ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕವಿತೆ ಜಗ… ಸೋಜಿಗ ವಿದ್ಯಾಶ್ರೀ ಅಡೂರ್ ಯಾರು ಇಲ್ಲ ಎಂಬ ಭಾವಬಿಟ್ಟುಬಿಡಿರಿ ಎಲ್ಲ ಬೇಗದೇವನೊಬ್ಬ ಸಲಹುತಿಹನುಹೆಜ್ಜೆ ಹೆಜ್ಜೆಗೇ ಗೋಡೆ ಸಂಧಿಲಿರುವ ಜೇಡಮರಳಿ ಕಟ್ಟಿ ತನ್ನ ಗೂಡಗೊಡವೆಯಿರದೆ ಬದುಕುತಿಹುದುಹೊಟ್ಟೆಪಾಡಿಗೇ ಮೊಟ್ಟೆಯಿಟ್ಟು ಮಾಯವಾಗೋಅಟ್ಟಿಉಣುವ ಜೀವಗಳಿಗೆಹುಟ್ಟುಸಾವು ಮೂಲವರುಹೋಶಕ್ತಿಯಾವುದು ಬಾಯಿಬರದೆ ಇರುವ ಮೂಕಹಸುವು ಕೂಡ ತನ್ನ ಪ್ರಸವಹಲ್ಲುಕಚ್ಚಿ ಸಹಿಸಿ ಕರುಳಬಳ್ಳಿ ಹರಿವುದೂ ಎಷ್ಟು ಕಡಿದರೂನು ಚಿಗುರಿಮತ್ತೆ ಮತ್ತೆ ಟಿಸಿಲು ಒಡೆದುಬದುಕೋ ಭರವಸೆಯ ಗಿಡಕೆಯಾರು ಕೊಟ್ಟರೂ ಇಟ್ಟಜಾಗದಲ್ಲಿ ತನ್ನಬೇರನಿಳಿಸಿ ಗಟ್ಟಿಗೊಳುವಪುಟ್ಟಬೀಜಕಿಹರೆ ಸಾಟಿಯಾರು ದಿಟ್ಟರೂ ಅಕ್ಕಿಬೆಂದು ಅನ್ನವಾಗಿನಿನ್ನೆದಿಂದು ಹಳಸಿಹೋಗಿಭವದಬದುಕು ಇಷ್ಟೇ ಎಂದುಸಾರುತಿರುವುದು ಅರಿವ ಸೊಡರು ಹಚ್ಚಿ ಒಳಗೆಹೊರಗೆ ಮಿಣುಕು ಬೆಳಕು ಬೀರೆಸುತ್ತ ಕವಿದ ಕತ್ತಲೆಲ್ಲಇಂಗಿ ಪೋಪುದು. ************

Read Post »

ಕಾವ್ಯಯಾನ

ಕವಿತೆ ನತಭಾವ ಶಾಲಿನಿ ಆರ್ ಒಡಲಾಳದಲಿ ಒಡಮೂಡಿದತಪ್ತತೆಯ ಪ್ರಶ್ನೆಗಳ ಸುರಿಮಳೆ/ಉತ್ತರ ಹುಡುಕುವಿಕೆ ಬೈಗು ಜಾವದ ಸರಹದ್ದಿನ ಅಂಚಿನಲಿ ಈ ಇಳೆ// ಕಳಚುವ ಹುನ್ನಾರು ಒದೊಂದೆ ಭಾವಗಳು ಬೆತ್ತಲಾಗಿ ಬಯಲಿಗೆ/ಸೊಬಗಿನ ಪಾತರಗಿತ್ತಿ ನೋವಿನ   ಹುಳುವಾಗಿ  ಮತ್ತೆ ಗೂಡಿಗೆ// ಉಕ್ಕಿದ ಕಡಲಾಳದಿ ನೂರು ಭಾವಗಳಸಮಾಧಿ ಪಳೆಯುಳಿಕೆಯಂತೆ/ಬಿಚ್ಚಿಡುವ ತವಕದಲಿ ಕಾಲ ಸರಿದಿದೆ ದಡಕಪ್ಪಳಿಸದ ಅಲೆಯಂತೆ// ಮಂಜಿನ ಮುಸುಕಿನ ಚಳಿಯ ಕುರ್ಳಿಗಾಳಿ ಸುಳಿದು ಬಳಿಗೆ/ತುಂಬಿದ ಎನ್ನೆದೆಗೆ ಮೋಹದ ಮುತ್ತನೊತ್ತಿದೆ ಒಲವ ಸುಳಿಗೆ// ಜನುಮವಿದು ಬರಿದಾಗಬೇಕುಮತ್ತೆ ಮತ್ತೆ ಚಿಗುರ ಹಡೆಯಲು/ಒಳಬೇಗುದಿಗಳ ಬಿಕ್ಕು ನಿಲ್ಲಬೇಕುಮತ್ತೆ ಮತ್ತೆ ನಿನ್ನ ಪಡೆಯಲು// ಸೂತ್ರವಿದು ಬಾಳ ಭವಣೆಗೆ ನೀತಿ ಮಂತ್ರದ ಪಾಠ/ಬಿದ್ದ ಎಲೆಯಲು ಸಾವಿರಾರು ಕನಸಿದೆಮತ್ತೆ ಅನುಭವದ ರಸದೂಟ// ಶರದೃತುವಿನ ಮಾಧುರ್ಯವಿದೆ ನತಭಾವ ಆದಿಯಲಿ/ಒದೊಂದೆ ಎಲೆಗಳು ಕಳಚಿ ಬೀಳುವವಿಸ್ಮಯದ ಬಾಳ ಪಯಣದಲಿ// *************************

Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ ಗಾಯದ ಹೂವುಗಳು  “ಗಾಯದ ಹೂವುಗಳು ”  2015 ರ  ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ” ಪಡೆದ ಕೊಡಗಿನ ಯುವಕವಿ  ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ.  ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್  ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ.                                           ಕವಿತೆಯೆಂದರೇನೆಂದೇ                                                               ತಿಳಿಯದ,                           ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ                                                    ಅಪ್ಪ -ಅಮ್ಮನಿಗೆ.                 ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ.  “ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ “ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ.   ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು.  ಈ ಮೇಲಿನ 53 ಹೂವುಗಳಿರುವ ಹೂಗುಚ್ಛ “ಗಾಯದಹೂವುಗಳು”.ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ. ಕೇಳಿಸಿಕೊಳ್ಳಿ  ಒಂದು ಇರುವೆ ಸತ್ತಿದೆ  ನನ್ನ ಕಾಲ ಬುಡದಲ್ಲಿ        ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ.   ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು.  ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು  ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು  ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ      ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ.  ಕಡಲಿನ ಆಚೆ ಬದಿಯಲ್ಲಿ  ನಿನ್ನದೊಂದು ತೊಟ್ಟು ರಕ್ತ  ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ  ಚೆಲ್ಲಿ ಬಿಡೋಣ  ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ.  ಹಸಿದ ಜಿಗಣೆಯೇ  ಬಾ ಹೀರು ನನ್ನನ್ನು  ಸ್ವಲ್ಪದರಲ್ಲೇ ನೀನು  ದ್ರಾಕ್ಷಿಯಾಗಿ ಉದುರುತ್ತೀ    ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ. ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ.  ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವಿಸುತ್ತದೆ ನನಗೆ. ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ.  ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ” ಕಡಲ ಕರೆ”ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ.    ‘ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ’  ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ ************************************************** ಕಾವ್ಯ ಎಸ್.

Read Post »

ಕಾವ್ಯಯಾನ

ಕವಿತೆ ಧ್ಯಾನಿಸುವ ಹೃದಯ ಡಾ.ಸುಜಾತಾ.ಸಿ ದೂರ ಸರಿದು ಸತಾಯಿಸಬೇಡಾದಾರಿ ಉದ್ದಕ್ಕೂ ನಾಲ್ಕಹೆಜ್ಜೆ ಇಟ್ಟು ನೋಡು ಬೆಳದಿಂಗಳ ನಡಿಗೆಗೆ ಕಾರ್ಮೊಡ ಕಟ್ಟಬೇಡಾಹಾಲ್ದೆನೆ ಇರುಳ ಸರಿಸಿ ಸವಿದು ನೋಡು ಸುರಿದ ಮಳೆಯಲಿ ಕಣ್ಣ ಹನಿ ಹುಡುಕ ಬೇಡಾಕಣ್ಣಾವಲಿಯಲಿ ಅರಳಿದ ನಿಂತ ಮುಖ ನೋಡು ಗಾಯದ ಮೆಲೆ ಉಸಿರು ಹರಡಿಬಿಡು ಒಮ್ಮೆಎದೆಭಾರ ತಂಗಾಳಿಯಾಗಿ ಬಿಡದು ನೋಡು ಕಣ್ಣು ರೆಪ್ಪೆ ಹಾಗೇ ಕಾಪಿಟ್ಟುಕೊ ಅಲುಗಿಸಬೇಡಾಕಂಡ ಕನಸಿಗೆ ಘಾಸಿಯಾದಿತು ನೋಡು ಮನಸುಗಳ ಸೇತುವೆಯ ಏಣಿ ಏರಿ ಬಿಡು ಒಮ್ಮೆನಿನ್ಮನ್ನೇ ಧ್ಯಾನಿಸುತ ಕುಳಿತ ಹೃದಯ ಮತ್ತೆ ಸಿಕ್ಕರೆ ಸಿಗಬಹುದು ಒಮ್ಮೆ *************************

Read Post »

ಕಥಾಗುಚ್ಛ

ಕಥೆ ಋಣ ಎಂ. ಆರ್. ಅನಸೂಯ ಗಿರಿಜಮ್ಮ ತೋಟದಲ್ಲಿ ಮಾವಿನ ಫಸಲನ್ನು ನೋಡುತ್ತಾ “ಈ ಸತಿ ಮಾವಿನ ಫಸಲು ಚೆನ್ನಾಗಿ ಬಂದೈತೆ ಅಲ್ವೇನೋ ನಾಗ” “ಹೂನ್ರಮ್ಮ, ಈ ಸತಿ ಕಾಯಿ ಜಗ್ಗಿ ಹಿಡಿದೈತೆ. ಹಂಗೇನೆ ಹಲಸಿನ ಗಿಡಗಳು, ಹುಣಸೇಗಿಡ ಎಲ್ಲಾದ್ರೂಗನೂ ಚೆನ್ನಾಗಿ ಕಾಯಿ ಹಿಡಿದೈತೆ “ ತೋಟದ ಗೇಟ್ ಬಳಿ ಮೋಟರ್ ಬೈಕ್ ನ ಹಾರ್ನ್ ಸೌಂಡ್ ಕೇಳಿದ ಇಬ್ಬರೂ ಆ ಕಡೆ ನೋಡಿದರೆ ರಾಜಣ್ಣ ಕೈಯಲ್ಲಿ ಕಾಫಿ ಪ್ಲಾಸ್ಕ್ ಹಾಗೂ ಒಂದು ಸಣ್ಣ ಬ್ಯಾಗ್ ನ್ನು ಹಿಡಿದು ಬರುತ್ತಿದ್ದರು.  ” ಸಾವ್ಕಾರ್ ಕಾಫಿ ತರ್ತಾವ್ರೆ”  ಎನ್ನುತ್ತಾ ಇಬ್ಬರೂ ಅಲ್ಲೇ ಇದ್ದ ಬೇವಿನ ಮರದ ಕೆಳಗೆ ಬಂದ್ರು. ” ನಾನೇ ಮನೆಗೆ ಬರ್ತಿದ್ದೆ. ನೀವ್ಯಾಕೆ ಬಂದ್ರಿ” ಎನ್ನುತ್ತಾ ಗಿರಿಜಮ್ಮ ಮರದ ಕೆಳಗಿದ್ದ ಕಲ್ಲು ಬೆಂಚ್ ಮೇಲೆ ಕುಳಿತು ಕೊಡದ ನೀರನ್ನು ಬಗ್ಗಿಸಿ ಕೈ ತೊಳೆದುಕೊಂಡು ಕುಳಿತರು.  ಬ್ಯಾಗ್ನಲ್ಲಿದ್ದ ಕವರ್ ತೆಗೆಯುವುದನ್ನು ನೋಡಿದ ನಾಗ “ಉಮಕ್ಕ ಏನೋ ತಿಂಡಿ ಕಳಿಸೈತೆ” ಗಿರಿಜಮ್ಮ ಕಾಫಿಯನ್ನು ಕಾಫಿಯನ್ನು ಮೂರು ಪ್ಲಾಸ್ಟಿಕ್ ಲೋಟಗಳಿಗೆ ಸಮನಾಗಿ ಬಗ್ಗಿಸಿ,ನಾಗನಿಗೆ ಕಾಫಿ ಹಾಗೂ  ಕಡ್ಲೆಬೇಳೆ ವಡೆ ಕೊಟ್ಟು ಗಂಡ ಹೆಂಡತಿ ಇಬ್ಬರೂ ಕಾಫಿ ಕುಡಿಯುತ್ತಾ ವಡೆ ತಿನ್ನುತ್ತಿದ್ದರು. ನಾಗ  ಕಾಫಿ ಕುಡಿದು ವಡೆ ತಿನ್ನುತ್ತ ತನ್ನ ಕೆಲಸ ನೋಡಲು ಹೋದ. ಗಿರಿಜಮ್ಮ ” ರಾತ್ರಿ ಅಪ್ಪಯ್ಯನಿಗೆ ಫೋನ್ ಮಾಡಿ ಮುಂದಿನ ವಾರ  ಬರ್ತೀನಿ ಅಂತ ಹೇಳ್ಬೇಕು. ಅಷ್ಟೊತ್ತಿಗೆ ಮಾವಿನ ಕಾಯಿ ಹಣ್ಣಾಗ್ತವೆ. ಹಣ್ಣು ಕೊಟ್ಟು ಮಾತುಕತೆನೆಲ್ಲ ಮುಗಿಸ್ಕಂಡೆ  ಬರ್ತಿನಿ. ಇನ್ನು ಮುಂದಕ್ಕ ಹಾಕೋದು ಬೇಡ” ಎಂದರು. “ಹಂಗೆ ಮಾಡು  ಎನ್ನುತ್ತಾ ಈ ಸರ್ತಿ ತೆಂಗಿನ ಫಸಲೆಲ್ಲಾ  ಚೆನ್ನಾಗೈತೆ ” ಎಂದರು ರಾಜಣ್ಣ ತೆಂಗಿನ ಮರಗಳನ್ನು ನೋಡುತ್ತ.”ಅಮ್ಮಾವ್ರೆ, ಇವೆಲ್ಲ ಈ  ಹೊಸ ತೋಟದಗೆ ಬಿದ್ದಿರೋ ಕಾಯಿ. ನೀವು ಸಾವ್ಕಾರ ಜೊತೆಗೆ ಮನೆಗ್ ಹೋಗ್ರಿ. ನಾನು  ಹಳೇ ತೋಟದಗೆ  ಬಿದ್ದಿರೋ ಕಾಯ್ಗಳ್ನ ಆರ್ಸ್ ಕಂಡು ಮನೆ ಹತ್ರ ಬರ್ತಿನಿ” ನಾಗ ಕೂಗಿ ಹೇಳಿದ “ಹಂಗೆ ಮಾಡು ” ಎನ್ನುತ್ತಾ ಗಿರಿಜಮ್ಮಗಂಡನ ಬೈಕ್ ನ ಹತ್ತಿದರು.ನಾಗ ಹಳೇ ತೋಟ, ಹೊಸ ತೋಟ ಎಂದು ಕರೆಯಲು ಕಾರಣವಿತ್ತು. ಹಳೆತೋಟವೆಂದ್ರೆ ಗಿರಿಜಮ್ಮನ ಗಿರಿಜಮ್ಮನ ಅತ್ತೆ ಮಾಡಿದ್ದು. ಅವರಿಗಿದ್ದುದು ಎಂಟೆಕ್ರೆ ಜಮೀನು. ಅದರಲ್ಲಿ ನಾಲ್ಕೆಕರೆ ತೆಂಗಿನ ತೋಟ ಮಾಡಿ ಎರಡು ಎಕ್ರೆಯಲ್ಲಿ  ನೀರುಳ್ಳಿ ಹಾಗು ರಾಗಿ ಹಾಕುತ್ತಿದ್ದರು ಉಳಿದ  ಎರಡು ಎಕ್ರೆಯನ್ನು ಕೋರಿಗೆ ಕೊಟ್ಟಿದ್ದರು.  ಗಂಗಮ್ಮನ  ಗಂಡ ಚಂದ್ರ ಶೇಖರಯ್ಯನವರು ಕಿರಾಣಿ ಅಂಗಡಿ ಇಟ್ಟಿದ್ದರಿಂದ  ತೆಂಗಿನ ಗಿಡ ಇಟ್ಟು ಬೆಳೆಸಿದ್ದೆಲ್ಲಾ ಗಂಗಮ್ಮನೇ. ಹಾಗಾಗಿ ಅದು ಗಂಗಮ್ಮನ ತೋಟವೆ ಸರಿ ಹೊಸ ತೋಟವು  ಗಿರಿಜಮ್ಮ ಬೆಳ್ಸಿದ ತೋಟವಾಗಿತ್ತು  ಗಿರಿಜಮ್ಮನ ತಾಯಿ ಶಾರದಮ್ಮ ಶಿವಮೂರ್ತಿಯನ್ನು ಮದ್ವೆಯಾಗಿ ಗಂಡನ ಮನೆ ಸೇರಿ ಎರಡು ಹೆಣ್ಣುಮಕ್ಕಳ ತಾಯಾಗಿ ಸಂಸಾರ ಬೆಳೆದಿತ್ತು.‌  ಗಂಗಮ್ಮನಿಗೆ  ಶಾರದ,  ಪಾರ್ವತಿ, ಸುವರ್ಣ ಮೂವರು ಹೆಣ್ಣುಮಕ್ಕಳ ನಂತರ ಹುಟ್ಟಿದವನೇ  ರಾಜಶೇಖರ. ಶಾರದಮ್ಮನ ಮಗಳಾದ ಗಿರಿಜಾ ಹುಟ್ಟಿದಾಗ ತಮ್ಮ ರಾಜಶೇಖರನಿಗಿನ್ನು ಐದು ವರ್ಷ.ಗಿರಿಜಳನ್ನು ರಾಜಶೇಖರನಿಗೆ  ಕೊಟ್ಟು ಮದುವೆ  ಮಾಡುವುದು ಎಂದು ತಾಯಿ ಮಗಳ ನಡುವೆ ಅಲಿಖಿತ ಒಪ್ಪಂದವಾಗಿತ್ತು. ಶಿವಮೂರ್ತಿಯವರ  ಕಡೆಯಿಂದಲೂ  ಅನುಮೋದನೆ ದೊರಕಿತ್ತು. ಶಾರದಾಳಿಗೆ ಎರಡನೆಯ ಮಗು ಹೆಣ್ಣೇ ಆಗಿದ್ದು ಅವಳೇ  ಶಾಂಭವಿ. ಶಾರದಮ್ಮನ ಮಗಳು ಗಿರಿಜಳ ಮದುವೆ ಆಗುವ ಎರಡು ವರ್ಷಕ್ಕಿಂತ ಮುಂಚೆ ಗಂಗಮ್ಮನ ತೋಟದ ಪಕ್ಕದಲ್ಲಿ ಇದ್ದ ಜಮೀನು ಮಾರಾಟಕ್ಕಿತ್ತು. ಆಗ ಶಾರದಮ್ಮನವರ  ಒತ್ತಾಸೆಯಿಂದ ಶಿವಮೂರ್ತಿಯವರಿಗೆ ಇಷ್ಟವಿಲ್ಲದಿದ್ದರೂ ಸಹ ಅದನ್ನು ಕೊಂಡ್ಕಂಡಿದ್ದರು. ಶಾರದಳನ್ನು ಮದುವೆಯಾದ ಮೇಲೆ ತಮ್ಮ ವ್ಯವಹಾರಗಳು ಏಳ್ಗೆ ಕಂಡಿವೆ  ಎಂಬುದು ಅವರ ನಂಬಿಕೆ. ಹಾಗಾಗಿ ಹೆಂಡತಿಯ ಮಾತಿಗೆ ಇಲ್ಲವೆನ್ನಲಾಗದೆ ಒಪ್ಪಿದ್ದರು. ಶಾರದಳ ತಂದೆ ಚಂದ್ರಶೇಖರಯ್ಯನವರು ಪಾರ್ಶ್ವವಾಯು  ಪೀಡಿತರಾದ ಮೇಲೆ  ಮಗನ ಮದುವೆ ಮಾಡುವ ಹಂಬಲ ಹೆಚ್ಚಾಗಿದ್ದರಿಂದ ಗಿರಿಜಳ P U C ಮುಗಿದ ತಕ್ಷಣ  ರಾಜಶೇಖರನೊಂದಿಗೆ  ಮದ್ವೆ ನಡೆದಿತ್ತು ರಾಜಶೇಖರನಿಗೆ ಕೊಡುವುದು ಬೇಡವೆನ್ನಲು ಯಾರಿಗೂ ಕಾರಣವೇ ಇರಲಿಲ್ಲ. ರಾಜ್ಯ ಹೆದ್ದಾರಿಯಲ್ಲಿದ್ದ ಹೋಬಳಿ ಕೇಂದ್ರವಾಗಿದ್ದ ದೊಡ್ಡ ಹಳ್ಳಿಯಲ್ಲಿ ಅಂಗಡಿ ವ್ಯವಹಾರದ ಜೊತೆಗೆ ಜಮೀನು, ದೊಡ್ಡಮನೆಯ  ಏಕೈಕ ವಾರಸ್ದಾರ  ಹೆಸರಿಗೆ ತಕ್ಕಂತೆ ಲಕ್ಷಣವಾದ ಗಂಡು. ಚಿಕ್ಕಂದಿನಿಂದಲೇ ಮದುವೆ ನಿಶ್ಚಯವಾಗಿದ್ದರಿಂದ ಗಿರಿಜಳಿಗು ರಾಜಶೇಖರ  ಮಾಮನನ್ನು ಕಂಡರೆ ಇಷ್ಟ. ಶಾರದಮ್ಮನ ತಂಗಿಯರಾದ ಪಾರ್ವತಿ ಹಾಗೂ ಸುವರ್ಣರಿಗೂ ಸಹಾ ಮದುವೆಯಾಗಿ ಒಳ್ಳೆ ಮನೆಗಳನ್ನು ಸೇರಿದ್ದರು. ಮದ್ವೆಯಾದ ವರ್ಷದಲ್ಲೆ ಅನಾರೋಗ್ಯದಿಂದಾಗಿ ಚಂದ್ರಶೇಖರಯ್ಯನವರು ತೀರಿ ಕೊಂಡರು. BSc ಓದಿದ್ದ ರಾಜಶೇಖರ  ಅಂಗಡಿ ಮತ್ತು ತೋಟ ನೋಡಿಕೊಳ್ಳುತ್ತಿದ್ದ. ಜತೆಗೆ ತಾಯಿಯ ಸಹಕಾರ ಇತ್ತು. ಗಿರಿಜಾಳಿಗೆ ಗಂಡು ಮಗುವಾದ್ದರಿಂದ ಮಗುವಿಗೆ ಚಂದ್ರ ಶೇಖರ ಎಂದು ತಾತನ ಹೆಸರನ್ನಿಟ್ಟರು.  ಗಿರಿಜಳ ತಂದೆ ಶಿವಮೂರ್ತಿಯವರ  ವ್ಯವಹಾರ  ದೊಡ್ಡದಾಗಿದ್ದು ಬಿಡುವಿಲ್ಲದ  ದುಡಿಮೆ  ಅವರದಾಗಿತ್ತು. ರಾಜಶೇಖರನ  ಸಲಹೆಯಂತೆ ಗಿರಿಜಾ ಒಮ್ಮೆ ತವರಿಗೆ ಬಂದಾಗ ತಮ್ಮ ತೋಟದ ಪಕ್ಕದಲ್ಲಿರುವ ಜಮೀನನ್ನು ತಾವೇ ಕೊಂಡು ಕೊಳ್ಳುತ್ತೇವೆ ಎಂದು ಅಪ್ಪ ಅಮ್ಮನ ಬಳಿ ಹೇಳಿದಳು ಅಲ್ಲಿಗೆ ಬಂದು ನಾವು ಅ ಜಮೀನನ್ನು ನೋಡಲಾಗದು ನೀವೇ ಮಾಡ್ಕಂಡು ಹೋಗ್ರಿ. ಮುಂದೆ ನಿನಗೆ ಕೊಡುವ ಉದ್ದೇಶವಿಟ್ಟುಕೊಂಡೆ ನಾವು ಅದನ್ನು ಕೊಂಡ್ಕಂಡಿದ್ದು ಆದು ಎಂದೆಂದಿದ್ದರೂ ನಿನ್ನದೆ. ನೀನೇನು ನಮಗೆ ಹಣ ಕೊಡಬೇಕಿಲ್ಲ ಎಂದು ಇಬ್ಬರೂ ತಮ್ಮ ಕೊನೆ ತೀರ್ಮಾನ  ಕೊಟ್ಟಿದ್ದರು. ಮಗುವಿಗೆ  ವರ್ಷ ತುಂಬುವ ವೇಳೆ ಒಂದು ಮಧ್ಯಾಹ್ನ ಗಿರಿಜಾ ಮಗುವಿನೊಂದಿಗೆ ಮಲಗಿದ್ದಾಗ ಅಜ್ಜಿ ಗಂಗಮ್ಮ ಅಯ್ಯೋ ಶಾರದ ಎಂದು ಜೋರಾಗಿ ಕೂಗಿದ ಶಬ್ದ ಕೇಳಿ ಬೆಚ್ಚಿಬಿದ್ದಳು. ತಕ್ಷಣ ಎದ್ದು ಬಂದು ನೋಡಲು  ಆ ಕೂಗನ್ನು ಕೇಳಿ ಗಾಬರಿಯಾಗಿ ಅಂಗಡಿಯಲ್ಲಿದ್ದ ರಾಜ ಶೇಖರನೂ ಒಳಗೆ ಬಂದ. ತಕ್ಷಣ ಪೋನ್ ಕೈಗೆತ್ತಿಕೊಂಡು ಮಾತನಾಡಿದ ಮೇಲೆ ಗಿರಿಜಳ ಬಳಿ ಬಂದು ಅಕ್ಕನಿಗೆ ಹಾರ್ಟ್ಅಟ್ಯಾಕ್ ಆಗಿ ಹೋಗಿಬಿಟ್ಟಳು ಎಂದು ಹೇಳಿದ ಅದನ್ನು ಕೇಳಿದ ಗಿರಿಜಳಿಗೆ ಶಾಕ್.ರಾತ್ರಿ ಮಾತನಾಡಿದ  ಅಮ್ಮ ಈಗಿಲ್ಲ ! ಅಮ್ಮ ಹೋದ ದು:ಖದೊಡನೆ ತಂಗಿ ಶಾಂಭವಿಯ ಮುಂದಿನ ದಿನಗಳನ್ನು ನೆನೆದರೆ ವ್ಯಥೆ ಹೆಚ್ಚಾಗುತ್ತಿತ್ತು. ಶಾಂತವಾದ ಕಲ್ಯಾಣಿಗೆ ಕಲ್ಲೆಸೆದಂತಹ ಪರಿಸ್ಥಿತಿ ಆ ಸಂಸಾರದ್ದು. ತಾಯಿಯ ಸಾವಿಗೆಂದು ಬಂದ ಗಿರಿಜಾ ಹೆಚ್ಚು ಕಡಿಮೆ ಐದು ತಿಂಗಳು ತಂಗಿಯೊಂದಿಗೆ ತವರು ಮನೆಯಲ್ಲೇ ಇದ್ದುಬಿಟ್ಟಳು. ಶಾಂಭವಿಯಂತೂ ಪೂರ್ತಿಯಾಗಿ ಕುಗ್ಗಿಬಿಟ್ಟಳು. ಅಪ್ಪನಿಗೆ ದು:ಖವಿದ್ದರೂ ತೋರ್ಪಡಿಸದೆ ಶಾಂಭವಿಯನ್ನು ಸಂತೈಸುತ್ತಿದ್ದರು. ಆಗ ಶಾಂಭವಿ  SSLC  ಓದುತ್ತಿದ್ದಳು. ಗಂಗಮ್ಮ ಬಂದ್ರೂನೂ ಒಂದು ದಿನ ಇದ್ದರೆ ಹೆಚ್ಚು. ಮಗಳಿಲ್ಲದ ಮನೆಯಲ್ಲಿರಲು ಮನಸ್ಸಿಗೇ ಕಷ್ಟವಾಗುತ್ತಿತ್ತು.ಗಿರಿಜಳಿಗೆ ನೀನು ಬೇಕಾದರೆ ಇನ್ನೂ ಇರು. ನಾನು ಮನೆ ಕಡೆ ನೋಡ್ಕಂತಿನಿ. ನಿನಗಿದು ತವರು ಮನೆ. ನನಗಿದು ಮಗಳ ಮನೆ ಎಂದು ಬಿಟ್ಟಿದ್ದರು  ಈ ನಡುವೆ ಶಿವಮೂರ್ತಿಯ  ಅಕ್ಕ ಗೌರಮ್ಮತಮ್ಮನಿಗೆ ಮರು ಮದ್ವೆ ಆಗಲು ಸಲಹೆ ಕೊಟ್ಟಿದ್ದರು.  ಶಾಂಭವಿಗೆ ಕಷ್ಟವಾಗುತ್ತದೆ ಎಂದು ಅಡುಗೆ ಮಾಡಲು ತಮ್ಮ ಕಡೆಯ  ಹೆಂಗಸನ್ನು ಕರೆ ತಂದುಬಿಟ್ಟಿದ್ದರು.”ಶಾಂಭವಿಗು ಮದುವೆ ಆದ ಮೇಲೆ ನಿನ್ನನ್ನು ಯಾರು ನೋಡ್ಕಂತರೆ. ನಾವೆಲ್ಲಾ  ಎಷ್ಟು ದಿನ ಇರೋಕಾಗುತ್ತೆ. ಮನೆಯಲ್ಲಿ ಶಾಂಭವಿನೂ ಒಬ್ಬಳೆ” ಎಂದು ಹೇಳುತ್ತಲೇ ಇದ್ದರು. ಆಗ ಶಿವಮೂರ್ತಿ  ಏನನ್ನು ಹೇಳದೆ ಮೌನಕ್ಕೆ ಶರಣಾಗುತ್ತಿದ್ದರು. ಗಂಗಮ್ಮ  ಮತ್ತು ರಾಜಶೇಖರ ಇಬ್ಬರೂ ಸೇರಿ  ಗಿರಿಜಳಿಗೆ  ” ನೀನು ಮನೆಗೆ ಬಂದು ಬಿಡು. ಆಗ ಮನೆ ಕಡೆ ನೋಡಿಕೊಳ್ಳಲು  ಕಷ್ಟವಾದಾಗ ವಿಧಿಯಿಲ್ಲದೆ  ಮದುವೆಗೆ ಒಪ್ಕಳ್ಳುತ್ತಾರೆ” ಎಂದು ಹೇಳಿದರು. ಆಗ ಗಿರಿಜಾ “ಶಾಂಭವಿ ನಾನಿನ್ನು ಊರಿಗೆ ಹೊರಡುತ್ತೇನೆ” ಎಂದೊಡನೆ ಅಕ್ಕನನ್ನು ತಬ್ಬಿ ಕೊಂಡು ಅತ್ತುಬಿಟ್ಟಳು. ಅವಳೊಡನೆ ಗಿರಿಜಳೂ ಸಹಾ. ಅಂದು ಶಿವಮೂರ್ತಿ ಮನೆಗೆ  ಬಂದು ಊಟ ಮಾಡಿದ ಮೇಲೆ “ಅಪ್ಪಾ ಅಕ್ಕ ಊರಿಗೆ  ಹೋಗ್ತಳಂತೆ. ಇನ್ನು ಸ್ವಲ್ಪ ಸ್ವಲ್ಪ ದಿನ ಇರು ಅನ್ನಪ್ಪ” ಎಂದು ಅತ್ಕಂಡು ಹೇಳುತ್ತಿದ್ದರೆ ನೋಡಿದವರ ಕಣ್ಣಲ್ಲೂ ಕಣ್ಣೀರ ಧಾರೆ ಹರಿದುಬಿಡುತ್ತಿತ್ತು ಕಣ್ದುಂಬಿದ ಶಿವಮೂರ್ತಿ ಅವಳ ತಲೆ ಸವರುತ್ತ “ಇರ್ತಳೆ  ಸುಮ್ನಿರು ನಾನು ಅವಳಿಗೆ ಹೇಳ್ತಿನಿ”ಎಂದು ಸಂತೈಸಿದರು ” ಗಿರಿಜ ಇಷ್ಟೇ ದಿನ ಇದ್ದೀಯಾ ಇನ್ನು ಸ್ವಲ್ಪ ದಿನ ಇರಮ್ಮ ನಾನು ರಾಜಶೇಖರಂಗೆ ಹೇಳ್ತೀನಿ”ಎಂದಾಗ ಅಳುತ್ತಲೇ “ಅಯ್ತಪ್ಪ” ಎಂದು ಗಿರಿಜ ಹೇಳಿದ ಮೇಲೆ ಶಾಂಭವಿಯು  ಗಂಗಮ್ಮನಿಗೆ ಫೋನ್ ಮಾಡಿ ” ಅಜ್ಜಿ ಅಕ್ಕ ಇನ್ನೂ ಸ್ವಲ್ಪ ದಿನ ಇಲ್ಲೆ ಇರಲಿ” ಆ ಕಡೆಯಿಂದ ಗಂಗಮ್ಮನೂ ಅಳುತ್ತಾ “ಆಯ್ತು ಪುಟ್ಟಿ” ಎನ್ನದೆ ವಿಧಿಯಿರಲಿಲ್ಲ. ಮೊಮ್ಮಕ್ಕಳನ್ನು ಸಮಾಧಾನ ಮಾಡಲೆಂದು ಮಾರನೆಯ ದಿನವೇ ಬಂದು ಎರಡು ದಿನವಿದ್ದು ಸಮಯ ನೋಡ್ಕಂಡು ತಂದೆಯನ್ನು ಮರು ಮದುವೆಗೆ ಒಪ್ಪಿಸುವಂತೆ ಸಲಹೆ ನೀಡಿ ಹೊರಟು ಬಂದಿದ್ದರು. ಒಂದು ವಾರ ಕಳೆದ ನಂತರ ಶಿವಮೂರ್ತಿ ರಾತ್ರಿ ಊಟ ಮಾಡಿದ ಮೇಲೆ ವ್ಯವಹಾರಕ್ಕೆ ಸಂಬಂಧಿಸಿ ಫೋನ್ ಮಾಡಿ ಮಾತನಾಡುತ್ತಿದ್ದರು.ಆಗ ಅಲ್ಲಿಗೆ ಬಂದ ಗಿರಿಜಾ ಶಾಂಭವಿ ಇಬ್ಬರು ಕುಳಿತರು. ಆಗ ಶಿವಮೂರ್ತಿ “ಏನ್ರಮ್ಮ” ಎನ್ನುತ್ತಾ ಪಕ್ಕದಲ್ಲೇ ಕುಳಿತರು. ಆಗ ಗಿರಿಜಾ ” ನಾನು ಊರಿಗೆ ಹೋಗ್ಬೇಕಿತ್ತಪ್ಪ. ಬಹಳ ದಿನ ಆಯ್ತು” ಎಂದಳು.ಆಗ ಶಿವಮೂರ್ತಿ “ನಾನು ರಾಜಶೇಖರನ ಹತ್ರ ಮಾತಾಡಿದೀನಿ. ಸ್ವಲ್ಪ ದಿನ ಇರಮ್ಮ” ಎಂದಾಗ ಗಿರಿಜ “ಅಪ್ಪಾ, ಅಜ್ಜಿ  ಆತ್ತೆ ಮಾವ ಎಲ್ಲರೂ ನೀನು  ಮದುವೆ ಆಡಬೇಕು ಅಂತಾ ಹೇಳ್ತಾರೆ.  ಶಾಂಭವಿದು ಮದ್ವೆ ಆದ ಮೇಲೆ ನಿಂಗೆ ಕಷ್ಟ ಆಗುತ್ತೆ. ಯಾರೂ ಬಂದು ಇಲ್ಲಿರಕ್ಕೆ ಆಗಲ್ಲ.ಎಲ್ರಿಗೂ ಕಷ್ಟ ಶಾಂಭವಿನೂ ಒಬ್ಬಳೆ ಇದಾಳೆ “ ” ಅಲ್ಲಮ್ಮ ನಲವತ್ತೈದು ವರ್ಷ ಆಗೈತೆ ನನಗೆ ಈಗೆಂಥ  ಮದ್ವೆ” ಎಂದರು ಶಿವಮೂರ್ತಿ.” ನೀನು ಒಪ್ಕೊಳ್ಳಪ್ಪ ಅದನ್ನೆಲ್ಲಾ ಅತ್ತೆ ನೋಡ್ಕಂತರೆ” ಎಂದಳು ಗಿರಿಜ. ಆಗ ಶಿವಮೂರ್ತಿ” ನೀನೇನೋ ಗಂಡನ ಮನೆಗೆ ಹೋಗ್ತೀಯ ಶಾಂಭವಿಗೆ ಕಷ್ಟ ಆಗುತ್ತಮ್ಮ ಮುಂದೆ. ಮಲತಾಯಿನ ತಂದು ಬಿಟ್ಟ  ಅಂತ ಆ ಹುಡುಗಿ ನೊಂದ್ಕಬಾರದು.”  ಶಿವಮೂರ್ತಿ ಹೇಳಿದರು. ಅಲ್ಲಿಯವರೆಗೆ ಸುಮ್ಮನಿದ್ದ  ಶಾಂಭವಿ “ಅಂಗೆಲ್ಲ ಏನೂ ಆಗಲ್ಲಪ್ಪ. ನಾನು ಅಡ್ಜೆಸ್ಟ್ ಮಾಡ್ಕಂತಿನಿ”ಎಂದಳು. “ಸರಿ ಆಯ್ತು.  ನಿಮ್ಮತ್ತೆಗೂ ಅಜ್ಜಿಗೂ ನೀವೇ  ಹೇಳ್ರಿ” ಎಂದು ಮಲಗಲು ಹೋದರು. ಮಾರನೇ ದಿನವೇ ಗಿರಿಜಾ ಗೌರತ್ತೆಗೆ ಫೋನ್ ಮಾಡ್ಬಿಟ್ಟು ಕರೆಸಿಕೊಂಡಳು. ಗೌರತ್ತೆ ಒಂದು ಸಂಬಂಧವನ್ನು ಆಗ್ಲೇ ಮನದಲ್ಲೆ ಲೆಕ್ಕಾಚಾರ ಹಾಕಿಟ್ಟು ಕೊಂಡಿದ್ದರು. ಅವರಿಗೆ ಪರಿಚಯವಿದ್ದ ಬಡ ಕುಟುಂಬವೊಂದರ  ಹುಡುಗಿಯೇ ಮಹೇಶ್ವರಿ. ಗಂಡ ತೀರಿಕೊಂಡ ಮೇಲೆ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿದ  ರಾಜಮ್ಮ ಇವರಿಗೆ ಹಿಂದಿನ ಪರಿಚಯ. ಮಹೇಶ್ವರಿಯು  P U C ಮುಗಿಸಿ ಟೈಲರಿಂಗ್ ಕಲಿತು ಸಂಪಾದನೆ ಮಾಡುತ್ತಿದ್ದಳು. ಅವಳ ಇನ್ನಿಬ್ಬರು ತಂಗಿಯರು ಕೂಡಾ ಟೈಲರಿಂಗ್ ಕಲಿತಿದ್ದರು. ಮೂವರು  ವೃತ್ತಿ ಪರಿಣತಿ ಪಡೆದ ಕಾರಣ ಒಳ್ಳೆಯ ದುಡಿಮೆಯಿತ್ತು ಮಹೇಶ್ವರಿಗೆ ವಯಸ್ಸು ಇಪ್ಪತ್ತೆಂಟಾದರೂ ಮದ್ವೆ ಇಲ್ಲ ಯಾರೂ ಮುಂದೆ ನಿಂತು ಗಂಡು ನೋಡದೆ ಇರುವುದರ  ಕಾರಣವೋ ಅಥವ ಕಂಕಣ ಬಲ ಕೂಡಿ ಬರದಿರುವ ಕಾರಣವೋ ಏನೋ ಮದ್ವೆ ಆಗಿರಲಿಲ್ಲ. ಶಿವಮೂರ್ತಿ ಅಕ್ಕ ಗೌರಮ್ಮ ರಾಜಮ್ಮನನ್ನು ಕರೆಸಿ ವಿಷಯ ತಿಳಿಸಲು  ತಮ್ಮ ಬಡತನದ ಇತಿಮಿತಿಗಳನ್ನರಿತಿದ್ದ  ರಾಜಮ್ಮ ಒಪ್ಪಿ ಕೊಂಡರು. ಪರಿಸ್ಥಿತಿಯ ಅರಿವಿದ್ದ ಮಹೇಶ್ವರಿಯೂ ಸಹ ಒಪ್ಪಿಕೊಂಡಳು. ತಮ್ಮನ ಮನೆಗೆ ಬಂದ ಗೌರಮ್ಮನವರು ರಾಜಮ್ಮನಿಗೆ ಪೋನ್ ಮಾಡಿ ಮಗಳನ್ನು ಕರೆದುತರಲು

Read Post »

You cannot copy content of this page

Scroll to Top