬರುತ್ತವೆ.   ತನ್ನ ಮನೆಯಲ್ಲಿ ಸಹಾಯಕ್ಕೆಂದು ಪ್ರಿಯಂವದಾ ನಿವೇದಿತಾ ಎಂಬ ಪರ್ಸನಲ್ ಮ್ಯಾನೇಜರ್‌ನ್ನು ನೇಮಿಸಿಕೊಳ್ಳುತ್ತಾಳೆ. ರೇವತಿ ಎಂಬ ನಿಜನಾಮಧೇಯವುಳ್ಳ ಆಕೆಯನ್ನು ಕಂಪೆನಿಯಲ್ಲೂ ತನ್ನ ಜೂನಿಯರಾಗಿ ನೇಮಿಸಿಕೊಳ್ಳುತ್ತಾಳೆ. ರೇವತಿಯ ಜತೆ ಸೇರಿ ಪ್ರಿಯಂವದಾ ಕಂಪೆನಿಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಾಳೆ. ಮಗಳ ಬಗ್ಗೆ ಚಿಂತೆಯಿಂದಾಗಿ ಕೆಲಸ ಮಾಡಲಾಗದೆ ಕಂಪೆನಿಯಿಂದ ದೀರ್ಘಕಾಲದ ರಜಕ್ಕಾಗಿ ಅರ್ಜಿ ಹಾಕುತ್ತಾಳೆ. ಇದರೆಡೆಯಲ್ಲಿ  ನೀತುವಿನ ಮನಃಪರಿವರ್ತನೆಯಾಗಿ  ಅವರಿಬ್ಬರೂ ಊರಲ್ಲಿ ನೆಲೆಸಲು ಬರುತ್ತಾರೆ.  ಉಳಿದದ್ದನ್ನು ಓದುಗರ ಕಲ್ಪನೆಗೆ ಬಿಟ್ಟು ಕಾದಂಬರಿ ಇಲ್ಲಿಗೆ ಮುಕ್ತಾಯವಾಗುತ್ತದೆ. ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಮಳೆಗೆ ಅತೀವ ಸೌಂದರ್ಯವೂ ಆಕರ್ಷಣೆಯೂ ಇದೆ.  ಬದುಕಿನ ಸಂಕೀರ್ಣ ಸಮಸ್ಯೆಗಳು, ಮನುಷ್ಯ ಸಂಬಂಧಗಳ ವಾಸ್ತವ ಸತ್ಯ ಹಾಗೂ ಟೊಳ್ಳುತನ, ಸ್ವಪ್ನ ಸದೃಶ ನಿರೂಪಣೆಯೊಂದಿಗೆ  ಇಲ್ಲಿ ತಾಯಿ-ಮಗಳ ಬದುಕು ಚಿತ್ರಣಗೊಂಡಿದೆ. ಅದಮ್ಯವೂ ಸಂಕೀರ್ಣವೂ ಆದ ಮನುಷ್ಯ ಮನಸ್ಸು ಅನುಭವಿಸುವ ಸಂಕಟಗಳಿಗೆ ಸರಳ ಉತ್ತರಗಳನ್ನು ಪಡೆಯುವ ಬಗೆಯನ್ನು ಕಾದಂಬರಿ ಹೇಳುತ್ತದೆ.  ಒಂದು ಊರಿನ ಎಲ್ಲಾ ಸುಖ-ದುಃಖಗಳನ್ನು ಕಪ್ಪು-ಬಿಳುಪುಗಳೊಂದಿಗೆ ಶರೀರದ ಮೇಲೆ ಗುರುತುಗಳಾಗಿಸಿದ ಹಿಮ-ಧ್ರುವಗಳಲ್ಲಿ ಏಕಾಂತ ಧ್ಯಾನದಲ್ಲಿ ಮುಳುಗಿದ ಪೆಂಗ್ವಿನ್‌ಗಳು ಪೂರ್ವಜನ್ಮದಲ್ಲಿ ವಿಧವೆಗಳಾಗಿದ್ದವೆಂದೂ ಅವುಗಳ ಕುಲದಲ್ಲಿ ಹುಟ್ಟಿದ ಪ್ರಿಯಂವದಾಳ ಹಾಗೂ ಮಗಳು ನೀತುವಿನ ಕತೆಗಳನ್ನು ಪ್ರಕೃತಿಯೊಂದಿಗೆ ಮಿಳಿತಗೊಳಿಸಿ ಸೇತು ಅವರು ಮನೋಜ್ಞವಾಗಿ ಪ್ರಸ್ತುತಗೊಳಿಸಿದ್ದಾರೆ.  ನಗರೀಕರಣಕ್ಕೊಳಗಾದ ಬದುಕಿನಲ್ಲಿ ಮನುಷ್ಯ ಮನಸ್ಸುಗಳ ಆತಂಕ, ತಲ್ಲಣ,  ಕೌಟುಂಬಿಕ ಬದುಕಿನ ಸಂಘರ್ಷಗಳು,ಹಾಗೂ ಎಡೆಬಿಡದೆ ಅನುಭವಿಸುವ ನೋವು ಈ ಕಾದಂಬರಿಯಲ್ಲಿವೆ.  ಭೌತಿಕ ಜಗತ್ತಿನ ಆಂತರಿಕ ಸಂಘರ್ಷಗಳ ನಡುವೆ  ವ್ಯಕ್ತಿಯ ಮನಸ್ಸುಗಳು ಸೃಷ್ಟಿಸುವ ವಿಚಿತ್ರ ಅನುಭವಗಳು ಓದುಗರಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತವೆ.  ಮೂಲ ಮಲೆಯಾಳದ ಸುಭಗ ಶೈಲಿಗೆ ನಿಷ್ಠರಾಗಿ ಅಶೋಕ ಕುಮಾರ್ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ************************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ವಾರದ ಕವಿತೆ

ವಾರದ ಕತೆ ಧ್ರುವ ತಾರೆ ವಿನುತಾ ಹಂಚಿನಮನಿ . ಸಂಜೆ ನಾಲ್ಕು ಗಂಟೆಯ ಸಮಯ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯಲ್ಲಿ ಗದ್ದಲ ಸ್ವಲ್ಪ ಕಡಿಮೆಯಾಗಿದೆ. ಈಗ ಸಾಧಾರಣವಿರುವ ದವಾಖಾನೆಗೆ ಮಹತ್ವ ಬಂದು, ಕೊರೊನಾ ರೋಗಿಗಳಿಂದ ಯಾವಾಗಲೂ ಗಿಜಿಗುಟ್ಟುತ್ತಿದೆ. ರೋಗಿಗಳನ್ನು ಬಿಟ್ರೆ ಬೇರೆ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಅಲ್ಲಿಯೇ ಒದಗಿಸುವ ಊಟದ ಸಮಯ ಮುಗಿದಿದ್ದರಿಂದ ನರ್ಸ್, ಆಯಾ ಓಡಾಟ ಕೂಡ ಕಡಿಮೆಯಾಗಿದೆ. ಡಾಕ್ಟರ್ ಇನ್ನು ಬರುವುದು ರಾತ್ರಿಗೇ.  ಹೊರಗಡೆ ಸಿಟಿಯಲ್ಲಿ ಲಾಕ್ಡೌನ್ ಇದ್ದುದರಿಂದ ಜನಸಂಚಾರವಿಲ್ಲ. ವಾಹನಗಳ ಸದ್ದು ಕಡಿಮೆಯೇ! ಅಲ್ಲೊಂದು-ಇಲ್ಲೊಂದು ಪಿಸುಮಾತಿನ ಶಬ್ದ ಮತ್ತು ಡ್ಯೂಟಿ ಮುಗಿಸಿ ಹೋಗುವ ತರಾತುರಿಯಲ್ಲಿ ಇರುವ ನರ್ಸ್ ಆಯಾಗಳ ಹೆಜ್ಜೆಯ ಮತ್ತು ಟಕ್ ಟಕ್ ಅನ್ನುವ ಬೂಟಿನ ಸದ್ದು ಬಿಟ್ಟರೆ ಬೇರೆ ಎಲ್ಲ ಶಾಂತವಾಗಿದೆ. ಆದರೆ ಆಸ್ಪತ್ರೆಯಲ್ಲಿ ಮಲಗಿದವರ ಎದೆಯ ಬಡಿತ ಮತ್ತು ತಲೆಯಲ್ಲಿ ಸುತ್ತುವ ನಾನಾ ನಮೂನೆಯ ಬಿರುಗಾಳಿಯಂತಹ ವಿಚಾರಗಳಿಗೆ ಎಲ್ಲಿಯ ಪ್ರತಿಬಂಧ? ಈ ಶಾಂತಿಯನ್ನು ರಣಶಾಂತಿ ಮತ್ತು ಮೌನವನ್ನು ಸ್ಮಶಾನ ಮೌನವೆನ್ನಬಹುದು.  ಶಕುಂತಲಾ ಆಸ್ಪತ್ರೆಯ ಮೊದಲ ಮಹಡಿಯ ಸೆಮಿ ಸ್ಪೆಷಲ್ ರೂಮಿನಲ್ಲಿ ಕೋವಿಡ್ ಪೇಷಂಟ್ ರಂಗಣ್ಣ ತನ್ನ ಕಾಟ ಮೇಲೆ ಮಲಗಿ ವಿಚಾರ ಮಂಥನದಲ್ಲಿ ಮುಳುಗಿದ್ದಾನೆ. ಇಲ್ಲಿಗೆ ಬಂದು ಸುಮಾರು ಒಂದು ವಾರ ಆಗಿರಬಹುದು. ದಿನದ ಲೆಕ್ಕ ಯಾರಿಗಿದೆ? ಜೀವಕ್ಕೆ ಲೆಕ್ಕವಿಲ್ಲದಾಗ?…. ರೂಮಿನ ಅರ್ಧಭಾಗ ವ್ಯಾಪಿಸಿಕೊಂಡ ಕಾಟ್ ಮೇಲೆ ಮಲಗಿ ಹೊರ ಜಗತ್ತಿನ ಸಂಪರ್ಕವೇ ಇಲ್ಲವಾಗಿದೆ. ತಲೆಮೇಲೆ  ತಿರುಗುತ್ತಿರುವ ಫ್ಯಾನ್ ಸಪ್ಪಳ ಮಾಡುತ್ತ ತನ್ನ ಸೇವೆಯನ್ನು ಪ್ರಚಾರ ಮಾಡುತ್ತಿದೆ……. ಮುಖದ ಮೇಲೆ ಫಿಕ್ಸ್ ಮಾಡಿದ ವೆಂಟಿಲೇಟರ್ ನಿಶಬ್ದ ಕಾರ್ಯತತ್ಪರ…….. ಪಕ್ಕದಲ್ಲಿ ನಿಲ್ಲಿಸಿದ ಕಬ್ಬಿಣದ ಸ್ಟ್ಯಾಂಡಗೆ ಬಾಟ್ಲಿ ಜೋಡಿಸಿ ಅದರಿಂದ ಹೊರಟ ಇನ್ನೊಂದು ತುದಿ ರಂಗಣ್ಣನ ಎಡಗೈಯಲ್ಲಿ ಸೂಜಿಯ ಮುಖಾಂತರ ಹೊಕ್ಕಿದೆ……. ಅಲ್ಲಿಂದ ಬರುತ್ತಿರುವ ಔಷಧ, ವೆಂಟಿಲೇಟರ್ ನಿಂದ ಪೂರೈಕೆಯಾಗುತ್ತಿರುವ ಪ್ರಾಣವಾಯು ತನ್ನನ್ನು ಜೀವದಿಂದ ಇಟ್ಟಿವೆ ಎನ್ನುವುದು ಅವನಿಗೆ ಗೊತ್ತು. ಇಲ್ಲಿಗೆ ಬರುವ ಮೊದಲು ಒಂದು ವಾರ ಧಾರವಾಡದ ಇಳಕಲ್ ಆಸ್ಪತ್ರೆಯಲ್ಲಿ ಇದ್ದವ, ಅಲ್ಲಿ ಆಕ್ಸಿಜನ್ ಸ್ಟಾಕ್ ಇಲ್ಲ ಅಂತ  ಈ ದವಾಖಾನೆಗೆ ಬರಬೇಕಾಯಿತು. ಉಳಿವಿನ ಬಗ್ಗೆ ರಂಗಣ್ಣನಿಗೆ ಯಾವಾಗ ಭರವಸೆ ಇಲ್ಲದಾಯಿತೊ ಆ ಕ್ಷಣದಿಂದ ಅವನ ಮನಸ್ಸಿನಲ್ಲಿ ವಿಚಾರಗಳ ಯುದ್ಧ ನಡೆದಿದೆ. “ಅಲ್ಲಾ! ನನಗೆ ಯಾಕೆ ಈ ರೋಗ ಬಂತು? ಇಷ್ಟು ವರ್ಷ ಡಯಾಬಿಟಸ್ ಅನುಭವಿಸಿದ್ದು ಬೇಕಾದಷ್ಟು ಆಗಿರುವಾಗ! ನಾನೆಷ್ಟು ಕಾಳಜಿ ತಗೆದುಕೊಂಡಿದ್ದೆ, ಮದ್ದಣ್ಣ ತೀರಿಹೋದಾಗ! ದೂರದಿಂದ ನೋಡಿದ್ದು ಬಿಟ್ಟರೆ ಸಂಪರ್ಕ ಎಲ್ಲಿ ಬಂದಿತ್ತು? ಸ್ಮಶಾನಕ್ಕೆ ಹೋಗಿರಲಿಲ್ಲ. ಅವನು ಸತ್ತದ್ದು ಕೊವಿಡ್ ನಿಂದ ಅಂತ ಗೊತ್ತಾದ ಕೂಡಲೇ ಎಲ್ಲರೂ ಅಲ್ಲಲ್ಲೇ ಸ್ಟ್ಯಾಚು ತರ ಆದರಲ್ಲ! ಸ್ವಂತ ಅತ್ತೆಯ ಮಗ, ಒಬ್ಬಂಟಿ ಬೇರೆ… ಇಂತಹ ಸಮಯದೊಳಗೆ ನಾನಿದ್ದು ಏನು ಉಪಯೋಗ ಆಯ್ತು! ನನ್ನ ಹಂಗ ರಾಘು ಮತ್ತು ಪರಿಮಳರಿಗೆ ಈ ರೋಗ ಅಮರಿಕೊಂಡಿತ್ತಲ್ಲಾ!  ರಾಘುನಿಂದ ನನಗೆ ಬಂದಿರಬಹುದು …..”. ಹೀಗೆ ಸಾಗಿತ್ತು ವಿಚಾರಧಾರೆ. ಯಾರನ್ನೂ ಭೆಟ್ಟಿಯಾಗುವ ಹಂಗಿಲ್ಲ,  ಮನಸ್ಸಿನ ಮಾತನ್ನು ಹೇಳಿ ಹಗುರ ಮಾಡಿಕೊಳ್ಳುವ ಹಂಗಿಲ್ಲಾ ಅನ್ನುವ ಬೇಸರ!  ರಂಗಣ್ಣನ ತಮ್ಮ ರಾಘು ಹುಬ್ಬಳ್ಳಿಯೊಳಗ ತಮ್ಮ ಸೋದರ ಅತ್ತೆಯ ಮಗ ಮದ್ದಣ್ಣನ ಒಟ್ಟಿಗೆ ಇರುತ್ತಿದ್ದ. ಇಬ್ಬರೂ ಬ್ರಹ್ಮಚಾರಿಗಳು. ಒಬ್ಬರಿಗೊಬ್ಬರು ಆಸರೆಯಾಗಿದ್ದರು. ಯಾವಾಗ ಮದ್ದಣ್ಣ ಸಾವಿಗೆ ಈಡಾದನೋ, ಒಮ್ಮೆಲೆ ಎಲ್ಲರ ಮನಸ್ಸಿನಲ್ಲಿ ನಡುಕ ಶುರುವಾಗಿತ್ತು. ಮದ್ದಣ್ಣನಿಗೆ ಅದು ಹೇಗೆ ಬಂದಿತು? ಯಾರಿಗೂ ಗೊತ್ತಿಲ್ಲ….. ಆಸ್ಪತ್ರೆ  ತಲುಪುವದರೊಳಗೆ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನೊಟ್ಟಿಗೆ ಇರುತ್ತಿದ್ದ ರಾಘುನಿಗೆ  ತಾಗಿರಬೇಕು, ಗೊತ್ತಾಗಿರಲಿಲ್ಲ.  ಅವನಿಗೆ ಕ್ರಿಯಾ ಕರ್ಮ ಮಾಡಿ ಅಣ್ಣ ರಂಗಣ್ಣನೊಟ್ಟಿಗೆ ಕೆಲವು ದಿನ ಇರುವುದರಲ್ಲಿಯೇ ರಾಘುನಿಗೆ ಕರುನಾ ಪಾಸಿಟಿವ್ ಅಂತ ಗೊತ್ತಾಯ್ತು. ಅದರೊಟ್ಟಿಗೆ ಇಲ್ಲಿರುವ ರಂಗಣ್ಣನಿಗೆ ಕೂಡ. ಮೂವರು ಆಸ್ಪತ್ರೆಗೆ ದಾಖಲಾದರು. ಒಂದು ವಾರದಲ್ಲಿ ಅವರಿಬ್ಬರು ಆರಾಮಾಗಿ ಮನೆಗೆ ಹೋದರು. ರಂಗಣ್ಣನಿಗೆ ರೋಗ ಉಲ್ಬಣಿಸ ತೊಡಗಿತು. ಧಾರವಾಡದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದ ಕಾರಣ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗೆ ಸೇರಿಸಬೇಕಾಗಿ ಬಂತು. ಕೆಲವೊಮ್ಮೆ ಆಕ್ಸಿಜನ್ ಸಪ್ಲೈ ತೆಗೆಯುವುದು ಮತ್ತೆ ಉಸಿರಾಟದ ತೊಂದರೆ ಕಾಣಿಸಿದ ಕೂಡಲೇ ಮತ್ತೆ ಹಚ್ಚುವುದು ನಡೆದೇ ಇತ್ತು. ದಿನಕಳೆದಂತೆ ರೋಗ ಉಲ್ಬಣಿಸಿತ್ತು. ತನ್ನ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರಗಳನ್ನು ಯಾರಿಗೆ ಹೇಳಿಕೊಳ್ಳಬೇಕು?  ಜೀವನಚಕ್ರ ಕಣ್ಣುಮುಂದೆ ಬರತೊಡಗಿತು. ನಾ ಎಷ್ಟು ಸಂತೋಷದಿಂದ ಇದ್ದೆ ಸಣ್ಣವನಿರುವಾಗ ದೊಡ್ಡ ಮನೆತನ, ಕೂಡುಕುಟುಂಬ ಯಾವುದಕ್ಕೂ ಕೊರತೆ ಇಲ್ಲದ ಜೀವನ. ಮನಿಯೊಳಗ ಅಪ್ಪ-ಅವ್ವ ಅಕ್ಕ-ತಮ್ಮ ಮತ್ತೆ ನಾಲ್ಕು ಜನ ತಂಗಿಯರು. ಸಹಜೀವನ, ಸಹಕಾರ, ಹಂಚಿಕೊಳ್ಳುವುದು ಸಾಮಾನ್ಯವಿತ್ತು. ಯಾರ್ದನ್ನು ಯಾರೋ ಉಪಯೋಗಿಸಿದರೂ ಬೇಸರ ಇಲ್ಲ, ಪ್ರತಿಬಂಧ ಇಲ್ಲ ಅದರೊಳಗ ನನಗ ಅಕ್ಕ ತಮ್ಮ ತಂಗಿಯರು ಅಂದರ ಪ್ರಾಣ. ಅವರಿಗೆ ಸಿಟ್ಟು ಬರದಂಗ ಬ್ಯಾಸರವಾಗದಂಗ ಇರೋದು ನನಗೆ ಸೇರ್ತಿತ್ತು. ಹೀಗಾಗಿ ‘ಭೋಳೇಶಂಕರ’ ಅಂತ ಬಿರುದು ಸಿಕ್ಕಿತ್ತು. ಆರು ವರ್ಷ ಕಳೆದ ಮೇಲೆ ಸಾಲಿಗೆ ಸೇರಿಸಿದರು. ಹಳ್ಳಿಯೊಳಗಿನ ಸಾಲಿ, ಮತ್ತ ಪರಿಚಯದ ಮಾಸ್ತರರು. ಕೆಲವರು ಗೆಳೆಯರು ಹೆಚ್ಚಾದರೂ ಹೆಚ್ಚಿನ ಬದಲಾವಣೆ ಅನ್ನಿಸಲಿಲ್ಲ. ಆದರೆ ಸರಿಯಾದ ಸಮಯಕ್ಕ ಸಾಲಿಗೆ ಹೋಗಿ ಬರುವುದು ಸ್ವಲ್ಪ ಕಠಿಣ ಆಗ್ತಿತ್ತು. ಯಾಕಂದರೆ ಆಟ ಆಡಲಿಕ್ಕೆ ವೇಳೆ ಹೆಚ್ಚು ಸಿಗುತ್ತಿರಲಿಲ್ಲ. ಒಂದು ಮಾತ್ರ ಖುಷಿ ಕೊಟ್ಟಿದ್ದು ನನ್ನ ಗೆಳೆಯರೆಲ್ಲಾ ಅದs ಸಾಲಿವಳಗ ಇದ್ದರು. ಕೆಲವರು ಕ್ಲಾಸಿನೊಳಗೆ ಮತ್ತ  ಕೆಲವರು ಸಾಲಿವಳಗ. ಹಿಂಗಾಗಿ ನಮ್ಮ ಆಟ ಮಸ್ತಿ ಅಲ್ಲಿನೂ ಸುರುವಾಯ್ತು. ಸಾಲಿ ಮುಗಿಸಿ ಮನೆಗೆ ಬಂದ ಕೂಡಲೇ ಅಭ್ಯಾಸಕ್ಕಿಂತ ಊಟ ತಿಂಡಿಯ ಕಡೆಗೇ ಲಕ್ಷ್ಯ. ಮಾಸ್ತರೆಲ್ಲ ಕಾಕಾ, ಮಾಮಾ, ಚಿಕ್ಕಪ್ಪ ಅಂತ ಸೋದರಸಂಬಂಧಿ ಇದ್ದದ್ದಕ್ಕ ಹೆದರಿಕೆ ಇರಲಿಲ್ಲ. ಶನಿವಾರ ಅರ್ಧದಿನದ ಸಾಲಿ. ಉಳಿದರ್ಧ ದಿನ ಮುಂದಿನ ವಾರಕ್ಕೆ ಶಾಲೆಗೆ ಬೇಕಾಗುವ ಅರಿವೆ -ಬಟ್ಟೆ ನೋಡಿಕೊಳ್ಳುವುದು ಇಂತಹ ಕೆಲಸ.  ರವಿವಾರ ಮಾತ್ರ ಹಿಡಿಯುವವರು ಇದ್ದಿಲ್ಲ. ಮುಂಜಾನೆ ನದಿಗೆ ಹೋಗಿ ಸ್ನಾನ ಮಾಡಿ, ಸಾಕು ಅನ್ನಿಸುವಷ್ಟು ಈಸಿ, ಬಿಸಿಲು ಏರಿದ ಕೂಡಲೇ ಕಲ್ಮೇಶ್ವರ ಗುಡಿಗೆ ಹೋಗುವುದು. ಅಲ್ಲೆ ಸೀನ, ವೆಂಕಟ, ನಾನಿ ಯಾರಾದರೊಬ್ಬರು ಅವಲಕ್ಕಿ ಹಣ್ಣು ತಂದಿರುತ್ತಿದ್ದರು ಅದನ್ನು ತಿಂದು ಮತ್ತೆ ಆಟ. ಮಾಸ್ತರರ ಅಣಕ ಮಾಡಿ ತೋರಿಸುವುದು, ಹುಡುಗಿಯರ ಬಗ್ಗೆ ಕಾಮೆಂಟ್ ಮಾಡುವುದು ನಡೀತಿತ್ತು. ನಮಗೆಲ್ಲ ಸಿನಿಮಾ ಮತ್ತ ನಾಟಕದ  ನಾಟಕದ ಹುಚ್ಚು ಭಾಳಿತ್ತು. ಆವಾಗ ಬ್ಯಾರೆ ಏನೂ ಮನರಂಜನೆ ಇರುತ್ತಿರಲಿಲ್ಲ. ನೋಡಿ ಬಂದ ಸಿನೆಮಾದ್ದು ಕೆಲವು ಸೀನು ನಾವs ಅಭಿನಯ ಮಾಡುತ್ತಿದ್ದೆವು. ಹೆಚ್ಚಾಗಿ ಭಕ್ತ ಕನಕದಾಸ, ಸತ್ಯಹರಿಶ್ಚಂದ್ರ, ಕೃಷ್ಣದೇವರಾಯ, ಬಬ್ರುವಾಹನ ಇಂತಹ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾದ್ದು. ನನಗೆ ಯಾವಾಗಲೂ ಕನಕದಾಸನ ಪಾತ್ರ. ಕನಕನ್ನ ಕಂಭಕ್ಕ ಕಟ್ಟಿ ಹೊಡೆಯುವುದು, ಬಾಳೆಹಣ್ಣು ತಿನ್ನಲಿಕ್ಕೆ ಕೊಡುವುದು ಬಹಳ ಮಜಾ ಬರುತ್ತಿತ್ತು. ಸತ್ಯಹರಿಶ್ಚಂದ್ರನ ಸಿನಿಮಾದ ವೀರಬಾಹುವಿನ ಪಾತ್ರ ಮಾಡಲಿಕ್ಕೆ ಪ್ರಯತ್ನ ಮಾಡಿದ್ದೇ ಮಾಡಿದ್ದು. ಸಂಜೆಯಾದರೂ ಊಟದ ಖಬರು ಇಲ್ಲದ ಆಟ ನಡೀತಿತ್ತು. ಮನೆಯವರೆಗೂ ಗೊತ್ತಿತ್ತು ,ಹಸಿವಾದರೆ ಮನೆಗೆ ಬರ್ತಾರೆ ಅಂತ . ಹಬ್ಬ-ಹುಣ್ಣಿಮೆ ಬಂದರೆ ನಮ್ಮೂರ ಒಳಗೆ ಗುಡಿಗೆ ಹೋಗುವ ಜನ ಜಾಸ್ತಿ. ನಮ್ಮ ನಾನಿ ಅಪ್ಪ ಗುಡಿ ಪೂಜಾರಿ. ಒಮ್ಮೊಮ್ಮೆ ದೇವರ ಪೂಜೆ ಮಾಡುವ ಪ್ರಸಂಗ ನಾನಿಗೆ ಬರ್ತಿತ್ತು. ಅವತ್ತಿನ ದಕ್ಷಿಣ ರೊಕ್ಕ ನಮ್ಮ ಮುಂದಿನ ಸಿನಿಮಾದ ಖರ್ಚಿಗೆ ಅಂತ ಇಡುತ್ತಿದ್ದ. ಶ್ರೀಮಂತಿಕೆ ಬಡತನ ವ್ಯತ್ಯಾಸ ಆಗ್ತಿದ್ದಿಲ್ಲಾ. ಬಾಲ್ಯದ ಮುಗ್ಧತೆ ಎಷ್ಟು ಚೆಂದ ಇತ್ತು?  ಈಗ ಅರಿವಿಗೆ ಬರ್ತದ. ಯಾವುದೇ ರೀತಿಯ ಏರು ಇಳಿವು ಇಲ್ಲದ ಜೀವನ ಸಾಗಿತ್ತು.  ಸಾಲಿಯೊಳಗ ಮುಂದಿನ ಕ್ಲಾಸಿಗೆ ಹೋಗುವುದು ಗ್ಯಾರಂಟಿ ಇರುತ್ತಿತ್ತಲ್ಲ. ಅಭ್ಯಾಸದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಏನು ಓದುತ್ತೇನೆ, ಎಷ್ಟು ಮಾರ್ಕ್ಸ್ ತೆಗಿತೀನಿ ಅಂತ ಅಪ್ಪ ಕೂಡ ಹೆಚ್ಚು ಜಿಕೇರಿ ಮಾಡ್ತಿದ್ದಿಲ್ಲ. ಪಾಠ ತಿಳಿಲಿಲ್ಲ ಅಂದ್ರೆ ಗೆಳೆಯರು ಇದ್ದರಲ್ಲ, ನಾನೀ, ಸೀನಾ ಹೇಳಿಕೊಡುತ್ತಿದ್ದರು. ಹಂಗೂ ಹಿಂಗೂ ಮಾಡಿ ಎಸ್ಎಸ್ಸಿ ಪಾಸಾದೆ. ಕಾಲೇಜಿಗೆ ಹೋಗಾಕ ಹಸಿರು ನಿಶಾನಿ ಸಿಕ್ಕಂಗಾಯ್ತು. ಅದs ಊರೊಳಗಿನ ಕಾಲೇಜಿಗೆ ಆರ್ಟ್ಸ್ ಗೆ ಎಡ್ಮಿಶನ್ ಮಾಡಿಸಿದೆ. ನಾನಿ ಒಬ್ಬಾವ ಮಾತ್ರ ಸೈನ್ಸಗೆ ಸೇರಿದ. ಗಣಿತದ ತಲಿಬಿಸಿ, ಪ್ರ್ಯಾಕ್ಟಿಕಲ್ಸ್ ದ ಉಪದ್ರ ಬ್ಯಾಡಾ ಅನಿಸಿತ್ತು ನನಗ. ಈಗ ಮೊದಲಿನ ಹುಡುಗುತನ ಸ್ವಲ್ಪ ಕಡಿಮೆಯಾಗಿತ್ತು. ಮನಿ ಕೆಲಸ ಜಾಸ್ತಿ ಆಗಿತ್ತು. ಮನಿಯೊಳಗಿನ ಹಿಂಡ ಜನರೊಳಗ ಅದೇನು ಭಾಳ ಅನಸ್ತಿದ್ದಿಲ್ಲ. ಮನಿಯೊಳಗ ಮದುವಿ, ಮುಂಜವಿ ಇಂಥಾದ್ದೆಲ್ಲಾ ಕಾರ್ಯಕ್ರಮಕ್ಕ ಇದ್ದರಲ್ಲ ಆಜೂ- ಬಾಜೂ ನಮ್ಮವರು……ಗೊತ್ತಾಗದ ನಡದು ಹೋಗ್ತಿತ್ತು. ನಮ್ಮಜ್ಜ ತನ್ನ ನಾಲ್ಕು ಗಂಡ ಮಕ್ಕಳೊಳಗ ಇಬ್ಬರು ಮಕ್ಕಳನ್ನು ದತ್ತಕ ಕೊಟ್ಟಿದ್ದು, ಅವರಿಬ್ಬರ ಕುಟುಂಬ ಮತ್ತು ಇನ್ನುಳಿದ ಇಬ್ಬರದು ವರ್ಷದಿಂದ ವರ್ಷಕ್ಕೆ ಬೆಳೆದು ಅರ್ಧ ಊರಲ್ಲಿ ನಮ್ಮ ಸಂಬಂಧಿಕರು ತುಂಬಿದ್ದರು. ನೋಡುತ್ತಾ ನೋಡುತ್ತಾ ನಾಲ್ಕು ವರ್ಷ ಮುಗಿದು, ನನ್ನ ಗ್ರಾಜುಯೇಷನ್ ಆಗಿಹೋಯಿತು. ಈ ನಾಲ್ಕು ವರ್ಷದೊಳಗ ಎರಡು ಮುಂಜವಿ, ಇಬ್ಬರ ಅಕ್ಕಂದಿರ ಮದುವೆ ನಡೆದು ಹೋಯಿತು. ಅಪ್ಪನ ಮಾಸ್ತರಿಕೆ ಪಗಾರ ದೊಡ್ಡ ಸಂಸಾರಕ್ಕ ಕಡಿಮೆ ಬೀಳುತ್ತಿತ್ತು ಮದುವೆಗೆ, ಮುಂಜುವಿಗೆ ಹೊಲದ ಒಂದೊಂದು ತುಕಡಿ ಹೊಲ ಗೇಣಿ ಮಾಡುವ ರೈತನಿಗೆ ಮಾರುವುದು ನಡೆದಿತ್ತು. ಅಕ್ಕ ಮತ್ತು ತಂಗಿಯಂದಿರ ಗಂಡನ ಮನಿ ಅಂದ್ರ ಸಂಬಂಧಿಕರs. ಅಕ್ಕನ ಗಂಡ ನನ್ನ ಖಾಸ ಸೋದರಮಾವ. ಹಂಗ ನೋಡಿದರೆ ಹೊಸಬರು ಪರಿವಾರದೊಳಗೆ ಸೇರಲಿಲ್ಲ, ಏನೂ ಬದಲಾವಣೆ ಆದಂಗ ಅನಿಸಲಿಲ್ಲ. ಜೀವನ ಸರಳವಾಗಿ ಹರಿಯುವ ನದಿಯಾಗಿತ್ತು.  ನೌಕರಿ ಬ್ಯಾಟಿಗೆ ಶುರುಮಾಡಿದೆ. ನನ್ನ ಸಾದಾ ಬಿ ಎ ಗೆ ಕೆಲಸ ಸಿಗೋದು ಕಠಿಣ ಇತ್ತು. ಪೂರ್ವಜರು ಮಾಡಿದ ಪೌರೋಹಿತ್ಯ ಮತ್ತು ಮಾಸ್ತರ್ಕಿಗೆ ನನಗೆ ಯೋಗ್ಯತಾ ಇರಲಿಲ್ಲ. ನನ್ನದು ಅಂತ ಜೀವನ ಕಟ್ಟಿಕೊಳ್ಳಾಕ ಒಂದು ಕೆಲಸ ಅವಶ್ಯವಿತ್ತು. ಖರೆ ಹೇಳಬೇಕಂದ್ರೆ, ಬೇರೆಯಾದ ಅಸ್ತಿತ್ವ ನಮಗ್ಯಾರಿಗೂ ಇರಲಿಲ್ಲ. ಆದರೂ ಪಾಯಿಪ್ಸ್ ಮಾರುವ ಒಂದು ಪ್ರೈವೇಟ್ ಕಂಪನಿಯೊಳಗ ಕ್ಲರ್ಕ್ ಕೆಲಸ ಸಿಕ್ಕಿತು. ಆದರೆ ಊರು ಬಿಟ್ಟು ಹತ್ತಿರದ ಊರಿಗೆ ಹೋಗಬೇಕಾಯಿತು. ಅಲ್ಲಿ ನಾ ಇರಬೇಕೆಂದರೆ ಮನಿ ಮಾಡಬೇಕು ಅಂತ ಹೇಳಿ ನಮ್ಮವ್ವ ಮತ್ತು ನಮ್ಮ ಅಕ್ಕ ಕೂಡಿ ನನ್ನ ಮದುವೆ ಮಾಡಬೇಕಂತ ಕನ್ಯಾ ಹುಡುಕಲಿಕ್ಕೆ ಹತ್ತಿದರು. ದೂರದ ಸಂಬಂಧಿಗಳ ಬಡವರ ಹುಡಿಗಿ ರಾಧಾ ನನ್ನ ಅರ್ಧಾಂಗಿಯಾಗಿ ಮನಿ ತುಂಬಿದಳು. ಸೌಮ್ಯ ಸ್ವಭಾವದ ರಾಧಾ ಎಲ್ಲ ರೀತಿಯಿಂದ ಹೊಂದಿಕೆ ಆಗಿದ್ದಳು. ಆದರ ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳ ಭಾಗ್ಯ ಸಿಗಲಿಲ್ಲ. ಅವ್ವ ರಾಧಾಳನ್ನ ಡಾಕ್ಟರ್ ಕಡೆಗೆ ಕರ್ಕೊಂಡು ಹೋದಳು. ಅವಾಗ ಬೇರೆ ಏನೋ ವಿಷಯ ಹೊರಗೆ ಬಂತು. ಏನಂದ್ರೆ ರಾಧಾಗ ಡಯಾಬಿಟಿಸ್ ಇತ್ತು. ಅದು ಕೂಡ ಹೆಚ್ಚಿನ ಪ್ರಮಾಣದ ಸಕ್ಕರೆ ರೋಗ. ಸರಿ ಅದಕ್ಕೆ ಟ್ರೀಟ್ಮೆಂಟ್ ಸುರುವಾಯಿತು. ಮಕ್ಕಳ ವಿಷಯ ಮರೆತು ಹೋಯಿತು. ಮುಂದೆ ಕೆಲವರ್ಷದೊಳಗ ನನಗೂ ಡಯಾಬಿಟಸ್ ಶುರುವಾಗಿತ್ತು. ಆದರೂ ನಾ ತಲಿಬಿಸಿ ಮಾಡಿಕೊಳ್ಳಲಿಕ್ಕೆ ಹೋಗಲಿಲ್ಲ. ನಮ್ಮ ಸಂಬಂಧಿಕರು ಬಹುತೇಕ ಜನರಿಗೆ ಇದು ಇತ್ತು. ಬಹುಶಃ ಆನುವಂಶಿಕತೆ ಇರಬಹುದು ಅನಿಸಿ ನಾನೂ ಕೂಡ ಔಷಧಿ ತೆಗೆದುಕೊಳ್ಳಹತ್ತಿದೆ. ಕೂಡು ಕುಟುಂಬದೊಳಗೆ ಇದ್ದುಕೊಂಡು ಸದಾಕಾಲ ಸಾವು – ನೋವು, ರೋಗ

Read Post »

You cannot copy content of this page

Scroll to Top